ದರ್ಶನ್ ಗೆ ಕೋಟಿ ಕೋಟಿ, ಮಾಲಾಶ್ರೀ ಪುತ್ರಿ, ರಾಧಾನಾ ರವರಿಗೆ ಮಾತ್ರ ಚಿಲ್ಲರೆ ಸಂಭಾವನೆ. ಯಾಕೆ ಗೊತ್ತೇ?? ದರ್ಶನ್ ಸಿನೆಮಾಗೆ ಎಷ್ಟು ಅಂತೇ ಗೊತ್ತೆ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ 56ನೇ ಸಿನಿಮಾದ ಮುಹೂರ್ತ ಪೂಜೆ ನಡೆದಿದೆ. ಈ ಸಿನಿಮಾವನ್ನು ರಾಬರ್ಟ್ ನಿರ್ದೇಶಕ ಆಗಿರುವ ತರುಣ್ ಸುಧೀರ್ ರವರು ನಿರ್ದೇಶಸುತ್ತಿದ್ದಾರೆ ಹಾಗೂ ರಾಕ್ಲೈನ್ ವೆಂಕಟೇಶ್ ರವರು ನಿರ್ಮಾಪಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾಗೆ ನಾಯಕಿ ಆಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಹಲವಾರು ಊಹಾಪೋಹಗಳು ಎದ್ದಿದ್ದವು. ಕೊನೆಗೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರಿಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳಾಗಿರುವ ರಾಧನ ಅವರು ಆಯ್ಕೆಯಾಗಿದ್ದರು.
ಮೊದಲ ಸಿನಿಮಾದಲ್ಲಿ ಡಿ ಬಾಸ್ ಅವರಂತಹ ಸ್ಟಾರ್ ನಟನೊಂದಿಗೆ ನಾಯಕಿಯಾಗಿ ಕಾಣಿಸಿಕೊಳ್ಳುವ ಅವಕಾಶ ಸಿಕ್ಕಿದ್ದು ನಿಜಕ್ಕೂ ಕೂಡ ರಾಧನ ಅವರ ಅದೃಷ್ಟ ಎಂದು ಹೇಳಬಹುದಾಗಿದೆ. ಇನ್ನು ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೋಟಿಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಟಾಪ್ ನಟನಾಗಿ ಅವರ ಸಂಭಾವನೆ ಬಗ್ಗೆ ಪ್ರತಿಯೊಬ್ಬ ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರಿಯರಿಗೆ ಒಂದು ಅಂದಾಜು ಇರುತ್ತದೆ. ಆದರೆ ಇದು ಮಾಲಾಶ್ರೀಯ ಅವರ ಮಗಳಾಗಿರುವ ರಾಧನ ಅವರಿಗೆ ಮೊದಲ ಸಿನಿಮಾ ಆಗಿರುವ ಹಿನ್ನೆಲೆಯಲ್ಲಿ ಈ ಸಿನಿಮಾಗೆ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂಬುದರ ಕುರಿತಂತೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಕುತೂಹಲ ಹಾಗೂ ಗೊಂದಲ ಇರುತ್ತದೆ. ಇಂದಿನ ಲೇಖನಿಯಲ್ಲಿ ಡಿ56 ಸಿನಿಮಾಗಾಗಿ ರಾಧನಾ ಅವರು ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

ನಿಜವಾಗಿ ಹೇಳಬೇಕೆಂದರೆ ಬೇರೆ ಯಾವುದೇ ಸಿನಿಮಾದಲ್ಲಿ ರಾಧನಾ ಅವರು ನಾಯಕಿಯಾಗಿ ಪಾದರ್ಪಣೆ ಮಾಡಿದ್ದಾರೆ ಅವರಿಗೆ ಸಂಭಾವನೆ ಅತ್ಯಂತ ಕಡಿಮೆಯಾಗಿ ಸಿಗುತ್ತಿತ್ತು ಆದರೆ ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವುದು ಡಿ ಬಾಸ್ ಸಿನಿಮಾದಲ್ಲಿ. ಹೀಗಾಗಿ ಅವರು ಮೊದಲ ಚಿತ್ರದಲ್ಲೇ ಬರೋಬ್ಬರಿ 20 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಈಗ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯರಾಗಿ ಕಾಣಿಸಿಕೊಳ್ಳುತ್ತಿರುವ ಕನ್ನಡ ಪ್ರೇಕ್ಷಕರಿಗೆ ಪರಿಚಿತ ನಟಿಯರು ಕೂಡ ಇಷ್ಟೇ ಸಂಭಾವನೆಯಲ್ಲಿದ್ದಾರೆ ಅದರ ನಡುವೆ ರಾಧನಾ ಅವರಿಗೆ ಇಷ್ಟು ದೊಡ್ಡ ಮಟ್ಟದ ಸಂಭಾವನೆ ಸಿಕ್ಕಿರುವುದು ಡಿ ಬಾಸ್ ಅವರ ಸಿನಿಮಾದ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.