ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿರುವ ಪ್ರಕರಣದಲ್ಲಿ ನಟಿ ದಿವ್ಯ ರವರಿಗೆ ಆನೆ ಬಲ: ಈ ಬಾರಿಗೆ ಬೆಂಬಲಕ್ಕೆ ಬಂದದ್ದು ಯಾರು ಗೊತ್ತೇ??

53

ನಮಸ್ಕಾರ ಸ್ನೇಹಿತರೆ ಕನ್ನಡ ಹಾಗೂ ತಮಿಳು ಕಿರುತೆರೆಯ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಂಪಾದಿಸಿರುವ ನಟಿ ದಿವ್ಯಶ್ರೀಧರ್ ಅವರ ಪ್ರಕರಣ ದಿನೇ ದಿನೇ ಹೊಸ ತಿರುವನು ಪಡೆದುಕೊಳ್ಳುತ್ತಿದೆ. ಆಕಾಶ ದೀಪ ಖ್ಯಾತಿಯ ನಟಿ ದಿವ್ಯ ಶ್ರೀಧರ್ ತಮ್ಮ ಗಂಡನಿಂದ ಹ’ಲ್ಲೆಗೆ ಒಳಗಾಗಿದ್ದು ಆತನಿಂದ ನನ್ನ ಪ್ರಾಣಕ್ಕೆ ಆಪತ್ತು ಇದೆ ಎಂಬುದಾಗಿ ಕೂಡ ಹೇಳಿದ್ದಾರೆ. ಈಗಾಗಲೇ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ದಿವ್ಯ ಶ್ರೀಧರ್ ಅವರು ತನ್ನೊಂದಿಗೆ ಧಾರವಾಹಿಗಳಲ್ಲಿ ನಟಿಸುತ್ತಿದ್ದ ಅನರ್ವ್ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ.

ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆತ ಅಮ್ಜದ್ ಖಾನ್ ಎನ್ನುವ ಮುಸ್ಲಿಂ ವ್ಯಕ್ತಿ ಎಂಬುದಾಗಿ ತಿಳಿದು ಬರುತ್ತದೆ. ದಿವ್ಯ ಶ್ರೀಧರ್ ಅವರೇ ಸ್ವತಃ ಹೇಳುವಂತೆ ಅವರನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವಂತೆ ಕೂಡ ಅವರ ಗಂಡ ಒತ್ತಾಯ ಮಾಡಿದ್ದಾನೆ ಎಂಬುದಾಗಿ ಕೂಡ ತಿಳಿದು ಬಂದಿದೆ. ಇದಕ್ಕಾಗಿಯೇ ವಿಡಿಯೋದಲ್ಲಿ ದಿವ್ಯ ಶ್ರೀಧರ್ ಅವರು ತನ್ನ ಗಂಡ ಅಮ್ಜದ್ ಖಾನ್ ನಿಂದ ನನ್ನ ಮಗುವಿಗೆ ಅಪಾಯವಿದೆ ಮಾತ್ರವಲ್ಲದೆ ಆತ ಬೇರೆಯವರೊಂದಿಗೆ ಬೇಡಿದ ಸಂಬಂಧವನ್ನು ಕೂಡ ಇಟ್ಟುಕೊಂಡಿದ್ದಾನೆ ಎಂಬುದಾಗಿ ಆರೋಪಿಸಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಕೂಡ ಆತನನ್ನು ನಾನೇ ಮನೆಯನ್ನು ಕೊಡಿಸಿ ಮಗುವಿನಂತೆ ನೋಡಿಕೊಂಡು ಸಾಕಷ್ಟು ಹಣ ಖರ್ಚು ಮಾಡಿ ಸಾಕಿದ್ದೇನೆ ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ದಿವ್ಯ ಶ್ರೀಧರ್ ತಿಳಿಸಿದ್ದಾರೆ. ಇನ್ನು ಈ ವಿಚಾರವನ್ನು ಅಮ್ಜದ್ ಖಾನ್ ಸುಳ್ಳು ಎಂಬುದಾಗಿ ಕೂಡ ಹೇಳಿದ್ದಾರೆ.

ಸದ್ಯಕ್ಕೆ ದಿವ್ಯಶ್ರೀಧರ್ ಅವರ ಬೆಂಬಲಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಆಗಿರುವ ಪ್ರಮೀಳಾ ನಾಯ್ಡು ಬಂದಿದ್ದಾರೆ. ತಮಿಳುನಾಡು ಮಹಿಳಾ ಆಯೋಗಕ್ಕೆ ಪತ್ರ ಬರೆದು ದೂರವಾಣಿಯಲ್ಲಿ ಕೂಡ ಮಾತನಾಡಿದ್ದಾರೆ. ಈಗಾಗಲೇ ಗಂಡನಿಂದ ಹ’ಲ್ಲೆಗೆ ಒಳಗಾಗಿರುವ ದಿವ್ಯಶ್ರೀಧರ್ ಅವರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂಬುದಾಗಿ ಹೇಳಿದ್ದಾರೆ. ದಿವ್ಯ ಶ್ರೀಧರ್ ಅವರು ಗರ್ಭಿಣಿ ಎನ್ನುವುದನ್ನು ಕೂಡ ನೋಡದೆ ಆಕೆಯ ಹೊಟ್ಟೆಗೆ ಅಥವಾ ಹೀಗಾಗಿ ಆತನ ಮೇಲೆ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮವನ್ನು ಜರುಗಿಸಬೇಕು ಎಂಬುದಾಗಿ ಕೂಡ ಆಗ್ರಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಹೇಗೆ ಕೊನೆಗೊಳ್ಳುತ್ತದೆ ಯಾರಿಗೆ ನ್ಯಾಯ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.