ತುಳಸಿ ಗಿಡದ ಬಳಿ ಇದೊಂದು ಕೆಲಸ ಮಾಡಿ ಸಾಕು, ಲಕ್ಷ್ಮಿ ದೇವಿ ನಿಮ್ಮ ಮನೆ ಹುಡುಕಿಕೊಂಡು ಬಂದು ಅಲ್ಲಿಯೇ ನೆಲೆಸುವರು. ಏನು ಮಾಡಬೇಕು ಗೊತ್ತೇ??

1,119

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ವಿಚಾರಗಳ ಕಾರಣದಿಂದಾಗಿ ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸ್ವತಃ ಸಂಪತ್ತಿನ ಅಧಿದೇವತೆ ಆಗಿರುವ ಲಕ್ಷ್ಮೀದೇವಿ ನೆಲೆಸಿರುವ ತುಳಸಿ ಗಿಡದ ಬಳಿ ಹೋಗಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಒಲಿಯುತ್ತದೆ. ಪ್ರಮುಖವಾಗಿ ಗುರುವಾರದ ವಿಶೇಷ ದಿನದಂದು ಲಕ್ಷ್ಮೀದೇವಿಯ ವಾಸಸ್ಥಾನ ಆಗಿರುವ ತುಳಸಿ ಗಿಡಕ್ಕೆ ಹಾಲು ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಸಂಪತ್ತು ವೃದ್ಧಿಯಾಗುತ್ತದೆ.

ಇದೇ ಶುಭ ಗುರುವಾರದ ದಿನದಂದು ತುಳಸಿ ಗಿಡದ ಸುತ್ತ ಬೆಳೆದಿರುವ ಹುಲ್ಲನ್ನು ಮನೆಗೆ ತೆಗೆದುಕೊಂಡು ಬಂದು ಮನೆಯಲ್ಲಿ ಹಣ ಇರುವ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ ಹಾಗೂ ಸಂಪತ್ತು ಗಣನೀಯವಾಗಿ ವೃದ್ಧಿಯಾಗುತ್ತದೆ. ಪುಷ್ಯ ನಕ್ಷತ್ರದ ಗುರುವಾರದ ದಿನದಂದು ಕಪ್ಪು ಅರಶಿನದ ಜೊತೆಗೆ ಕಾಮಿಯ ಸಿಂಧೂರವನ್ನು ಹಾಗೂ ಗುಗ್ಗುಳದ ಧೂಪವನ್ನು ಹಣದ ಜೊತೆಗೆ ಕೆಂಪು ಬಟ್ಟೆಯಲ್ಲಿ ಸುತ್ತಿ ಕಮಾನಿ ನಲ್ಲಿ ಇರಿಸಬೇಕು. ಇನ್ನು ಇದೇ ಸಂದರ್ಭದಲ್ಲಿ ಬೆಳ್ಳಿಯ ಮುಚ್ಚಳದಲ್ಲಿ ಜೇನುತುಪ್ಪ ಹಾಗೂ ನಾಗ ಕೇಸರವನ್ನು ಹಣ ಇಡುವ ಸ್ಥಳದಲ್ಲಿ ಇಟ್ಟರೆ ಸಂಪತ್ತು ನೀರಿನಂತೆ ಹರಿಯಲಿದೆ.

ಶುಕ್ಲ ಪಕ್ಷದ ಶುಭ ಗುರುವಾರದಂದು ಅರಳಿ ಮರದ ಐದು ಎಲೆಗಳನ್ನು ಗಂಧದ ಬಣ್ಣದ ಜೊತೆಗೆ ನದಿಯ ನೀರಿನಲ್ಲಿ ಹರಿಸಿದರೆ ನಿಮ್ಮ ಸಂಪತ್ತು ಎನ್ನುವುದು ಕ್ಷೀಪ್ರವಾಗಿ ಬೆಳವಣಿಗೆ ಹೊಂದುತ್ತದೆ. ಹಣದ ಕೊರತೆ ಕಡಿಮೆಯಾಗಲು ಇರುವ ಇನ್ನೊಂದು ಉಪಾಯ ಏನೆಂದರೆ ಪುಷ್ಯ ನಕ್ಷತ್ರದ ಗುರುವಾರದ ಸಂದರ್ಭದಲ್ಲಿ ಗೋರೂಚನವನ್ನು ಬೆಳ್ಳಿಯ ಪೆಟ್ಟಿಗೆಯಲ್ಲಿಟ್ಟು ಕುಂಕುಮವನ್ನು ಹಚ್ಚಿ ಧೂಪವನ್ನು ತೋರಿಸಿ ನಿಮ್ಮ ಭಂಡಾರದಲ್ಲಿ ಇಟ್ಟುಕೊಂಡರೆ ಆರ್ಥಿಕ ಸಮಸ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ. ಲಕ್ಷ್ಮೀದೇವಿ ಪ್ರಸನ್ನಳಾಗಿ ನಿಮ್ಮ ಜೀವಮಾನದ ತುಂಬಾ ಸಂಪತ್ತನ್ನು ನಿಮಗಾಗಿ ಧಾರೆಯೆರೆಯುತ್ತಾಳೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.