ಅಂದು ಅಚ್ಚುತ್ ಕುಮಾರ್ ಆಡಿದ್ದ ಈ ಮಾತು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಏನಾಗಿದೆ ಗೊತ್ತೇ??

167

ನಮಸ್ಕಾರ ಸ್ನೇಹಿತರೆ ಕಾಂತಾರ ಸಿನಿಮಾ ಯಾವ ರೀತಿಯಲ್ಲಿ ಎಲ್ಲಾ ಕಡೆ ಪ್ರದರ್ಶನ ಕಾಣುತ್ತಿದೆ ಎಂಬುದು ನಿಮಗೆಲ್ಲ ತಿಳಿದಿರುವ ವಿಚಾರ. ರಿಷಬ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಗೆ ಈಗ ಬೇಡಿಕೆ ಯಾವ ಮಟ್ಟಕ್ಕೆ ಹೆಚ್ಚಿದೆ ಎಂದರೆ ಸಿನಿಮಾ ಹಿಂದಿಯಲ್ಲಿ ಕೂಡ ಅದ್ದೂರಿಯಾಗಿ ಬಿಡುಗಡೆಯಾಗಲು ಸಿದ್ಧತೆ ನಡೆಸಿಕೊಳ್ಳುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ ಸಿನಿಮಾದ ಗೆಲುವಿನ ಸಿಹಿಯನ್ನು ಮಾಧ್ಯಮ ಮಿತ್ರರ ಮುಂದೆ ಕಾಂತಾರ ಚಿತ್ರತಂಡ ಹಂಚಿಕೊಳ್ಳುವ ಸಂದರ್ಭದಲ್ಲಿ ಚಿತ್ರದ ಪ್ರಮುಖ ನಟ ಆಗಿರುವ ಅಚ್ಯುತ್ ಅವರು ನೀಡಿರುವ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಕಾಂತರಾ ಸಿನಿಮಾದಲ್ಲಿ ಅತ್ಯಂತ ಉತ್ತಮ ಪಾತ್ರವನ್ನು ನಿರ್ವಹಿಸಿರುವ ಅಚ್ಯುತ್ ಅಣ್ಣ ರಿಷಬ್ ಶೆಟ್ಟಿ ಅವರ ನಿರ್ದೇಶನದ ಸಿನಿಮಾಗಳನ್ನು ಹೋಲಿಸಿರುವ ರೀತಿ ಈಗ ನಿಜಕ್ಕೂ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಿಶಬ್ ಶೆಟ್ಟಿಯವರ ನಿರ್ದೇಶನವನ್ನು ಉದಾಹರಣೆ ನೀಡುತ್ತಾ, ಒಂದು ಟೇಬಲ್ ಬಳಿ ಕಾರ್ಲ್ ಮಾರ್ಕ್ಸ್, ಪೆರಿಯಾರ್ ಹಾಗೂ ಅಂಬೇಡ್ಕರ್ ಟೀ ಕುಡಿಯುತ್ತಾ ಕುಳಿತಿದ್ದಾರೆ. ಅದರಲ್ಲಿ ಕಾರ್ಲ್ ಮಾರ್ಕ್ಸ್ ಎಲ್ಲರಿಗೂ ಟೀ ಕೊಡಿ ಎಂಬುದಾಗಿ ಹೇಳುತ್ತಾರೆ. ಇನ್ನು ಪೆರಿಯಾರ್ ಅವರು ಎಲ್ಲರಿಗೂ ಸಮಾನವಾದ ಅಳತೆಯಲ್ಲಿ ಟೀ ಕೊಡಿ ಎಂಬುದಾಗಿ ಹೇಳುತ್ತಾರೆ. ಇನ್ನು ಅಂಬೇಡ್ಕರ್ ಅವರು ಎಲ್ಲರಿಗೂ ಒಂದೇ ಅಳತೆಯ ಗ್ಲಾಸ್ ನಲ್ಲಿ ಟೀ ಕೊಡಿ ಎಂಬುದಾಗಿ ಹೇಳುತ್ತಾರೆ.

ಇದು ವಾಟ್ಸಾಪ್ನಲ್ಲಿ ಬಂದ ಸಂದೇಶವಾದರೂ ಕೂಡ ರಿಶಬ್ ಶೆಟ್ಟಿ ಅವರ ಸಿನಿಮಾಗಳಲ್ಲಿ ಕೂಡ ಇದೇ ರೀತಿಯ ಅಂಶಗಳನ್ನು ಅಳವಡಿಸಲಾಗುತ್ತದೆ. ಎಲ್ಲಾ ರೀತಿಯ ವರ್ಗದ ಪ್ರೇಕ್ಷಕರಿಗೂ ಕೂಡ ಅವರವರ ಅಳತೆಗೆ ತಕ್ಕಂತೆ ಮನೋರಂಜನೆಯನ್ನು ರಿಷಬ್ ಶೆಟ್ಟಿ ಅವರು ಕಟ್ಟಿಕೊಡುತ್ತಾರೆ ಎಂಬುದಾಗಿ ಅಚ್ಯುತ್ ಅಣ್ಣ ಮನಪೂರ್ತಿಯಾಗಿ ಹೊಗಳಿ ಹೇಳುತ್ತಾರೆ. ರಿಷಬ್ ಶೆಟ್ಟಿ ಅವರ ನಿರ್ದೇಶನದ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಕೂಡ ಹೋರಾಟದ ಮನೋಭಾವ ಹೊಂದಿರುವ ಜನರ ಕಥೆಯನ್ನು ಹೇಳಲಾಗುತ್ತದೆ ಇದನ್ನು ಕರಾವಳಿ ಸಂಸ್ಕೃತಿಯ ಆಚರಣೆ ಹಾಗೂ ಆಡಂಬರ ಗಳ ಜೊತೆಗೆ ಚೆನ್ನಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚುವ ಹಾಗೆ ಮಾಡಿದ್ದಾರೆ ನಿಮಗೆ ಧನ್ಯವಾದಗಳು ರಿಶಬ್ ಎನ್ನುವುದಾಗಿ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ. ಈ ವಿಡಿಯೋ ತುಣುಕು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.