ಇಂದು ಎಲ್ಲರೂ ಉತ್ತಮ ಮಾತುಗಳನ್ನು ಆಡುತ್ತಿರುವಾಗ ಕಾಂತಾರ ನೋಡಿ ತೆಲುಗಿನ ನಟ ನಾನಿ ಹೇಳಿದ್ದೇನು ಗೊತ್ತೇ??

7,946

ನಮಸ್ಕಾರ ಸ್ನೇಹಿತರೇ ಕೆಜಿಎಫ್ ಸರಣಿ ಚಿತ್ರಗಳು ಬಿಡುಗಡೆ ಆದ ಮೇಲಿಂದ ಕನ್ನಡ ಸಿನಿಮಾಗಳ ಕುರಿತಂತೆ ಹಾಗೂ ಕನ್ನಡ ಚಿತ್ರರಂಗದ ಕುರಿತಂತೆ ಪರಭಾಷಿಗರು ಹೆಚ್ಚಾಗಿ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ವಿಶೇಷವಾಗಿ ಕೆಜಿಎಫ್ ನಂತರ ಸಾಲು ಸಾಲಾಗಿ ಉತ್ತಮ ಕಂಟೆಂಟ್ ಹೊಂದಿರುವ ಸಿನಿಮಾಗಳು ಬಿಡುಗಡೆ ಆಗಿವೆ. ಅವುಗಳಲ್ಲಿ ಪ್ರಮುಖವಾಗಿ ಚಾರ್ಲಿ, ವಿಕ್ರಾಂತ್ ರೋಣ ಹಾಗೂ ಈಗ ಎಲ್ಲಾ ಕಡೆ ಅಬ್ಬರಿಸುತ್ತಿರುವ ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ.

ಹೌದು ಮಿತ್ರರೇ ಕಾಂತಾರ ಸಿನಿಮಾ ಕೇವಲ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಯಶಸ್ವಿಯಾಗಿರುವುದು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕೂಡ ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರಬಿಟ್ಟರೆ ಅಮೆರಿಕಾದಲ್ಲಿ ಅತ್ಯಂತ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೂಡ ಕಾಂತಾರ ಸಿನಿಮಾ ಪಾತ್ರವಾಗಿದೆ. ಇನ್ನು ತೆಲುಗು ಚಿತ್ರರಂಗದ ಸ್ಟಾರ್ ನಟ ಆಗಿರುವ ನಾನಿ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದವರು ಸಾಕಷ್ಟು ಉತ್ತಮ ಸಿನಿಮಾಗಳನ್ನು ಮಾಡುತ್ತಿದ್ದು ಇಡೀ ದೇಶವೇ ಕನ್ನಡ ಚಿತ್ರರಂಗವನ್ನು ಮೆಚ್ಚುವಂತಹ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎಂಬುದಾಗಿ ಹೊಗಳಿದ್ದಾರೆ.

ಫಿಲಂ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗವನ್ನು ಹೊಗಳುತ್ತಾ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಕಾಂತಾರ ಸಿನಿಮಾದ ಬಗ್ಗೆ ಕೂಡ ನಾನು ಪ್ರತಿಯೊಂದು ಕಡೆಗಳಲ್ಲಿ ಉತ್ತಮ ವಿಮರ್ಶೆಗಳನ್ನು ಕೇಳುತ್ತಿದ್ದೇನೆ ಎನ್ನುದಾಗಿ ಹೇಳುವ ಮೂಲಕ ಕಾಂತಾರ ಚಿತ್ರದ ಗುಣಗಾನವನ್ನು ಕೂಡ ನಾನಿ ಮಾಡಿದ್ದಾರೆ. ಪರಭಾಷೆಯ ಸ್ಟಾರ್ ನಟರು ಕೂಡ ನಮ್ಮ ಕನ್ನಡ ಚಿತ್ರರಂಗದ ಉತ್ತಮ ಚಿತ್ರಗಳನ್ನು ಮುಕ್ತ ಕಂಠದಿಂದ ಹೊಗಳುತ್ತಿರುವುದು ನಿಜಕ್ಕೂ ಕೂಡ ನಮ್ಮ ಕನ್ನಡ ಚಿತ್ರರಂಗದ ನಿಜವಾದ ಗೆಲುವು ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ಇಡೀ ಭಾರತದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡರು ಕೂಡ ಅಚ್ಚರಿ ಪಡಬೇಕಾದ ಯಾವ ಅಗತ್ಯವೂ ಇಲ್ಲ. ಇನ್ನು ಸದ್ಯಕ್ಕೆ ಗಮನಿಸುವುದಾದರೆ ಇದೆ ಅಕ್ಟೋಬರ್ 14 ಹಾಗೂ 15 ರಿಂದ ಕಾಂತಾರ ಸಿನಿಮಾ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಉಳಿದ ಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿ ನಿಂತಿದೆ. ಕನ್ನಡದಲ್ಲಿ ಅಬ್ಬರಿಸಿರುವ ಕಾಂತಾರ ಪರಭಾಷೆಗಳಲ್ಲಿ ಕೂಡ ಅದೇ ರೀತಿಯ ಗೆಲುವನ್ನು ಸಾಧಿಸಲಿ ಎಂಬುದಾಗಿ ಹಾರೈಸೋಣ.