ಮೊದಲ ಎರಡು ಪಂದ್ಯ ಗೆದ್ದು ಬೀಗಿದ್ದ ಬೆಂಗಳೂರು ಬುಲ್ಸ್ ತಂಡಕ್ಕೆ ಬಿಗ್ ಶಾಕ್. ಸ್ಟಾರ್ ಆಟಗಾರ ಹೊರಕ್ಕೆ. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಈಗಾಗಲೇ ಪ್ರಾರಂಭವಾಗಿದ್ದು ಪವನ್ ಶೆಹ್ರಾವತ್ ಅವರ ಅನುಪಸ್ಥಿತಿ ಈ ಬಾರಿ ಬೆಂಗಳೂರು ಬುಲ್ಸ್ ತಂಡಕ್ಕೆ ಕಾಡಲಿದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು ಆದರೆ, ಬೆಂಗಳೂರು ಬುಲ್ಸ್ ತಂಡ ಅತ್ಯುತ್ತಮವಾಗಿ ಪ್ರದರ್ಶನ ನೀಡುತ್ತಿದೆ. ಇನ್ನು ಇಂದು ಬೆಂಗಳೂರು ಬುಲ್ಸ್ ತಂಡ ಬಲಿಷ್ಠ ಬೆಂಗಾಲ್ ವಾರಿಯರ್ಸ್ ತಂಡವನ್ನು ಎದುರಿಸಲಿದೆ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಾಲ್ ವಾರಿಯರ್ಸ್ ತಂಡ ಬಲಿಷ್ಠ ಆಟಗಾರರಾಗಿರುವ ದೀಪಕ್ ನಿವಾಸ್ ಹೂಡ, ಮಣಿಂದರ್ ಸಿಂಗ್ ಹಾಗೂ ಸುರಿಂದರ್ ನಾಡ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿರುವ ಸರ್ವತೋಮುಖ ದೃಷ್ಟಿಯಲ್ಲಿ ಗೆಲ್ಲ ಬಲ್ಲಂತಹ ಫೇವರಿಟ್ ತಂಡವಾಗಿ ಕಾಣಿಸಿಕೊಳ್ಳುತ್ತದೆ.
ಅದರಲ್ಲೂ ವಿಶೇಷವಾಗಿ ಮಣಿಂದರ್ ಸಿಂಗ್ ಅವರಂತಹ ಬಲಿಷ್ಠ ರೈಡರ್ ಅನ್ನು ಕಟ್ಟಿ ಹಾಕುವಂತಹ ಶಕ್ತಿ ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ವಿಭಾಗಕ್ಕೆ ಇದೆಯೋ ಇಲ್ಲವೋ ಎಂಬುದನ್ನು ಇಂದಿನ ಪಂದ್ಯದ ನಂತರ ಕಾದು ನೋಡಬೇಕಾಗಿದೆ. ಈ ಹಿಂದೆ ಈಗಾಗಲೇ ಮಣಿಂದರ್ ಸಿಂಗ್ ಅವರಿಂದಾಗಿಯೇ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಬೆಂಗಳೂರು ಬುಲ್ಸ್ ತಂಡ ಹಲವಾರು ಬಾರಿ ಸೋತಿತ್ತು. ಇನ್ನು ಈ ಬಾರಿ ತಂಡದ ಒನ್ ಮ್ಯಾನ್ ಆರ್ಮಿ ಆಗಿದ್ದ ಪವನ್ ಕುಮಾರ್ ಶೆಹ್ರಾವತ್ ಕೂಡ ಇಲ್ಲ. ಇನ್ನು ಅದ್ರಲ್ಲೂ ವಿಶೇಷವಾಗಿ ಈ ಬಾರಿ ತಂಡದ ಪ್ರಮುಖ ಡಿಫೆನ್ಸ್ ಆಟಗಾರನಾಗಿ ಕಾಣಿಸಿಕೊಂಡಿದ್ದ ಮಯೂರ್ ಕದಮ್ ಅವರು ತಂಡದಿಂದ ಹೊರ ಹೋಗಬೇಕಾಗಿ ಬಂದಿದೆ.

ಅವರ ಬದಲಿಗೆ ರಣ ಸಿಂಗ್ ಅಥವಾ ರಾಜೇಶ್ ನರ್ವಾಲ್ ತಂಡದಲ್ಲಿ ಸೇರಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಮೂಲಗಳನ್ನು ತಿಳಿದುಬಂದಿದೆ. ಹೀಗಾಗಿ ಇಂದಿನ ದಿನ ಬೆಂಗಾಲ್ ವಾರಿಯರ್ಸ್ ತಂಡದ ಎದುರು ಬೆಂಗಳೂರು ಬುಲ್ಸ್ ತಂಡ ಗೆಲ್ಲುವ ಸಾಧ್ಯತೆ ಕಡಿಮೆ ಎಂಬುದಾಗಿ ಹೇಳಲಾಗುತ್ತಿದೆ. ತಂಡದಲ್ಲಿ ಹೇಳಿಕೊಳ್ಳುವಷ್ಟರ ಮಟ್ಟಿಗೆ ದೊಡ್ಡಮಟ್ಟದ ಸ್ಟಾರ್ ಆಟಗಾರರು ಯಾರು ಕೂಡ ಇಲ್ಲ. ಹೀಗಾಗಿ ಇಂದಿನ ಪಂದ್ಯ ಬೆಂಗಾಲ್ ವಾರಿಯರ್ಸ್ ತಂಡದ ರೈಡಿಂಗ್ ಹಾಗೂ ಬೆಂಗಳೂರು ಬುಲ್ಸ್ ತಂಡದ ಡಿಫೆನ್ಸ್ ನಡುವಿನ ಕಾದಾಟ ಆಗಿರಲಿದೆ ಎಂದು ಹೇಳಬಹುದಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.