ನೋಡಲು ಸುಂದರ, ಒಳ್ಳೆಯ ಹುಡುಗಿ ಎಂದು ಇಷ್ಟಪಟ್ಟು ಮದುವೆಯಾದ, ಆದರೆ ಆಕೆ ದಾರಿ ತಪ್ಪಿದ್ದಕ್ಕಾಗಿ ಏನಾಗಿ ಹೋಯಿತು ಗೊತ್ತೇ??ದೇಶವನ್ನೇ ಶೇಕ್ ಮಾಡಿದ ಪ್ಲಾನ್.

702

ನಮಸ್ಕಾರ ಸ್ನೇಹಿತರೇ ನೀವು ದಾಂಪತ್ಯ ಜೀವನದಲ್ಲಿ ನಡೆದಿರುವಂತಹ ಹಲವಾರು ಪ್ರಕರಣಗಳನ್ನು ಇತ್ತೀಚಿನ ದಿನಗಳಲ್ಲಿ ಕೇಳಿರಬಹುದು. ಆದರೆ ಇಂದು ನಾವು ಹೇಳುತ್ತಿರುವ ವಿಚಾರ ಖಂಡಿತವಾಗಿ ಅವುಗಳಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ ಹಾಗೂ ಹೀಗೂ ಕೂಡ ಪ್ಲಾನ್ ಮಾಡಬಹುದು ಎನ್ನುವುದರ ಕುರಿತಂತೆ ನಿಮಗೆ ಆಶ್ಚರ್ಯವನ್ನು ಮೂಡಿಸುವಂತೆ ಮಾಡುತ್ತದೆ.

ಸ್ವಾತಿ ರೆಡ್ಡಿ ಹಾಗೂ ಸುಧಾಕರ್ ರೆಡ್ಡಿ ಎನ್ನುವ ದಂಪತಿಗಳು ಆಂಧ್ರದಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಸಂಸಾರವನ್ನು ಮಾಡಿಕೊಂಡು ನೆಲೆಸಿದ್ದರು. ಸುಧಾಕರ್ ರೆಡ್ಡಿ ಕ್ರಷರ್ ವ್ಯಾಪಾರಿಯಾಗಿದ್ದ. ಒಮ್ಮೆ ಸ್ವಾತಿ ರೆಡ್ಡಿ ತನಗೆ ಸೊಂಟದ ನೋವು ಎಂಬುದಾಗಿ ಗೋಗರೆಯಲು ಆರಂಭಿಸುತ್ತಾಳೆ. ಸುಧಾಕರ್ ರೆಡ್ಡಿ ತನ್ನ ಹೆಂಡತಿಯ ಈ ಸಮಸ್ಯೆ ಪರಿಹರಿಸಲು ಹಲವಾರು ಕಡೆ ಔಷಧಿಯನ್ನು ಕೂಡ ಮಾಡಿಸುತ್ತಾನೆ ಆದರೆ ಯಾವುದೇ ಪ್ರಯೋಜನ ಬರುವುದಿಲ್ಲ. ನಂತರ ಅಲ್ಲೇ ಹತ್ತಿರದಲ್ಲಿದ್ದ ಫಿಸಿಯೋ ಥೆರಪಿಸ್ಟ್ ಆಗಿರುವ ರಾಜೇಶ್ ಬಳಿ ಕರೆದುಕೊಂಡು ಹೋಗುತ್ತಾನೆ.

