ಅದೇ ರಾಗ ಅದೇ ಹಾಡು: ಭಾರತದ ಮತ್ತೊಬ್ಬ ಭರವಸೆ ಬೌಲರ್ ಗೆ ಇಂಜುರಿ: ವಿಶ್ವಕಪ್ ಗು ಮುನ್ನವೇ ಬಿಗ್ ಶಾಕ್. ಈ ಬಾರಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ, ನಮ್ಮ ಭಾರತೀಯ ಕ್ರಿಕೆಟ್ ತಂಡದ ಹಣೆಬರವೇ ಸರಿಯಿಲ್ಲ ಎಂದು ಕಾಣಿಸುತ್ತದೆ. ಯಾಕೆಂದರೆ ಸತತವಾಗಿ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರು ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರ ಹೋಗುವ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಕಷ್ಟದ ಸಮಯವನ್ನು ತಂದಿಟ್ಟಿದೆ.
ಎಲ್ಲಕ್ಕಿಂತ ಪ್ರಮುಖವಾಗಿ ವಿಶ್ವಕಪ್ ಟೂರ್ನಮೆಂಟ್ ಗು ಮುನ್ನವೇ ತಂಡದ ಪ್ರಮುಖ ಬೌಲರ್ ಆಗಿದ್ದ ಬುಮ್ರ ಅವರು ಬೆನ್ನಿನ ಇಂಜುರಿಯ ಕಾರಣದಿಂದಾಗಿ ವಿಶ್ವ ಕಪ್ ಅನ್ನು ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಇನ್ನು ಈಗ ಭಾರತೀಯ ಕ್ರಿಕೆಟ್ ತಂಡದ ಮತ್ತೊಬ್ಬ ಭರವಸೆಯ ಬೌಲರ್ ಇಂಜುರಿಯ ಸಮಸ್ಯೆಗೆ ತುತ್ತಾಗಿದ್ದು ನಿಜಕ್ಕೂ ಕೂಡ ಭಾರತೀಯ ಕ್ರಿಕೆಟ್ ತಂಡ ಜಂಘಾ ಬಲವನ್ನೇ ಕಳೆದುಕೊಂಡಂತಿದೆ ಎಂದರು ತಪ್ಪಾಗಲಾರದು. ಹೌದು ಗೆಳೆಯರೇ ಆರು ತಿಂಗಳ ಇಂಜುರಿಯ ವಿಶ್ರಾಂತಿಯ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದ ದೀಪಕ್ ಚಹಾರ್ ಅವರು ಈಗ ಕಾಲಿಗೆ ಇಂಜುರಿ ಮಾಡಿಕೊಂಡಿದ್ದಾರೆ.

ಸ್ಟ್ಯಾಂಡ್ ಬೈ ಆಟಗಾರರ ಹೆಸರಿನಲ್ಲಿದ್ದ ದೀಪಕ್ ಚಹರ್ ಅವರನ್ನು ಬುಮ್ರಾ ಅವರ ಬದಲಿಗೆ ಟಿ 20 ವಿಶ್ವಕಪ್ ತಂಡದಲ್ಲಿ ಆಡಿಸುವ ಮಾತುಕತೆಗಳು ಕೂಡ ನಡೆಯುತ್ತಿದ್ದವು. ಆದರೆ ಈಗ ಅವರು ಎಂಜಾಯ್ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಸೌತ್ ಆಫ್ರಿಕಾದ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಮುಂದಿನ ದಿನದಲ್ಲಿ ಅವರು ಆಸ್ಟ್ರೇಲಿಯಾಗೆ ವಿಶ್ವಕಪ್ಗಾಗಿ ಪ್ರಯಾಣ ಬೆಳೆಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಟೀಮ್ ಇಂಡಿಯಾ ಆಟಗಾರರು ಇಂಜುರಿಯ ವಿಚಾರದಲ್ಲಿ ಸಾಕಷ್ಟು ನಿರ್ಲಕ್ಷ್ಯವನ್ನು ವಹಿಸುತ್ತಿರುವ ವಿಚಾರ ಈಗ ನಿಚ್ಚಳವಾಗಿ ಕ್ರಿಕೆಟ್ ಅಭಿಮಾನಿಗಳ ಎದುರಿಗೆ ಕಂಡು ಬರುತ್ತಿದೆ. ಇದು ವಿಶ್ವಕಪ್ ನಂತಹ ಟೂರ್ನಮೆಂಟ್ ಮುನ್ನವೇ ನಡೆಯುತ್ತಿರುವುದು ಮತ್ತೊಂದು ಬೇಸರದ ಕಾರಣವಾಗಿದೆ.