5 ಲಕ್ಷ ಹಣ ಕೊಟ್ಟು ಯಾರಿಗೂ ಹೇಳ್ಬೇಡಿ ಅಂದ ನಟ ಧ್ರುವ ಸರ್ಜಾ: ಯಾಕೆ ಗೊತ್ತೇ??
ಕನ್ನಡ ಚಿತ್ರರಂಗದಲ್ಲಿ ಆಕ್ಷನ್ ಪ್ರಿನ್ಸ್ ಎಂದು ಖ್ಯಾತಿ ಆಗಿರುವವರು ಧ್ರುವ ಸರ್ಜಾ. ಇವರ ನಟನೆ ಬಗ್ಗೆ ಎಲ್ಲರಿಗೂ ಗೊತ್ತು, ಧ್ರುವ ಒಂಥರ ರಫ್ ಅಂಡ್ ಟಫ್ ಹುಡುಗ ಎಂದೇ ಎಲ್ಲರೂ ಅಂದುಕೊಂಡಿರುತ್ತಾರೆ. ಧ್ರುವ ಅವರ ಒಳಗಿರುವ ಆ ಸಹಾಯ ಮನೋಭಾವದ ಮನಸ್ಸಿನ ಬಗ್ಗೆ ಎಲ್ಲರಿಗೂ ಗೊತ್ತಿರುವುದಿಲ್ಲ. ಧ್ರುವ ಸರ್ಜಾ ಅವರು ಹಲವರಿಗೆ ಸಹಾಯ ಮಾಡಿದ್ದಾರೆ, ಆದರೆ ಪ್ರಚಾರವನ್ನ ಬಯಸಿಲ್ಲ, ತಾವು ಸಹಾಯ ಮಾಡಿದ್ದು ಯಾರಿಗೂ ಗೊತ್ತಾಗಬಾರದು ಎಂದೇ ಹೇಳುತ್ತಾ ಬಂದಿದ್ದಾರೆ.
ಹೀಗೆ ಧ್ರುವ ಸರ್ಜಾ ಅವರು ಸಹಾಯ ಮಾಡಿದ ಘಟನೆ ಬಗ್ಗೆ ನಟ ಮತ್ತು ನಿರ್ದೇಶಕ ಒಳ್ಳೆ ಹುಡುಗ ಪ್ರಥಮ್ ಅವರು ತಿಳಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ, ಶಿವಮೊಗ್ಗದ ಹುಡುಗ ಹರ್ಷ ಅವರು ನಿಧನರಾದ ವಿಚಾರ ಎಲ್ಲರಿಗೂ ಗೊತ್ತಿದೆ. ಆ ಸಮಯದಲ್ಲಿ ಹರ್ಷ ಅವರ ಕುಟುಂಬಕ್ಕೆ ಹಲವರು ಸಹಾಯ ಮಾಡಿದರು, ಸರ್ಕಾರ ಕೂಡ ಸಹಾಯ ಮಾಡಿತು. ಹಾಗೆಯೇ ಪ್ರಥಮ್ ಅವರು ಸಹ ಹರ್ಷ ಅವರಿಗೆ ಸಹಾಯ ಮಾಡಿದರು, ಹರ್ಷ ಅವರ ವಿಚಾರದಲ್ಲಿ ಧ್ರುವ ಅವರೆ ಮುಂದೆ ಬಂದು ಪ್ರಥಮ್ ಅವರ ಜೊತೆಗೆ ಮಾತನಾಡಿದ್ದರು, ಖುದ್ದು ಪ್ರಥಮ್ ಅವರೇ ಈ ವಿಚಾರವನ್ನ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.

ನಮ್ಮಿಂದ ಅವರಿಗೆ ಏನು ಸಹಾಯ ಮಾಡೋದಕ್ಕೆ ಸಾಧ್ಯ ಎಂದು ಧ್ರುವ ಅವರು ಕೇಳಿದಾಗ, ಪ್ರಥಮ್ ಅವರು ಹರ್ಷನ್ನ ಅಂತೂ ನಾವು ವಾಪಸ್ ಕರ್ಕೊಂಡು ಬರೋದಕ್ಕೆ ಆಗಲ್ಲ, ಅವರ ಕುಟುಂಬಕ್ಕೆ ಆದರು ಸಹಾಯ ಮಾಡಬಹುದು ಎಂದು ಹೇಳಿದರಂತೆ. ಆಗ ಧ್ರುವ ಅವರು, ಹೌದು ಅದು ಸರಿ ಎಂದು ಹೇಳಿ, ನಾನೀಗ ಚೆಕ್ ಕೊಡೋದಕ್ಕೆ ಆಗಲ್ಲ, ಶೂಟಿಂಗ್ ನಲ್ಲಿದ್ದೀನಿ, ಒಂದ್ ಕೆಲಸ ಮಾಡ್ತೀನಿ, ಕ್ಯಾಶ್ ಕೊಟ್ಟು ಕಳಿಸುತ್ತೇನೆ ನಿಮಗೆ, ನೀವು ಹೋಗುವಾಗ ಕೊಟ್ಟುಬಿಡಿ, ನಾನ್ ಕೊಟ್ಟೆ ಅಂತ ಹೇಳಬೇಡಿ ಎಂದಿದ್ದರಂತೆ ಧ್ರುವ ಸರ್ಜಾ. ಧ್ರುವ ಸರ್ಜಾ ಅವರ ಗುಣ ಎಂಥದ್ದು ಎಂದು ಈ ಒಂದು ಘಟನೆಯ ಮೂಲಕ ತಿಳಿಸಿದ್ದಾರೆ ಪ್ರಥಮ್.