ವೈದ್ಯಕೀಯ ತಪಾಸಣೆ ಹಿನ್ನೆಲೆಯಲ್ಲಿ ಆಗಾಗ ಸುಧಾಕರ್ ತನ್ನ ಪತ್ನಿ ಸ್ವಾತಿಯನ್ನು ರಾಜೇಶ್ ಬಳಿಗೆ ಕರೆದುಕೊಂಡು ಹೋಗುತ್ತಲೇ ಇದ್ದ. ಇದು ಸ್ವಾತಿ ಹಾಗೂ ರಾಜೇಶ್ ನಡುವೆ ಬೇರೆಯದೇ ಸಂಬಂಧ ಪ್ರಾರಂಭವಾಗುವುದನ್ನು ಮಾಡುತ್ತದೆ. ಇದು ಎಷ್ಟರ ಮಟ್ಟಿಗೆ ಹೋಯಿತೆಂದರೆ ಬಿಡುವು ಸಿಕ್ಕಾಗಲೆಲ್ಲಾ ಸ್ವಾತಿ ರಾಜೇಶ್ ನ ಕ್ಲಿನಿಕ್ ಗೆ ತೆರಪಿ ನೆಪದಲ್ಲಿ ಬಂದು ಹೋಗುವುದನ್ನು ಮಾಡುತ್ತಲೇ ಇದ್ದಳು. ಆ ಕಡೆ ಗಂಡ ಸುಧಾಕರ್ ತನ್ನ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದ. ಈ ಕಡೆಗೆ ಅತ್ತೆ ಮಾವಂದಿರಿಗೆ ಕೂಡ ಇದೇ ನೆಪವನ್ನು ಹೇಳಿ ಹೋಗುತ್ತಿದ್ದಳು. ಇಷ್ಟು ಮಾತ್ರವಲ್ಲದೆ ತನ್ನ ಮಕ್ಕಳು ಈ ಕಾರ್ಯಕ್ಕೆ ಅಡ್ಡಿಯಾಗಬಾರದು ಎನ್ನುವ ಕಾರಣಕ್ಕಾಗಿ ಮಕ್ಕಳನ್ನು ತವರುಮನೆಗೆ ಕೂಡ ಕಳುಹಿಸಿಕೊಡುತ್ತಾಳೆ.

ಈ ವಿಚಾರ ಅಷ್ಟೊಂದು ದಿನ ಗುಟ್ಟಾಗಿ ಉಳಿದುಕೊಂಡಿರಲಿಲ್ಲ. ಸ್ವಾತಿ ಒಬ್ಬಳೇ ಕ್ಲಿನಿಕ್ಕಿಗೆ ಹೋಗುತ್ತಿರುವುದು ಸುಧಾಕರನ ಗಮನಕ್ಕೆ ಕೂಡ ಬಂದಿತ್ತು. ಈ ಕುರಿತಂತೆ ಎಷ್ಟೇ ಹೇಳಿದರೂ ಕೂಡ ಅದನ್ನು ಕೇಳುವ ಹೆಣ್ಣು ಸ್ವಾತಿ ಆಗಿರಲಿಲ್ಲ. ಕೊನೆಗೆ ಈ ವಿಚಾರದಿಂದ ರೋಸಿಹೋದ ಸುಧಾಕರ್ ಮಧ್ಯಕ್ಕೆ ದಾಸನಾಗುತ್ತಾನೆ. ದಿನಾಲು ಕುಡಿದುಕೊಂಡು ಬಂದು ಮನೆಯಲ್ಲಿ ಜಗಳ ಮಾಡಿ ನಂತರ ನಿದ್ರೆಗೆ ಶರಣಾಗಿ ಬೆಳಿಗ್ಗೆ ಎದ್ದು ವ್ಯಾಪಾರಕ್ಕೆ ಹೋಗುವುದನ್ನು ರೂಢಿಸಿಕೊಂಡು ಬಿಡುತ್ತಾನೆ. ಈ ಕಡೆ ಸ್ವಾತಿ ಕೂಡ ಆತ ಇಲ್ಲದೆ ಇರುವ ಸಂದರ್ಭದಲ್ಲಿ ರಾಜೇಶನ ಬಳಿಗೆ ಹೋಗಿ ತನ್ನ ಆಸೆಯನ್ನು ಪೂರೈಸಿಕೊಂಡು ಬರುತ್ತಿದ್ದಳು.

