ಮತ್ತೊಮ್ಮೆ ತೆಲುಗು ಚಿತ್ರರಂಗವನ್ನು ಶೇಕ್ ಮಾಡಿದ ಪವಿತ್ರ ಹಾಗೂ ನರೇಶ್ ರವರ ಪ್ರೀತಿ: ತೆಲುಗಿನಲ್ಲಿ ಏನಾಗುತ್ತಿದೆ ಗೊತ್ತೇ?? ಮುಗಿಯಿತೇ ಪ್ರೇಮ ಕಥೆ??

332

ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ಸಿನಿ ಇಂಡಸ್ಟ್ರಿಯಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಅಫೇರ್ ಇತ್ತೀಚೆಗೆ ಚರ್ಚೆಯಾಗಿದೆ. ಇವರಿಬ್ಬರ ಸಂಬಂಧದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಮಾಧ್ಯಮಗಳಲ್ಲೂ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ನರೇಶ್ ಪವಿತ್ರಾ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದರು. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ. ಮದುವೆಯಾಗಿಲ್ಲ. ಅವರನ್ನು ಬೆಂಬಲಿಸಲು ಅವರು ನನಗೆ ಹೇಳಿದರು ಎಂದಿದ್ದರು. ಆದರೆ ಇತ್ತೀಚೆಗೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಂಬಂಧದ ಮತ್ತೊಂದು ಕುತೂಹಲಕಾರಿ ಸುದ್ದಿ ವೈರಲ್ ಆಗಿದೆ. ಪವಿತ್ರಾಳನ್ನು ಬಿಟ್ಟ ನರೇಶ್ ಮತ್ತೊಬ್ಬ ಮಹಿಳೆಗೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ.

ನರೇಶ್ ಆಕೆಗೆ ಗುಡ್ ಬೈ ಹೇಳಿದ್ದಾರೆ ಎನ್ನಲಾಗುತ್ತಿದೆ. ನರೇಶ್ ಪವಿತ್ರ ಲೋಕೇಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಈಗ ಇವರು ಬೇರ್ಪಟ್ಟಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ನರೇಶ್ ಈಗಾಗಲೇ ಮೂರು ಮದುವೆಯಾಗಿದ್ದಾರೆ. ಈ ಹಿಂದೆ ಅವರು ಪವಿತ್ರಾ ಅವರನ್ನು ನಾಲ್ಕನೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಈಗ ಅವರಿಬ್ಬರ ಸಂಬಂಧ ಒಪ್ಪಂದದ ಪ್ರಕಾರವೇ ಆಗಿದೆ ಎಂದು ತಿಳಿದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹಲವು ವಿವಾದಕ್ಕೆ ಕಾರಣವಾಗಿದ್ದ ಈ ಜೋಡಿ ಇನ್ನೇನು ಮದುವೆಯಾಗಲಿದೆ ಎಂದೇ ಹೇಳಲಾಗಿತ್ತು. ಒಂದೇ ಮನೆಯಲ್ಲಿಯೇ ವಾಸಿಸುತ್ತಿದ್ದಾರೆ ಎಂಬ ಪುಕಾರು ಸಹ ಹಬ್ಬಿತ್ತು. ಆದರೆ, ಆ ಬಗ್ಗೆ ಯಾವುದೇ ನಿಖರ ಉತ್ತರ ಮಾತ್ರ ಹೊರಬಿದ್ದಿರಲಿಲ್ಲ. ಈ ನಡುವೆ ಹೊಟೇಲ್‌ನಲ್ಲಿ ನರೇಶ್‌ ಪತ್ನಿ ರಮ್ಯಾ ರಘುಪತಿ ಕೈಗೆ ಸಿಕ್ಕು ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು ಈ ಜೋಡಿ. ಒಂದೇ ರೂಮ್‌ನಲ್ಲಿಯೂ ಈ ಜೋಡಿ ಕಾಣಿಸಿಕೊಂಡು ವಿವಾದಕ್ಕೆ ಒಗ್ಗರಣೆ ಹಾಕಿತ್ತು.

ಒಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಈ ಜೋಡಿ, ಇತ್ತೀಚಿನ ದಿನಗಳಲ್ಲಿ ಒಟ್ಟಿಗೆ ನಟಿಸಿಲ್ಲ. ಅಷ್ಟೇ ಅಲ್ಲದೆ, ಇದೇ ಜೋಡಿಯ ಬಗ್ಗೆ ಟಾಲಿವುಡ್‌ ಅಂಗಳದಿಂದ ಹೊಸ ಸುದ್ದಿಯೊಂದು ತೇಲಿ ಬಂದಿದೆ. ಅದೇನೆಂದರೆ, ಇವರಿಬ್ಬರ ನಡುವೆ ಬ್ರೇಕಪ್‌ ಆಗಿದೆ ಎಂಬುದು! ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿನಂತೆ, ಇಷ್ಟು ದಿನ ಇರದ ಈ ವಿಚಾರ ಇದೀಗ ಟಾಲಿವುಡ್‌ನಲ್ಲಿ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಸದ್ಯದ ತೆಲುಗು ಮಾಧ್ಯಮಗಳ ಮಾಹಿತಿ ಪ್ರಕಾರ, ಪವಿತ್ರಾ ಲೋಕೇಶ್‌ ಮತ್ತು ನರೇಶ್‌ ನಡುವೆ ಮೊದಲಿನ ಪ್ರೀತಿ ಉಳಿದಿಲ್ಲವಂತೆ. ಇಬ್ಬರ ನಡುವೆ ಮನಸ್ತಾಪ ಮನೆ ಮಾಡಿದೆಯಂತೆ. ಮುನಿಸು ಆವರಿಸಿದೆಯೆಂತೆ. ಮೊದಲಿನ ಪ್ರೀತಿಯ ಸಂಬಂಧ ಇಬ್ಬರಲ್ಲಿಯೂ ಕಾಣಿಸುತ್ತಿಲ್ಲ. ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ ಎಂಬ ಪುಕಾರು ಹಬ್ಬಿದೆ. ಆದರೆ, ಈ ಬಗ್ಗೆ ಇಬ್ಬರೂ ತುಟಿ ಬಿಚ್ಚಿಲ್ಲ.