ವಿಶ್ವಕಪ್ ಗು ಮುನ್ನವೇ ರಾಹುಲ್ ರವರಿಗೆ ಬಿಗ್ ಶಾಕ್ ಕೊಟ್ಟ ರೋಹಿತ್ ಶರ್ಮಾ: ತೆಗೆದುಕೊಂಡ ಖಡಕ್ ನಿರ್ಧಾರ ಏನು ಗೊತ್ತೇ??
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬಹುತೇಕ ತಂಡಗಳು ಈಗಾಗಲೇ ಆಸ್ಟ್ರೇಲಿಯಾಕ್ಕೆ ಆಗಮಿಸಿವೆ. ನಾಲ್ಕು ದಿನಗಳ ಹಿಂದೆಯೇ ಆಸ್ಟ್ರೇಲಿಯಾಗೆ ಬಂದಿಳಿದ ಭಾರತ ತಂಡ ಅಭ್ಯಾಸ ಪಂದ್ಯದಲ್ಲಿ ನಿರತವಾಗಿದೆ. ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ ತಂಡದ ವಿರುದ್ಧ ಭಾರತ ತಂಡವು ತನ್ನ ಮೊದಲ ಅಭ್ಯಾಸ ಪಂದ್ಯದ ಕಣಕ್ಕಿಳಿದಿದೆ. ಭಾರತ ತಂಡವು ಈ ಅಭ್ಯಾಸ ಪಂದ್ಯಕ್ಕೆ ಸಾಕಷ್ಟು ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಹೌದು, ಅಂದರೆ ಟಿ20 ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿರುವಾಗ ಟೀಮ್ ಇಂಡಿಯಾ ರೋಹಿತ್ ಶರ್ಮಾ ಜೊತೆ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿ ಬಲಗೈ-ಎಡಗೈ ಕಾಂಬಿನೇಷನ್ನತ್ತ ಟೀಮ್ ಇಂಡಿಯಾ ಮುಖ ಮಾಡಿರುವುದು ಸ್ಪಷ್ಟ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕಥೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ತಂಡ ನಾಲ್ಕು ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ. ಈ ಪಂದ್ಯಗಳ ಮೂಲಕ ಭಾರತ ತಂಡ ಬಲಿಷ್ಠ 11 ಆಟಗಾರರನ್ನು ರೂಪಿಸಬೇಕಿದೆ. ಇದುವರೆಗೆ ಆರಂಭಿಕರಾಗಿ ಆಡುತ್ತಿರುವ ಕೆಎಲ್ ರಾಹುಲ್ ಬದಲು ರಿಷಬ್ ಪಂತ್ ಅವರನ್ನು ಕಣಕ್ಕಿಳಿಸಿರುವುದರ ಉದ್ದೇಶವೇನು ಎಂಬ ಚರ್ಚೆ ಶುರುವಾಗಿದೆ. ಮತ್ತೊಂದೆಡೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದಿರುವ ರಿಷಭ್ ಪಂತ್ ಕೇವಲ 9 ರನ್ಗಳಿಸಿ ಔಟಾಗಿದ್ದಾರೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಪಂತ್ ಈ ವರ್ಷ 17 ಪಂದ್ಯಗಳಲ್ಲಿ ಕೇವಲ 1 ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಇನ್ನು ಅವರ ಅವರೇಜ್ ಸ್ಕೋರ್ ಇರುವುದು ಕೇವಲ 26 ರನ್ ಮಾತ್ರ. ಹಾಗೆಯೇ ಕೊನೆಯ 10 ಟಿ-20 ಇನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ.

ಕೆಎಲ್ ರಾಹುಲ್ ಸೌತ್ ಆಫ್ರಿಕಾ ವಿರುದ್ಧದ 2 ಪಂದ್ಯಗಳಲ್ಲೂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಅಲ್ಲದೆ ಮಹತ್ವದ ಟೂರ್ನಿಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿಯನ್ನು ನೀಡುತ್ತಿರುವುದೇಕೆ ಎಂಬುದೇ ಪ್ರಶ್ನೆ. ಒಂದು ವೇಳೆ ಅಭ್ಯಾಸ ಪಂದ್ಯಗಳಲ್ಲಿ ರಿಷಬ್ ಪಂತ್ ಅದ್ಭುತ ಪ್ರದರ್ಶನ ತೋರಿದರೆ ಕೆ ಎಲ್ ರಾಹುಲ್ ಯಾವ ಸ್ಥಾನದಲ್ಲಿ ಆಡಳಿದ್ದಾರೆ ಎಂಬ ಗೊಂದಲ ಸೃಷ್ಟಿಯಾಗಿದೆ. ರಿಷಬ್ ಪಂತ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದರೆ ಕೆ ಎಲ್ ರಾಹುಲ್ ತಂಡದಿಂದ ಹೊರಗುಳಿಯಬೇಕಾಗುತ್ತದೆ. ವಿಶ್ವಕಪ್ ಶುರುವಾಗಲು ವಾರಗಳು ಮಾತ್ರ ಉಳಿದಿರುವಾಗ ಟೀಮ್ ಇಂಡಿಯಾ ಬಲಿಷ್ಠ ಇಲೆವೆನ್ ರೂಪಿಸುವ ಬದಲು ಈ ರೀತಿಯ ಪ್ರಯೋಗಕ್ಕೆ ಕೈ ಹಾಕಿರುವುದು ಅಚ್ಚರಿ ಮೂಡಿಸಿದ್ದು, ಈ ಬದಲಾವಣೆ ಟೀಮ್ ಇಂಡಿಯಾಗೆ ವರದಾನವಾಗುವುದೋ ಮುಳುವಾಗುವುದೋ ಕಾದು ನೋಡಬೇಕಿದೆ.