ರಾಜೇಶ್ ಹಾಗೂ ಸ್ವಾತಿಯ ನಡುವಿನ ಸಂಬಂಧಕ್ಕೆ ಯಾರ ಅಡ್ಡಿಯೂ ಕೂಡ ಇರಲಿಲ್ಲ. ಆದರೆ ಇದ್ದಂತಹ ಏಕೈಕ ತೊಡಕು ಎಂದರೆ ಕೇವಲ ಸುಧಾಕರ್ ಮಾತ್ರ. ಹೀಗಾಗಿ ಸ್ವಾತಿ ಸುಧಾಕರ್ ನನ್ನು ಮುಗಿಸಿ ಆತನ ಜಾಗಕ್ಕೆ ಪ್ರಿಯಕರ ನಾಗಿರುವ ರಾಜೇಶ್ ನನ್ನು ಕರೆತರುವ ಪ್ಲಾನ್ ಮಾಡಿದ್ದಳು. ಇದಕ್ಕೆ ಆಕೆಗೆ ಸ್ಫೂರ್ತಿ ಆಗಿರುವುದು ತೆಲುಗಿನ ಯವಡು ಚಿತ್ರ. ಹೌದು ಅದರಲ್ಲಿ ಅಪಘಾತಕ್ಕೆ ಒಳಗಾಗುವ ನಾಯಕನಿಗೆ ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮುಖ ಚರ್ಹೆಯನ್ನು ಬದಲಾಯಿಸಿ ಬಿಡುತ್ತಾರೆ. ಇದೇ ರೀತಿ ತನ್ನ ಗಂಡನನ್ನು ಮುಗಿಸಿ ಆತನ ಮುಖ ಚರ್ಚೆಯನ್ನು ತನ್ನ ಪ್ರಿಯಕರನಿಗೆ ಜೋಡಿಸಿ ಬಿಟ್ಟರೆ ಜೀವನಪರ್ಯಂತ ಆತನ ಜೊತೆಗೆ ಯಾವುದೇ ಕಷ್ಟವಿಲ್ಲದೆ ಇರಬಹುದು ಎನ್ನುವುದಾಗಿ ಯೋಚಿಸುತ್ತಾಳೆ.

ಎಂದಿನಂತೆ ಆ ದಿನವೂ ಕೂಡ ಸುಧಾಕರ್ ಮನೆಗೆ ಪಾನಮತ್ತನಾಗಿ ಬಂದು ಹೆಂಡತಿಯ ಜೊತೆಗೆ ಜಗಳವಾಡಿ ನಶೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ. ಅದೇ ಸಂದರ್ಭವನ್ನು ಕಾಯುತ್ತಿದ್ದ ಸ್ವಾತಿ ಕೂಡಲೇ ರಾಜೇಶನಿಗೆ ಕರೆ ಮಾಡಿ ಮನೆಗೆ ಕರೆಸಿಕೊಳ್ಳುತ್ತಾಳೆ. ರಾಜೇಶ್ ಬಂದವನೇ ಸುಧಾಕರನಿಗೆ ಅನಸ್ತೇಶಿಯಾ ಓವರ್ಡೋಸ್ ನೀಡಿ ಪ್ರಜ್ಞೆ ಹೀನನಾಗುವಂತೆ ಮಾಡುತ್ತಾನೆ. ಅದಾದ ನಂತರ ಆತನನ್ನು ರಾಡ್ ನಿಂದ ಮುಗಿಸಿಬಿಡುತ್ತಾನೆ. ನಂತರ ಆತನನ್ನು ಕಾರೊಂದಕ್ಕೆ ತುಂಬಿಸಿ ಕಾಡೊಂದರ ಬದಿಗೆ ಎಸೆದು ಸುಟ್ಟು ಹಾಕಿದ್ದರು. ನಂತರ ಈ ಮೊದಲೇ ತಯಾರಿಸಿಟ್ಟು ಕೊಂಡಿದ್ದ ಮುಖಕ್ಕೆ ಏನು ಕೂಡ ಹಾನಿ ಮಾಡಲಾಗದಂತಹ ಆಸಿಡ್ ಅನ್ನು ರಾಜೇಶನ ಮುಖಕ್ಕೆ ಸಿಂಪಡಿಸಲಾಯಿತು.

