ಶೆಟ್ಟಿ ರವರಿಗೆ ಮಾತ್ರ ಅವಕಾಶ ಕೊಡ್ತೀರಾ: ಯಾಕೆ ಎಂದಿದ್ದಕ್ಕೆ ನೇರವಾಗಿ ಉತ್ತರ ಕೊಟ್ಟ ರಿಷಬ್ ಶೆಟ್ಟಿ. ಕೊಟ್ಟ ಉತ್ತರವೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಹಲವಾರು ಮಾಹಿತಿಗಳ ಪ್ರಕಾರ ರಿಷಬ್ ಶೆಟ್ಟಿ ನಾಯಕನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಅನ್ನು ಮೀರಿಸುವತ್ತ ಮುನ್ನುಗ್ಗುತಿದೆ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈಗಾಗಲೇ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅಮೆರಿಕಾ ದೇಶದಲ್ಲಿ ಕೂಡ ಕಾಂತಾರ ಸಿನಿಮಾ ದಾಖಲೆಯನ್ನು ಬರೆದಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಬಿಟ್ಟರೆ ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಕರಾವಳಿ ಸೊಗಡಿನ ಮಣ್ಣಿಗೆ ಅಂಟಿಕೊಂಡಿರುವ ಸಿನಿಮಾ ಆಗಿರುವ ಕಾಂತಾರ ಪಾತ್ರವಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಹಿಂದಿ ತಮಿಳು ಹಾಗೂ ತೆಲುಗು ಮತ್ತು ಮಲಯಾಳಂ ನಲ್ಲಿ ಕೂಡ ಕಾಂತಾರ ಸಿನಿಮಾ ಡಬ್ ಆಗಿ ಬಿಡುಗಡೆಯಾಗುವುದು ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ಅಧಿಕೃತವಾಗಿ ಪ್ರಕಟಣೆ ಹೊರಬಂದಿದೆ. ಇನ್ನು ಇಷ್ಟೊಂದು ಗೆಲುವಿನ ಸಿಹಿಯನ್ನು ಸವಿಯುತ್ತಿರುವ ಸಂದರ್ಭದಲ್ಲಿಯೇ ಸಂದರ್ಶನ ಒಂದರಲ್ಲಿ ರಿಷಬ್ ಶೆಟ್ಟಿ ಅವರಿಗೆ ಕೇಳಲಾಗಿರುವ ಪ್ರಶ್ನೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದೇನೆಂದರೆ ಯಾಕೆ ನೀವು ಶೆಟ್ಟಿ ಸಮುದಾಯದವರಿಗೆ ಮಾತ್ರ ನಿಮ್ಮ ಸಿನಿಮಾದಲ್ಲಿ ಅವಕಾಶ ನೀಡುತ್ತೀರಾ ಎಂಬುದಾಗಿ ಕೇಳುತ್ತಾರೆ. ಅದಕ್ಕೆ ಉತ್ತರಿಸುತ್ತಾ ರಿಷಬ್ ಶೆಟ್ಟಿ, ಈ ಪ್ರಶ್ನೆಯನ್ನು ಕೇಳಿ ಕೇಳಿ ನನ್ನ ಕಿವಿ ದಪ್ಪವಾಗಿದೆ ಇದಕ್ಕೆ ಮೊದಲಲ್ಲ ಉತ್ತರ ನೀಡುತ್ತಿದ್ದೆ ಈಗ ಉತ್ತರವನ್ನು ನೀಡುವುದನ್ನೇ ನಿಲ್ಲಿಸಿದ್ದೇನೆ ಎಂಬುದಾಗಿ ಹೇಳುತ್ತಾರೆ.

ನಾನು ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಮೊದಲಿನಿಂದಲೂ ಕೂಡ ಜೊತೆಯಾಗಿಯೇ ಬಂದವರು. ಅದರಲ್ಲೂ ವಿಶೇಷವಾಗಿ ನಾಟಕದ ದಿನಗಳಿಂದಲೂ ಕೂಡ ಪ್ರಮೋದ್ ಶೆಟ್ಟಿ ಹಾಗೂ ನಾನು ಜೊತೆಯಾಗಿ ಇದ್ದವರು. ಸಿನಿಮಾರಂಗಕ್ಕೆ ಕೂಡ ನಾವು ಜೊತೆಯಾಗಿಯೇ ಬಂದಿದ್ದೇವೆ ಹೀಗಾಗಿ ನನ್ನ ತಂಡದ ಜೊತೆಗೆ ಸಿನಿಮಾ ಮಾಡುವುದರಲ್ಲಿ ಯಾವ ತಪ್ಪಿದೆ ಎಂಬುದಾಗಿ ರಿಶಬ್ ಶೆಟ್ಟಿ ಕೇಳುತ್ತಾರೆ. ರಿಷಬ್ ಶೆಟ್ಟಿ ಅವರಿಗೆ ಬೆಂಬಲ ಸೂಚಿಸುತ್ತಾ ನಾಯಕನಟಿ ಸಪ್ತಮಿ ಗೌಡ ಕೂಡ ನಾನು ಸಪ್ತಮಿ ಗೌಡ ಎನ್ನುವ ಕಾರಣಕ್ಕಾಗಿ ನನಗೆ ಅವಕಾಶ ನೀಡಿಲ್ಲ ನಾನು ಆ ಪಾತ್ರವನ್ನು ನಿರ್ವಹಿಸಬಲ್ಲೆ ಎನ್ನುವ ಭರವಸೆ ಇರುವ ಕಾರಣದಿಂದಾಗಿ ನನಗೆ ಪಾತ್ರ ಸಿಕ್ಕಿದೆ ಅದೇ ರೀತಿ ಎಲ್ಲರೂ ಕೂಡ ಇದೆ ನಿಯಮದ ಅನ್ವಯ ಆಯ್ಕೆಯಾಗಿದ್ದಾರೆ ಎಂದು ಹೇಳುವ ಮೂಲಕ ವೃಷಭ ಶೆಟ್ಟಿ ಅವರ ಬೆಂಬಲ ನೀಡಿ ಮಾತನಾಡಿದ್ದಾರೆ.