ಒಂದು ಕಾಲದಲ್ಲಿ ರಾಬರ್ಟ್ ಹಾಡಿದ ಮೂಲಕ ನಿದ್ದೆ ಕದ್ದ ಮಂಗ್ಲಿ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಕಾಣಿಸುವಷ್ಟು ಯಂಗ್ ಅಲ್ಲ.

456

ನಮಸ್ಕಾರ ಸ್ನೇಹಿತರೆ ಇತ್ತೀಚಿನ ವರ್ಷಗಳಲ್ಲಿ ತೆಲುಗು ಚಿತ್ರರಂಗದ ಕರ್ನಾಟಿಕ್ ಹಾಗೂ ಜನಪದ ಶೈಲಿಯ ಹಾಡುಗಾರ್ತಿ ಆಗಿರುವ ಮಂಗ್ಲಿ ಅವರು ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರಚಲಿತದಲ್ಲಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಮಿತ್ರರೇ ಮಂಗ್ಲಿ ಅವರ ಕುರಿತಂತೆ ಹೆಚ್ಚಿನ ಜನರಿಗೆ ಅವರ ಹಿನ್ನೆಲೆ ತಿಳಿದಿಲ್ಲ. ಕರ್ನಾಟಿಕ್ ಸಂಗೀತದಲ್ಲಿ ಮಂಗಲಿ ಅವರು ಡಿಪ್ಲೋಮೋ ಪದವಿಯನ್ನು ಪೂರ್ಣಗೊಳಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮಂಗ್ಲಿ ಅವರು ತೆಲುಗು ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದಲೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು ಕೂಡ ಅವರನ್ನು ಗುರುತಿಸುವಂತಹ ಹಾಡುಗಳು ಕಂಡುಬಂದಿರಲಿಲ್ಲ.

ಆದರೆ ಇತ್ತೀಚಿಗಷ್ಟೇ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಹಾಡಿನ ಮೂಲಕ ಒಂದೇ ರಾತ್ರಿಯಲ್ಲಿ ಮಂಗಲಿ ಅವರು ತೆಲುಗು ಹಾಗೂ ಕನ್ನಡ ಸಿನಿಮಾ ಪ್ರೇಕ್ಷಕರ ನೆಚ್ಚಿನ ಗಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ನ ಕಣ್ಣೆ ಅದರಿಂದಿ ಹಾಡು ಮಂಗ್ಲಿ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುತ್ತದೆ. ಈ ಹಾಡು ಕನ್ನಡಕ್ಕಿಂತಲೂ ಅದ್ಭುತವಾಗಿ ತೆಲುಗಿನಲ್ಲಿ ಮೂಡಿ ಬಂದಿದ್ದು ತೆಲುಗು ಹಾಗೂ ಕನ್ನಡ ಪ್ರೇಕ್ಷಕರು ಇಬ್ಬರು ಕೂಡ ಈ ಹಾಡನ್ನು ಸೂಪರ್ ಹಿಟ್ ಆಗುವ ರೀತಿಯಲ್ಲಿ ಇಷ್ಟಪಡುತ್ತಾರೆ.

ಇನ್ನು ಇದಾದ ನಂತರ ಈಗ ಇದೇ ರೀತಿಯ ಹಾಡುಗಳನ್ನು ಹಾಡಲು ಪ್ರತಿಯೊಬ್ಬ ಸಂಗೀತ ನಿರ್ದೇಶಕರ ಮೊದಲ ಆಯ್ಕೆಯಾಗಿ ಮಂಗ್ಲಿಯವರು ಕಾಣಿಸಿಕೊಳ್ಳುತ್ತಾರೆ. ಕನ್ನಡ ಹಾಗೂ ತೆಲುಗು ಚಿತ್ರರಂಗಗಳೆರಡಲ್ಲು ಕೂಡ ಮಂಗ್ಲಿ ಅವರ ಕಂಠಸಿರಿಯೆನ್ನುವುದು ಪ್ರತಿಯೊಬ್ಬರ ಕರಣಗಳಿಗೆ ಇಂಪನ್ನು ಕರೆಯುವ ಗಾನಸುಧೆಯಾಗಿದೆ. ಇನ್ನು ಮಂಗ್ಲಿ ಅವರ ಕಂಠಸಿರಿಯ ಅನುಭವವನ್ನು ಕಂಡು ಅವರಿಗೆ 30 ವರ್ಷ ವಯಸ್ಸಾಗಿದೆ ಎಂಬುದಾಗಿ ಎಲ್ಲರೂ ಭಾವಿಸುತ್ತಾರೆ ಆದರೆ ಅವರಿಗೆ ಇನ್ನೂ ಕೇವಲ 28 ವರ್ಷ ವಯಸ್ಸು ಮಾತ್ರ. ಮಂಗ್ಲಿ ಅವರ ಪ್ರತಿಭೆಗೆ ತಕ್ಕಂತೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು ಅವರನ್ನು ಹುಡುಕಿಕೊಂಡು ಬರಲಿ ಎಂಬುದಾಗಿ ಹಾರೈಸೋಣ.