ಇದರಿಂದಾಗಿ ಮನೆಗೆ ಯಾರೋ ನುಗ್ಗಿ ಸುಧಾಕರನಿಗೆ ಹೀಗೆ ಮಾಡಿದ್ದಾರೆ ಎಂಬುದಾಗಿ ಎಲ್ಲರಿಗೂ ನಂಬಿಸುವುದು ಆಗಿತ್ತು. ಇದು ಸ್ವಾತಿ ರಾಜೇಶ್ ನನ್ನ ಸುಧಾಕರ್ ಎನ್ನುವುದಾಗಿ ಜಗತ್ತಿಗೆ ನಂಬಿಸಲು ಮಾಡಿರುವಂತಹ ಮಾಸ್ಟರ್ ಪ್ಲಾನ್. ಇದನ್ನು ಎಲ್ಲರೂ ಕೂಡ ನಂಬಿದ್ದರು. ವೈದ್ಯರು ಕೂಡ ಅಷ್ಟೊಂದು ದೊಡ್ಡ ಮಟ್ಟದ ಸಮಸ್ಯೆಯಲ್ಲ ಕೆಲವು ದಿನಗಳಲ್ಲಿ ಸರಿಹೋಗುತ್ತದೆ ಎಂಬುದಾಗಿ ಹೇಳುತ್ತಾರೆ. ಆದರೆ ಸ್ವಾತಿ ಮಾತ್ರ ನನ್ನ ಗಂಡ ಮೊದಲಿನ ರೂಪದಲ್ಲಿ ಬೇಕು ಎಂಬುದಾಗಿ ಪಟ್ಟು ಹಿಡಿಯುತ್ತಾಳೆ. ಅವಳ ಮಾತಿಗೆ ಕಟ್ಟುಬಿದ್ದು ವೈದ್ಯರು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಲು ಮುಂದುವರೆಯುತ್ತಾರೆ.

ಯಾವುದು ಚಿಕಿತ್ಸೆಯಲ್ಲಿ ಕೂಡ ಚರ್ಮವನ್ನು ಸರಿಯಾಗಲು ಮಟನ್ ಸೂಪ್ ಅತ್ಯವಶ್ಯಕ ವಾಗಿರುತ್ತದೆ. ಇದನ್ನು ಅವತ್ತು ರಾಜೇಶನಿಗೆ ನರ್ಸ್ ನೀಡಲು ಹೋದಾಗ ನಾನು ತಿನ್ನುವುದಿಲ್ಲ ಎನ್ನುವುದಾಗಿ ನಿರಾಕರಿಸುತ್ತಾನೆ. ಯಾಕೆಂದರೆ ಆತ ಸಸ್ಯಾಹಾರಿಯಾಗಿದ್ದ. ಈ ಕುರಿತಂತೆ ಸುಧಾಕರನ ಹೆತ್ತವರಿಗೆ ತಿಳಿದಾಗ ಅನುಮಾನ ಮೂಡಲು ಆರಂಭವಾಗುತ್ತದೆ. ಯಾಕೆಂದರೆ ಅವರ ಮಗ ಸುಧಾಕರ್ ಅಪ್ಪಟ ಮಾಂಸಾಹಾರಿ ಪ್ರಿಯ. ಇದಾದ ನಂತರ ಸೂಕ್ಷ್ಮವಾಗಿ ಆತನನ್ನು ನೋಡಿದಾಗ ತಮ್ಮ ಮಗ ಅಲ್ಲ ಎನ್ನುವುದನ್ನು ಅವರು ಖಚಿತಪಡಿಸಿಕೊಳ್ಳುತ್ತಾರೆ. ತೀವ್ರವಾಗಿ ವಿಚಾರಣೆ ನಡೆಸಿದ ನಂತರ ನಡೆದಿರುವ ಸತ್ಯ ಘಟನೆ ಅರಿವಿಗೆ ಬರುತ್ತದೆ. ಇಬ್ಬರನ್ನು ಕೂಡ ಜೈಲಿಗೆ ಹಾಕಲಾಗುತ್ತದೆ. ಕೇವಲ ಶಾರೀರಿಕ ಸುಖಕ್ಕಾಗಿ ಸ್ವಾತಿ ಮಾಡಿದಂತಹ ಅನಾಚಾರ ದಿಂದಾಗಿ ಸುಧಾಕರನ ಪ್ರಾಣವು ಕೂಡ ಹೋಯಿತು ಹಾಗೂ ಮಕ್ಕಳಿಗೂ ಕೂಡ ತಂದೆ-ತಾಯಿ ಇಲ್ಲದಂತಾಯಿತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.