ಕನ್ನಡಕ್ಕೆ ವಾಪಸ್ಸು ಬರುತ್ತಿದ್ದ ಹಾಗೆ ಸುದೀಪ್ ವಿಚಾರದಲ್ಲಿ ಷಾಕಿಂಗ್ ಹೇಳಿಕೆ ಕೊಟ್ಟ ರಮ್ಯಾ: ಕನ್ನಡದಲ್ಲಿ ಬಿರುಗಾಳಿ ಎದ್ದದ್ದು ಯಾಕೆ ಗೊತ್ತೇ?

93

ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದಾರೆ. ಒಂದು ಕಾಲದ ಕನ್ನಡ ಸಿನಿಮಾ ರಸಿಕರ ನೆಚ್ಚಿನ ನಟಿಯಾಗಿದ್ದ ರಮ್ಯಾ ಅವರು ಈ ಮಧ್ಯ ಹಲವಾರು ವರ್ಷಗಳ ವಿರಾಮವನ್ನು ಕೂಡ ತೆಗೆದುಕೊಂಡಿದ್ದರು. ರಮ್ಯಾ ಅವರು ಕೆಲವು ಸಮಯಗಳ ಹಿಂದೆ ತಮ್ಮ ಸ್ವಂತ ಸಿನಿಮಾ ನಿರ್ಮಾಣ ಸಂಸ್ಥೆಯ ಅಧಿಕೃತ ಘೋಷಣೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಮಾಡಿದ್ದರು.

ಹೌದು ಇದರ ಹೆಸರನ್ನು ಆಪಲ್ ಹೌಸ್ ಪ್ರೊಡಕ್ಷನ್ ಎನ್ನುವುದಾಗಿ ಇಟ್ಟಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗಕ್ಕೆ ವಾಪಸ್ ಆಗಬೇಕು ಎಂದುಕೊಂಡಿದ್ದಾಗ ಹಲವಾರು ಕಥೆಗಳು ರಮ್ಯಾ ಅವರನ್ನು ಹುಡುಕಿಕೊಂಡು ಬಂದವು ಆದರೆ ರಾಜ್ ಬಿ ಶೆಟ್ಟಿ ಅವರು ಹೇಳಿರುವ ಕಥೆ ಅವರಿಗೆ ಇಷ್ಟವಾಗಿ ಈಗ ಇದೇ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ರಾಜ್ಭಿ ಶೆಟ್ಟಿ ನಿರ್ದೇಶನದ ಸ್ವಾತಿ ಮುತ್ತಿನ ಮಳೆ ಹನಿ ಎನ್ನುವ ಸಿನಿಮಾದಲ್ಲಿ ರಮ್ಯಾ ಅವರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಈಗ ಕಂಬ್ಯಾಕ್ ಮಾಡುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ರಮ್ಯಾ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದಲ್ಲಿ ನಾನು ಕಂಬ್ಯಾಕ್ ಮಾಡಬೇಕಾಗಿತ್ತು ಆದರೆ ಅದು ಈಗ ಸಾಧ್ಯವಾಗಿಲ್ಲ ಎಂಬುದಾಗಿ ಕೂಡ ಬೇಸರದಿಂದ ಹೇಳಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಗ್ಗೆ ಕೂಡ ಆಶ್ಚರ್ಯಕರ ಹೇಳಿಕೆಯನ್ನು ರಮ್ಯಾ ನೀಡಿದ್ದಾರೆ.

ಹೌದು ಮಿತ್ರರೇ, ನಿಮಗೆಲ್ಲರಿಗೂ ತಿಳಿದಿರಬಹುದು ಮುಸ್ಸಂಜೆ ಮಾತು ಸಿನಿಮಾದಲ್ಲಿ ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿತ್ತು. ಇನ್ನು ಇತ್ತೀಚಿಗಷ್ಟೇ ಸಂದರ್ಶನದಲ್ಲಿ ರಮ್ಯಾ ಅವರು ಮುಂದಿನ ದಿನಗಳಲ್ಲಿ ನಾನು ಹಾಗೂ ಸುದೀಪ್ ಇಬ್ಬರು ಕೂಡ ಒಟ್ಟಿಗೆ ನಟಿಸಿದರು ಕೂಡ ನಟಿಸಬಹುದು ಎಂಬುದಾಗಿ ಹೇಳುವ ಮೂಲಕ ಎಲ್ಲರನ್ನು ಗೊಂದಲಕ್ಕೆ ಹಾಗೂ ಕುತೂಹಲಕ್ಕೆ ತಳ್ಳಿದ್ದಾರೆ ಎಂದು ಹೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದರೆ ಕೂಡ ಆಶ್ಚರ್ಯ ಪಡಬೇಕಾದ ಯಾವುದೇ ಅಗತ್ಯವಿಲ್ಲ ಎಂದು ಹೇಳಬಹುದು.