ಗ್ಯಾಸ್ ಸಿಲಿಂಡರ್ ಅನ್ನು ಡೆಲಿವರಿ ಮಾಡಲು ಬಂದ ಯುವಕನಿಗೆ ಮನೆಯ ಮಹಿಳೆ ಮಾಡಿದ್ದೇನು ಗೊತ್ತೇ?? ಕೊನೆಗೆ ಏನಾಯಿತು ಗೊತ್ತೇ??

265

ನಮಸ್ಕಾರ ಸ್ನೇಹಿತರೇ ಇಂದು ನಾವು ತಮಿಳುನಾಡಿನಲ್ಲಿ ನಡೆದಿರುವ ನೈಜ ಘಟನೆ ಒಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮಹೇಶ್ ಎನ್ನುವತಾ ಗ್ಯಾಸ್ ಸಿಲಿಂಡರ್ ಪೂರೈಸುವ ಕೆಲಸವನ್ನು ಮಾಡುತ್ತಿದ್ದ. ತನ್ನ ಕೆಲಸದಲ್ಲಿ ಸಂಪೂರ್ಣ ಪ್ರಾಮಾಣಿಕನಾಗಿದ್ದ. ಒಂದು ದಿನ ಆತ ಬೆಳಿಗ್ಗೆ ತಡವಾಗಿ ಎದ್ದ ಎಂದ ಕಾರಣಕ್ಕೆ ತಿಂಡಿಯನ್ನು ಕೂಡ ಮಾಡದೆ ನೇರವಾಗಿ ಕೆಲಸಕ್ಕೆ ಹೋಗಿದ್ದ.

ಅದಾಗಲೇ ತಡವಾಗಿದ್ದ ಕಾರಣದಿಂದಾಗಿ ಹಲವಾರು ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಬೇಕಾಗಿತ್ತು. ಅದರಲ್ಲಿ ವಿಶೇಷವಾಗಿ 8ನೇ ಮಹಡಿಯ ಮೇಲಿದ್ದ ಸುಜಾತ ಎನ್ನುವವರ ಮನೆಗೆ ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಬೇಕಾಗಿತ್ತು ಅದಾಗಲೇ ಹಸಿವಿನಿಂದ ಬಳಲಿದ್ದ ಆತನಿಗೆ ಸಿಲಿಂಡರ್ ಅನ್ನು ನೀಡುವಾಗ ಜೀವ ಬಾಯಿಗೆ ಬಂದ ಹಾಗಾಗಿತ್ತು. ಆಗ ಆ ಸುಜಾತ ಎನ್ನುವ ಮಹಿಳೆಯ ಬಳಿ ಒಂದು ಲೋಟ ನೀರು ಕೊಡಿ ಅಮ್ಮ ಎಂದು ಕೇಳಿದಾಗ ಈಗ ಮಹಾಮಾರಿ ಎಲ್ಲಾ ಕಡೆ ಓಡಾಡುತ್ತಿದೆ ಈ ಸಂದರ್ಭದಲ್ಲಿ ನಿನಗೆ ನೀರನ್ನು ಕೊಟ್ಟು ನನಗೆ ರೋಗವನ್ನು ಬರಿಸಿಕೊಳ್ಳಲು ಇಷ್ಟವಿಲ್ಲ ಹೋಗು ಹೋಗು ಎಂಬುದಾಗಿ ಅಸಹನೆಯಿಂದ ಹೇಳುತ್ತಾಳೆ. ಇದಾದ ನಂತರ ಅದೇ ಬಿಲ್ಡಿಂಗ್ ನ ನಾಲ್ಕನೇ ಮಹಡಿಯಲ್ಲಿರುವ ಸುಮಾ ಎನ್ನುವವರ ಮನೆಗೆ ಕೂಡ ಗ್ಯಾಸ್ ಸಿಲಿಂಡರ್ ಡೆಲಿವರಿ ನೀಡಬೇಕಾಗಿತ್ತು, ಡೆಲಿವರಿ ಮಾಡಿದ ನಂತರ ಆತನನ್ನು ಅತ್ಯಂತ ಬಳಲಿದ ಪರಿಸ್ಥಿತಿಯಲ್ಲಿ ನೋಡಿದ ಸುಮಾ ಆತನಿಗೆ ನೀರು ಕೊಟ್ಟು ದಣಿವಾರಿಸಿಕೊಳ್ಳಲು ಹೇಳುತ್ತಾರೆ.

ನೀರನ್ನು ಕುಡಿದ ಮಹೇಶ್ ಕೂಡಲೇ ನೀರನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಎಂಬುದಾಗಿ ಭಾವನಾತ್ಮಕತೆಯಿಂದ ಆಕೆಯ ಕಾಲಿಗೆ ಬೀಳುತ್ತಾನೆ. ಕೇವಲ ಇಷ್ಟು ಮಾತ್ರವಲ್ಲದೆ ಆತನಿಗೆ ನೂರು ರೂಪಾಯಿ ಬಾಡಿಗೆಯನ್ನು ಕೂಡ ಸುಮಾ ನೀಡುತ್ತಾರೆ. ಈ ಘಟನೆಯ ಮೂಲಕ ನಾವು ಎಲ್ಲರೂ ಕೂಡ ಮನುಷ್ಯರೇ ಆದರೆ ಅವರವರ ಮನಸ್ಸಿನ ಕಾರಣದಿಂದಾಗಿ ಅವರು ಯಾವ ರೀತಿಯಲ್ಲಿ ನಮಗೆ ಕಾಣಿಸುತ್ತಾರೆ ಎಂಬುದು ತಿಳಿದು ಬರುತ್ತದೆ. ನಾಲ್ಕನೇ ಮಹಡಿಯ ಸುಮಾ ನೀರನ್ನುಕೊಟ್ಟು ತಮ್ಮ ಮಾನವೀಯತೆಯನ್ನು ಮರೆಯುವುದರ ಮೂಲಕ ದೈವ ಸಮಾನರಾಗಿ ಮಹೇಶ್ ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.