ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ಕಾಂತಾರ ಸಿನೆಮಾ ನೋಡಿ ನವಾಜ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ?

36,702

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿ, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಇನ್ನೂ ತೆಲುಗಿನಲ್ಲಿ ಅ.15ರಂದು ಮತ್ತು ಹಿಂದಿಯಲ್ಲಿ ಇದೇ ಅ.14ರಂದು ತೆರೆಗೆ ಬರಲಿದೆ. ಪರರಾಜ್ಯದಲ್ಲಿ ಕನ್ನಡ ಸಿನಿಮಾಗೆ ನೋಡೋಕೆ ಹಿಂದೆ ಮುಂದೆ ನೋಡುವ ಜನ, ಇದೀಗ ಕಾಂತಾರ’ ಚಿತ್ರವನ್ನ ನೋಡಲು ಮುಗಿಬಿದ್ದು ನೋಡ್ತಿದ್ದಾರೆ. ಈ ಮಧ್ಯೆ ಮುಂಬೈನ ಪ್ರಸಿದ್ಧ ಥಿಯೇಟರ್‌ನಲ್ಲಿ ಡಬ್ ಆಗದೇ ಮೂಲ ಭಾಷೆಯಲ್ಲಿ ರಿಲೀಸ್ ಆಗಿರುವ ಮೊದಲ ಚಿತ್ರವಾಗಿದೆ. ಇನ್ನು ಈ ಚಿತ್ರದ ಬಗ್ಗೆ ಸಿನಿಮಾದ ಕುರಿತು ಪ್ರಾಸಭರಿತ ಹಾಡು ಕಟ್ಟಿ, ಪಂಚಿಂಗ್ ಲೈನ್ಸ್ ಮೂಲಕ ಚಿತ್ರ ವಿಮರ್ಶೆ ಮಾಡುವ ನವಾಜ್ ಮಾತನಾಡಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ತಕ್ಷಣ ಇನ್ನಷ್ಟು ಖ್ಯಾತಿ ಪಡೆದಿರುವ ಅವರು ಕಾಂತಾರ ಚಿತ್ರದ ಕುರಿತು ಏನು ಹೇಳಿದ್ದಾರೆ ನೀವೇ ನೋಡಿ.

ಕಳೆದ ವಾರ ಬಿಗ್ ಬಾಸ್ ಮನೆಯಿಂದ ಸೈಕ್ ಹುಡುಗ ಎಂದೇ ಖ್ಯಾತಿ ಪಡೆದುಕೊಂಡಿದ್ದ ಸೈಕ್ ನವಾಜ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸಿನಿಮಾಗಳು ಬಿಡುಗಡೆಯಾದರೆ ಆ ಸಿನಿಮಾ ಹೇಗಿತ್ತು ಎಂದು ಸಾಕಷ್ಟು ಜನ ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ. ಹಾಗೆ ಆ ಸಿನಿಮಾ ಇಷ್ಟವಾದರೆ, ಆ ಸಿನಿಮಾದ ಪಂಚಿಂಗ್ ಡೈಲಾಗ್ ಕೂಡ ಬಹಳ ಫ್ಹೇಮಸ್ ಆಗುತ್ತದೆ. ಇನ್ನು ಇದೆ ರೀತಿ ಬಿಡುಗಡೆಯಾದ ಸಿನಿಮಾಗಳನ್ನು ನೋಡಿ ಅದರ ಪಂಚಿಂಗ್ ಡೈಲಾಗ್ ಗಳನ್ನು ಹೇಳುವ ಮೂಲಕವೇ ಜನಪ್ರಿಯತೆ ಪಡೆದುಕೊಂಡಂತಹ ಹುಡುಗ ನವಾಜ್. ಇನ್ನು ಸಿನಿಮಾಗಳ ಪಂಚಿಂಗ್ ಡೈಲಾಗ್ ಹೊಡೆಯುತ್ತಾ ಬಹಳ ಫ್ಹೇಮಸ್ ಆದ ನವಾಜ್ ಡಾಲಿ ಧನಂಜಯ, ನವರಸ ನಾಯಕ ಜಗ್ಗೇಶ್ ಹೀಗೆ ಹಲವಾರು ಕಲಾವಿದರಿಂದ ಸಾಕಷ್ಟು ಮೆಚ್ಚುಗೆ ಸಹ ಪಡೆದುಕೊಂಡಿದ್ದರು. ಸೈಕ್ ನವಾಜ್ ಎಂದೇ ಸೋಷಿಯಲ್ ಮಿಡಿಯಾದಲ್ಲಿ ಗುರುತಿಸಿಕೊಂಡಿರುವ ನವಾಜ್ ಸಾಕಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಸೋಷಿಯಲ್ ಮಿಡಿಯಾದಲ್ಲಿ ಬಹಳ ಹೈಪ್ ಕ್ರಿಯೇಟ್ ಮಾಡಿದ್ದ ನವಾಜ್ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟರು. ಇನ್ನು ನವಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೇಲೆ ಅವರ ಫಾಲೋವರ್ಸ್ ಗೆ ಅವರ ಆಟದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ ನವಾಜ್ ಇದೀಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ನವಾಜ್ ಮೊದಲ ವಾರದಲ್ಲಿ ಅರುಣ್ ಸಾಗರ್ ಹೊರತು ಪಡಿಸಿ ಬೇರೆ ಯಾರ ಜೊತೆ ಸಹ ಬೆರೆತಿರಲಿಲ್ಲ. ಇನ್ನು ಮೊದಲ ವಾರದಲ್ಲಿಯೇ ನವಾಜ್ ತಮ್ಮ ಸಹ ಸ್ಪರ್ಧಿ ಐಶ್ವರ್ಯ ಪಿಸ್ಸೆ ಅವರಿಗೆ ಪ್ರಪೋಸ್ ಸಹ ಮಾಡಿದ್ದರು. ಇದೀಗ ಕಾಂತಾರ ಚಿತ್ರದ ಬಗ್ಗೆ ಮಾತನಾಡಿರುವ ಅವರು, ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣವೇ ಕಾಂತಾರ ಸಿನೆಮಾ ನೋಡಿ ನವಾಜ್ ಹೇಳಿದ್ದೆ ಬೇರೆ. ಏನು ಹೇಳಿದ್ದಾರೆ ಗೊತ್ತೇ? ಬಹಳ ಚೆನ್ನಾಗಿದೆ. ನಾನು ಎಂದಿಗೂ ಇಂತಹ ಸಿನೆಮಾವನ್ನು ನೋಡಿಯೇ ಇಲ್ಲ. ಕನ್ನಡಕ್ಕೆ ಮಾತ್ರ ಅಲ್ಲ, ಇದು ಎಲ್ಲಾ ಸಿನಿಮಾಗಳಿಗೂ ಕೂಡ ಟಾಪ್ ಎಂದು ಹೇಳಿದ್ದಾರೆ.