ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಡಿ ಬಾಸ್ ದರ್ಶನ್ ಕೊಟ್ಟ ಉಡುಗೊರೆ ಏನು ಗೊತ್ತೇ?? ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ??

166

ನಮಸ್ಕಾರ ಸ್ನೇಹಿತರೆ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಮೊನ್ನೆಯಷ್ಟೇ ತಮ್ಮ ಜನ್ಮದಿನಾಚರಣೆಯನ್ನು ಅಭಿಮಾನಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿ ರಚಿತಾರಾಮ್ ರವರು ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾದಲ್ಲಿ ರಚಿತಾ ರಾಮ್ ರವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವ ನಾಯಕನಟಿ ಎಂದರೆ ಅದು ಡಿಂಪಲ್ ಕ್ವೀನ್ ರಚಿತಾ ರಾಮ್ ಎನ್ನಬಹುದಾಗಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬುಲ್ ಬುಲ್ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ರಚಿತಾ ರಾಮ್ ರವರ ನಾಯಕಿಯಾಗಿ ಪಾದರ್ಪಣೆ ಮಾಡಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಚಿತಾ ರಾಮ್ ರವರಿಗೆ ಜನ್ಮದಿನದ ಶುಭಾಶಯಗಳು ಕೋರಿ, ಇದೇ ಸಂದರ್ಭದಲ್ಲಿ ಚಿತ್ರರಂಗಕ್ಕೆ ಬಂದು 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ರಚಿತಾ ರಾಮ್ ರವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಹಲವಾರು ವರ್ಷಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ನಟಿ ರಚಿತಾ ರಾಮ್ ರವರು ಮತ್ತೆ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ಅಭಿಮಾನಿಗಳಲ್ಲಿಯೂ ಕೂಡ ಸಾಕಷ್ಟು ಸಂತಸದ ಮನೆ ಮಾಡಿದೆ. ಇನ್ನು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಹುಟ್ಟು ಹಬ್ಬದ ವಿಶೇಷವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇವಲ ಶುಭಾಶಯಗಳನ್ನು ಮಾತ್ರ ಕೋರುವುದಲ್ಲದೆ ವಿಶೇಷ ಉಡುಗೊರೆಯನ್ನು ಕೂಡ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೌದು ಮಿತ್ರರೇ, ರಚಿತಾ ರಾಮ್ ಅವರಿಗೆ ದುಬಾರಿ ಬೆಲೆಯ ವಿಶೇಷ ವಾಚ್ ಒಂದನ್ನು ಡಿ ಬಾಸ್ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.