ಊಹಿಸದಷ್ಟು ರಾಜಯೋಗ: ಶನಿ ಕೃಪೆಯಿಂದ ರಾಜಯೋಗ ಪಡೆಯುತ್ತಿರುವುದು ಯಾವ್ಯಾವ ರಾಶಿಗಳಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಆಗಾಗ ನಡೆಯುವ ಗ್ರಹಗಳ ಬದಲಾವಣೆ ಎನ್ನುವುದು ದ್ವಾದಶ ರಾಶಿಯ ಜನರ ಮೇಲೆ ನೇರ ಪರಿಣಾಮ ಬೀರುತ್ತದೆ. ಇನ್ನು ಮಕರ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದ ಶನಿ ಅಕ್ಟೋಬರ್ 23ರಿಂದ ನೇರ ಚಲನೆಯನ್ನು ಪ್ರಾರಂಭಿಸಲಿದ್ದಾನೆ. ಇದರಿಂದಾಗಿ ಮೂರು ರಾಶಿಯವರಿಗೆ ವಿಪರೀತ ರಾಜಯೋಗ ಪ್ರಾರಂಭವಾಗಲಿದೆ. ಆ ಮೂರು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ; ಶನಿಯ ನೇರ ನಡೆಯುವುದು ಮೇಷ ರಾಶಿಯವರಿಗೆ ಉದ್ಯೋಗ ಹಾಗೂ ವ್ಯಾಪಾರದಲ್ಲಿ ಹಲವಾರು ಆರ್ಥಿಕ ಮೂಲಗಳಿಂದ ಅನಿರೀಕ್ಷಿತ ಆದಾಯ ಹರಿದು ಬರುವಂತೆ ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಕೂಡ ದೊಡ್ಡ ಮಟ್ಟದ ಲಾಭ ಸಿಗುವ ಸಾಧ್ಯತೆ ಇದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಉತ್ತಮ ಕೆಲಸದ ಆಹ್ವಾನ ಸಿಗಬಹುದು. ಒಟ್ಟಾರೆಯಾಗಿ ಯಾವುದೇ ಕೆಲಸಕ್ಕೂ ಕೈ ಹಾಕಿದರು ಗೆಲುವು ನಿಮ್ಮದಾಗಲಿ.
ಧನು ರಾಶಿ; ಕೆಲಸ ಹಾಗೂ ವ್ಯಾಪಾರ ಮಾಡುತ್ತಿರುವ ಧನು ರಾಶಿಯವರಿಗೆ ಸಾಕಷ್ಟು ದಿನಗಳಿಂದ ಕಾಯುತ್ತಿದ್ದ ಗೆಲುವು ಈ ಸಂದರ್ಭದಲ್ಲಿ ಸಿಗಲಿದೆ. ನೀವು ಆಡುವ ಮಾತಿನ ಆಧಾರದ ಮೇಲೆ ನಿಮ್ಮ ಆರ್ಥಿಕ ಮಟ್ಟದ ಗೆಲುವು ನಿರ್ಧಾರಿತವಾಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಈ ಸಮಯದಲ್ಲಿ ಅದೃಷ್ಟ ಕುಲಾಯಿಸಿ ದೊಡ್ಡಮಟ್ಟದ ಸ್ಥಾನ ಮಾನ ಸಿಗಲಿದೆ. ವಿಪರೀತ ರಾಜಯೋಗ ಎನ್ನುವುದು ನಿಮಗೆ ಸಾಕಷ್ಟು ಸುಖಸಂಪತ್ತುಗಳನ್ನು ತರಲಿದೆ.

ಮೀನ ರಾಶಿ; ಶನಿಯ ನಡೆ ಮೀನ ರಾಶಿಯವರ ಆದಾಯ ಬಹುಪಾಲು ಹೆಚ್ಚಾಗುವಂತೆ ಮಾಡಲಿದೆ. ಆದಾಯದಲ್ಲಿ ನಿಮಗೆ ಹೊಸ ಹೊಸ ಆಯ್ಕೆಗಳು ಸಿಗಲಿವೆ. ಸಾಕಷ್ಟು ದಿನಗಳಿಂದ ಮುಗಿಯಬೇಕಾಗಿದ್ದ ಡೀಲ್ ಈ ಸಂದರ್ಭದಲ್ಲಿ ಸಂಪೂರ್ಣಗೊಳ್ಳಲಿದೆ. ಈ ಮೂರು ರಾಶಿಗಳೇ ಶನಿಯ ನೇರ ನಡೆಯಿಂದ ವಿಪರೀತ ರಾಜಯೋಗವನ್ನು ಅನುಭವಿಸುತ್ತವೆ. ಒಂದು ವೇಳೆ ನಿಮ್ಮ ರಾಶಿ ಕೂಡ ಇದರಲ್ಲಿ ಇದ್ದರೆ ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.