ಮೊದಲ ಬಾರಿಗೆ ಅಪ್ಪು ಬಗ್ಗೆ ಮಾತನಾಡಿದ ರಮೇಶ್ ಅರವಿಂದ್. ಕೊನೇ ದಿನದ ಹಿಂದಿನ ರಾತ್ರಿ ಏನಾಗಿತ್ತು ಅಂತೇ ಗೊತ್ತೇ?? ನಡೆದಿದ್ದು ಕೇಳಿ ಕಣ್ಣೀರು ಹಾಕಿದ ಫ್ಯಾನ್ಸ್.

104

ಇದೇ ಮೊದಲ ಬಾರಿಗೆ ನಟ ರಮೇಶ್ ಅರವಿಂದ್ ಅಪ್ಪು ಹೋಗುವ ಹಿಂದಿನ ದಿನ ನಡೆದ ಘಟನೆ ಕುರಿತು ಮಾತನಾಡಿದ್ದಾರೆ. ಹಿಂದಿನ ದಿನ ಅಪ್ಪು ಜೊತೆ ಎರಡು ಘಂಟೆಗಳಿಗೂ ಹೆಚ್ಚು ಜೊತೆಗಿದ್ದರು. ಆಗ ಪುನೀತ್ ಏನು ಹೇಳಿದರು, ಏನೆಲ್ಲ ನಡೆಯಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ. “ಅವರು ವಿಧಿವಶರಾಗುವ ಹಿಂದಿನ ದಿನ ನಾವೆಲ್ಲಾ ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದೆವು, ಸುಮಾರು 2 ಗಂಟೆ ಸಮಯ ಅವರೊಂದಿಗೆ, ಮಾತನಾಡುತ್ತಾ, ಹಾಡುತ್ತಾ ಊಟ ಮಾಡಿ ನಗುತ್ತಾ ಕಾಲ ಕಳೆದವು, ಆ ವೇಳೆ ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ತೋರಿರಲಿಲ್ಲ. ಪಾರ್ಟಯಲ್ಲಿ ಅವರು ಅಭಿನಯಿಸಿದ ಡಾಕ್ಯುಮೆಂಟರಿ ಕುರಿತಾಗಿ ವೀಡಿಯೋ ಕೂಡ ತೋರಿಸಿದ್ದರು, ಇದನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಅವರು ಹೇಳಿದರು. ನಾನು ಟೈಟಲ್ ಬಗ್ಗೆ ಅವರನ್ನು ಕೇಳಿದಾಗ ಗಂಧದಗುಡಿ ಎಂಬ ಕಾರ್ಡ್ ತೋರಿಸಿದರು ಎಂದು ರಮೇಶ್ ಅರವಿಂದ್ ಅವರು ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಗುರುಕಿರಣ್ ಬರ್ತಡೆ ಪಾರ್ಟಿಯಲ್ಲಿ ಮಕ್ಕಳ ವಿಷಯವಾಗಿ ಮಾತನಾಡಿದರು, ದೊಡ್ಡ ಮಗಳು ನ್ಯೂಯಾರ್ಕ್ ನಲ್ಲಿ ಡಿಸೈನ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಿದರು, ಇನ್ನೂ ಎರಡನೇಯ ಮಗಳ ಬಗ್ಗೆ ಮಾತನಾಡಿದ ಅವರು ನಾನು ಬೆಂಗಳೂರಿನಲ್ಲಿದ್ದಾಗಲೆಲ್ಲಾ ಆಕೆಯನ್ನು ಡ್ರೈವ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. 60 ಕಿಮೀ ಸೈಕಲ್ ಓಡಿಸುವುದಾಗಿ ಹೇಳಿದ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳ ಬಗ್ಗೆ ಮಾತನಾಡಿದೆವು. ಜೊತೆಗೆ ಸಾಕು ಪ್ರಾಣಿಗಳ ಬಗ್ಗೆ ಜೋಕ್ ಮಾಡಿದೆವು, ಅದಾದ ನಂತರ ಬಾದಾಮಿ ಬಿರಿಯಾನಿ ತಿಂದು ಬಾಯ್ ಬಹೇಳಿದ ಮನುಷ್ಯ ಬೆಳಗ್ಗೆ ಇಲ್ಲ ಎಂದರೇ ನಂಬುವುದಾದರೂ ಹೇಗೆ ಎಂದಿದ್ದಾರೆ. ಒಬ್ಬ ವ್ಯಕ್ತಿ ನಮಗೆ ಇಷ್ಟವಾಗ್ತಾರೆ ಅಂದರೆ ಯಾವುದೋ ಒಂದು ಕಾರಣಕ್ಕೆ ಇಷ್ಟವಾಗೋದಲ್ಲ, ಅದಕ್ಕೆ ಹಲವು ಕಾರಣಗಳಿರುತ್ತವೆ.

ಅಪ್ಪು ನಮಗೆ ಇಷ್ಟವಾಗೋದಕ್ಕೋ ಅವರ ನಟನೆ, ಡ್ಯಾನ್ಸ್‌, ವಿನಯ, ಪ್ರೀತಿ, ಸರಳತೆ, ಮನೆತನ ಎಲ್ಲವೂ ಕಾರಣ. ಅಂಥಾ ಅಪ್ಪುವಿಗೆ, ಅವರ ನಗುವಿಗೆ, ಜೊತೆಗೆ ಕಳೆದ ನೆನಪುಗಳಿಗೆ ನಮನಗಳು ಎಂದು ರಮೇಶ್‌ ನುಡಿದರು.ಅವರೊಂದಿಗೆ ಹಿಂದಿನ ದಿನ ಕಳೆದ ನೆನಪುಗಳು ಮಾತ್ರ ನಮ್ಮೊಂದಿಗಿವೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಅವರಾಗಿದ್ದರು, ನಾವು ಮತ್ತು ಅವರ ಕುಟುಂಬದವರು ಹಲವಾರು ಬಾರಿ ಭೇಟಿಯಾಗಿದ್ದೇವೆ ಇನ್ನುಮುಂದೆ ಅವೆಲ್ಲಾ ಕೇವಲ ನೆನಪು ಮಾತ್ರ, ಅಪ್ಪುವಿನ ನಗುವೊಂದೆ ಅಮರ. ಅಭಿಮಾನಿಗಳಿಗೆ ನನ್ನದೊಂದು ಸಂದೇಶವಿದೆ. ಅಗಲಿದ ಆತ್ಮಕ್ಕೆ ನೀವು ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ ನಟ ಅಥವಾನಟಿಯ ಕನಿಷ್ಠ ಒಂದು ಶ್ಲಾಘನೀಯ ಗುಣವನ್ನು ಆರಿಸಿ ಮತ್ತು ಅದನ್ನು ನಿಮ್ಮದಾಗಿಸಿಕೊಳ್ಳಬೇಕು. ಅವರಂತೆ ನಾವು ಬದುಕಬೇಕು ಎಂದು ಹೇಳಿದ್ದಾರೆ.