ಈ ಬಾರಿಯ ವಿಶ್ವಕಪ್ ನಲ್ಲಿ ಫೈನಲ್ ತಲುಪುವ ತಂಡಗಳನ್ನು ಹೆಸರಿಸಿದ ಕ್ರಿಸ್ ಗೆಲ್: ಆಯ್ಕೆ ಮಾಡಿದ ತಂಡಗಳು ಯಾವ್ಯಾವು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಲೋಕದ ದೈತ್ಯ ಆಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ ರವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಕ್ರಿಕೆಟ್ ಜಗತ್ತಿನಲ್ಲಿ ಅವರು ದೊಡ್ಡ ಮಟ್ಟದ ಸುದ್ದಿ ಆಗುವುದಕ್ಕೆ ಕಾರಣ ಐಪಿಎಲ್ ಎಂದರೆ ಕೂಡ ತಪ್ಪಾಗಲಾರದು. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ತಂಡಗಳ ಪರವಾಗಿ ಅತ್ಯುತ್ತಮವಾಗಿ ಕ್ರಿಕೆಟ್ ಪ್ರದರ್ಶನವನ್ನು ನೀಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಟಿ ಟ್ವೆಂಟಿ ಫಾರ್ಮ್ಯಾಟ್ ನಲ್ಲಿ ಅತ್ಯಂತ ಅಪಾಯಕಾರಿ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಈ ಮೂಲಕ ತಮ್ಮನ್ನು ತಾವು ಯುನಿವರ್ಸಲ್ ಬಾಸ್ ಎಂಬುದಾಗಿ ಕರೆದುಕೊಳ್ಳುತ್ತಾರೆ. ಇನ್ನು ಸದ್ಯಕ್ಕೆ ಅತಿ ಶೀಘ್ರದಲ್ಲಿಯೇ ಆಸ್ಟ್ರೇಲಿಯಾದಲ್ಲಿ ಪ್ರಾರಂಭ ಆಗಲಿರುವ ಟಿ20 ವಿಶ್ವಕಪ್ ನಲ್ಲಿ ಫೈನಲ್ ನಲ್ಲಿ ಆಡಳಿರುವ ಎರಡು ತಂಡಗಳ ಕುರಿತಂತೆ ಭವಿಷ್ಯವನ್ನು ನುಡಿದಿದ್ದಾರೆ. ಆದರೆ ಅವರು ನುಡಿದಿರುವ ಭವಿಷ್ಯ ನಿಜಕ್ಕೂ ಕೂಡ ಆಶ್ಚರ್ಯಕರವಾಗಿದೆ. ಯಾಕೆಂದರೆ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಅವರ ವೆಸ್ಟ್ ಇಂಡೀಸ್ ತಂಡ ಫೈನಲ್ ಪಂದ್ಯವನ್ನು ಆಡಲಿದೆ ಎಂಬುದಾಗಿ ಭವಿಷ್ಯವನ್ನು ಇತ್ತೀಚೆಗೆ ನಡೆದಿರುವ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಅಂದ್ರೆ ರಸೆಲ್, ಬ್ರಾವೋ ಹಾಗೂ ಪೋಲಾರ್ಡ್ ಅವರ ಸೇವೆಯನ್ನು ಹೊಂದಿರದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಹಿಂದಿಗಿಂತ ವೀಕ್ ಆಗಿ ಕಾಣಿಸಿಕೊಂಡರು ಕೂಡ ಈ ಬಾರಿ ಫೈನಲ್ ತಲುಪಲಿ ಇದೆ ಎಂಬುದಾಗಿ ಕ್ರಿಸ್ ಗೇಲ್ ಅವರು ಭವಿಷ್ಯವನ್ನು ನುಡಿದಿರುವುದು ಅರ್ಥಹೀನವಾಗಿದೆ. ಹೀಗಿದ್ದರೂ ಕೂಡ ಟೂರ್ನಮೆಂಟ್ ನಲ್ಲಿ ನಿಕೋಲಸ್ ಪೂರನ್ ಅವರ ನೇತೃತ್ವದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಯಾವುದೇ ತಂಡಕ್ಕೂ ಕೂಡ ಅಪಾಯಕಾರಿ ಎದುರಾಳಿಯಾಗಿ ಕಾಣಿಸಿಕೊಳ್ಳಬಲ್ಲದು ಎಂಬುದಾಗಿ ಗೇಲ್ ಹೇಳಿದ್ದಾರೆ. ಯುನಿವರ್ಸಲ್ ಬಾಸ್ ಮಾಡಿರುವ ಈ ಪ್ರೆಡಿಕ್ಷನ್ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.