ಹನಿಮೂನ್ ಗೆ ಹೋಗಿ ಬಂದ ಕೂಡ ತನ್ನ ಪತ್ನಿಯಿಂದ ದೂರ ಹೋಗುತ್ತಿರುವ ನಿರ್ಮಾಪಕ: ಬಾರಿ ಸದ್ದು ಮಾಡಿ ಜೋಡಿಗೆ ಏನಾಗಿದೆ ಗೊತ್ತೇ??

131

ನಮಸ್ಕಾರ ಸ್ನೇಹಿತರೇ ಈ ವರ್ಷದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಮದುವೆಗಳಲ್ಲಿ ತಮಿಳು ಚಿತ್ರರಂಗದ ಹಾಗೆ ಕಿರುತೆರೆ ನಟಿ ಹಾಗೂ ನಿರೂಪಕಿ ಆಗಿರುವ ಮಹಾಲಕ್ಷ್ಮಿ ಮತ್ತು ಚಿತ್ರರಂಗದ ನಿರ್ಮಾಪಕ ಆಗಿರುವ ರವೀಂದ್ರನ್ ಚಂದ್ರಶೇಖರ್ ಅವರ ಮದುವೆ ಕೂಡ ಒಂದಾಗಿದೆ. ಇಬ್ಬರೂ ಕೂಡ ಸಿನಿಮಾದ ಸೆಟ್ ಒಂದರಲ್ಲಿ ಪರಿಚಿತರಾಗಿ ಮದುವೆ ಆಗಿರುತ್ತಾರೆ. ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ಇಬ್ಬರಿಗೂ ಕೂಡ ಇದು ಎರಡನೇ ಮದುವೆ ಆಗಿರುತ್ತದೆ. ಇವರಿಬ್ಬರೂ ಪ್ರೀತಿಸಿ ತಿರುಪತಿಯಲ್ಲಿ ಮದುವೆಯಾಗಿದ್ದು ಇತ್ತೀಚಿಗಷ್ಟೇ ಹನಿಮೂನ್ ಕೂಡ ಮುಗಿಸಿಕೊಂಡು ಬಂದಿದ್ದಾರೆ.

ಮಹಾಲಕ್ಷ್ಮಿ ಹಾಗೂ ರವೀಂದ್ರನ್ ಚಂದ್ರಶೇಖರ್ ಇಬ್ಬರೂ ಕೂಡ ಮದುವೆಯಾಗಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇವರ ಪ್ರೀತಿಯ ಮದುವೆಗೆ ಮೆಚ್ಚುಗೆಗಿಂತ ಹೆಚ್ಚಾಗಿ ಟೀಕೆಗಳೇ ಸಿಕ್ಕಿದ್ದು ಹೆಚ್ಚು ಎಂದರೆ ತಪ್ಪಾಗಲಾರದು. ನೋಡಲು ಅಷ್ಟೊಂದು ಚೆನ್ನಾಗಿರುವ ಮಹಾಲಕ್ಷ್ಮಿ ಅವರು ಈ ದಢೂತಿ ಆಸಾಮಿಯನ್ನು ಯಾಕೆ ಮದುವೆ ಆಗಿದ್ದಾರೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಟೀಕೆಗಳು ರವೀಂದ್ರನ್ ಚಂದ್ರಶೇಖರ್ ಅವರು ಎದುರಿಸಬೇಕಾಯಿತು. ಈಗ ಇದನ್ನೆಲ್ಲ ಎದುರಿಸುತ್ತಿರುವ ನಡುವಲ್ಲಿ ಗಂಡ ಹೆಂಡತಿ ಈಗ ಬೇರೆ ಬೇರೆ ಆಗುತ್ತಿರುವ ಸುದ್ದಿ ಕೇಳಿ ಬರುತ್ತಿದೆ. ಮದುವೆಯಾಗಿ ಇನ್ನೂ ತಿಂಗಳು ಕಳೆದಿರಬಹುದು ಎಂಬುದಾಗಿ ಕಾಣುತ್ತೆ.

ಆದರೆ ಅಷ್ಟರ ಒಳಗೆ ನಿರ್ಮಾಪಕ ರವೀಂದ್ರನ್ ಚಂದ್ರಶೇಖರ್ ತಮ್ಮ ಪತ್ನಿ ಮಹಾಲಕ್ಷ್ಮಿ ಅವರಿಂದ ದೂರ ಸರಿಯುತ್ತಿದ್ದಾರೆ. ಅಷ್ಟಕ್ಕೂ ನಿಜವಾದ ಕಾರಣ ಏನು ಎಂಬುದನ್ನು ತಿಳಿದುಕೊಳ್ಳೋಣ. ರವೀಂದ್ರನ್ ಚಂದ್ರಶೇಖರ್ ಅವರು ಸದ್ಯಕ್ಕೆ ಪ್ರಾರಂಭ ಆಗಲಿರುವ ತಮಿಳುನಾಡಿನ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಾರೆ. ಇದೇ ಕಾರಣಕ್ಕೆ ಪತ್ನಿ ಮಹಾಲಕ್ಷ್ಮಿ ಅವರನ್ನು ಈಗ ಬಿಟ್ಟು ಬಿಗ್ ಬಾಸ್ ಮನೆಗೆ ಹೋಗಲೇ ಬೇಕಾಗಿರುವ ಅನಿವಾರ್ಯತೆಗೆ ರವೀಂದ್ರನ್ ಚಂದ್ರಶೇಖರ್ ಸಿಲುಕಿದ್ದಾರೆ. ಬಿಗ್ ಬಾಸ್ ಮನೆಗೆ ಹೋದ ನಂತರ ರವೀಂದ್ರನ್ ಚಂದ್ರಶೇಖರ್ ಅವರು ಹೇಗೆ ಆಟವಾಡುತ್ತಾರೆ ಗೆಲ್ಲುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.