ಮತ್ತೆ ಸಿನೆಮಾಗೆ ವಾಪಸ್ಸು ಬರುತ್ತಿರುವ ಕನ್ನಡದ ಒಂದು ಕಾಲದ ಕ್ವೀನ್ ರಮ್ಯಾ ರವರ ವಯಸ್ಸು ಎಷ್ಟು ಆಗಿದೆ ಗೊತ್ತೇ?? ಇಷ್ಟೊಂದಾ??

117

ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ಒಂದು ಕಾಲದಲ್ಲಿ ರಮ್ಯ ಮಿಂಚಿ ಮೆರೆದಿದ್ದಾರೆ. ಸಾಕಷ್ಟು ಸಮಯಗಳಿಂದ ಕನ್ನಡ ಚಿತ್ರರಂಗವನ್ನು ತೊರೆದಿದ್ದ ರಮ್ಯಾ ರವರು ಮತ್ತೆ ಬಂದು ಕನ್ನಡ ಚಿತ್ರಗಳಲ್ಲಿ ನಟಿಸಲಿ ಎಂಬುದಾಗಿ ಎಲ್ಲರೂ ಕೂಡ ಆಶಿಸಿದ್ದರು.

ಹೌದು ಗೆಳೆಯರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಧ್ಯದಲ್ಲಿ ಸಾಕಷ್ಟು ವರ್ಷಗಳ ಕಾಲ ರಮ್ಯಾ ರವರು ಕನ್ನಡ ಚಿತ್ರರಂಗದಿಂದ ಹೊರ ಇದ್ದಿದ್ದು ನಿಜಕ್ಕೂ ಕೂಡ ಅವರ ಅಭಿಮಾನಿಗಳಿಗೆ ಸೇರಿದಂತೆ ಕನ್ನಡ ಚಿತ್ರರಂಗದ ಸಿನಿಮಾ ರಸಿಕರಿಗೆ ಬೇಸರವನ್ನು ಮೂಡಿಸಿತ್ತು. ಆದರೆ ಹಲವಾರು ವರ್ಷಗಳ ನಂತರ ಈಗ ರಮ್ಯಾ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೌದು ಗೆಳೆಯರೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ಈಗ ಸಿನಿಮಾದ ಮೂಲಕ ನಾಯಕ ನಟಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ. ಹಲವಾರು ಸಮಯಗಳಿಂದ ರಮ್ಯಾ ಮತ್ತೆ ಕಂಬ್ಯಾಕ್ ಮಾಡುತ್ತಾರೆ ಎಂಬುದಾಗಿ ಸುದ್ದಿ ಆಗುತ್ತಲೇ ಇತ್ತು ಆದರೆ ಅದಕ್ಕೆ ಅಧಿಕೃತ ಪ್ರಕಟಣೆ ಹೊರ ಬಂದಿರಲಿಲ್ಲ. ಕೊನೆಗೂ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಮರು ಪಾದಾರ್ಪಣೆ ಮಾಡುತ್ತಿದ್ದಾರೆ.

ಹೌದು ಮಿತ್ರರೇ ರಮ್ಯಾ ಅವರು ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬರಲಿರುವ ಸ್ವಾತಿ ಮುತ್ತಿನ ಮಳೆ ಹನಿಯೇ ಎನ್ನುವ ಸಿನಿಮಾದ ಮೂಲಕ ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಕನ್ನಡ ಪ್ರೇಕ್ಷಕರ ಮನ ಗೆಲ್ಲಲು ಬರುತ್ತಿದ್ದಾರೆ. ಇನ್ನು ಹಲವಾರು ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮತ್ತೆ ನಾಯಕಿ ಆಗಿ ಕಾಣಿಸಿಕೊಳ್ಳುತ್ತಿರುವ ರಮ್ಯಾ ಅವರ ನಿಜವಾದ ವಯಸ್ಸು ಎಷ್ಟು ಎಂಬುದನ್ನು ತಿಳಿಯುವುದಾದರೆ, ರಮ್ಯಾ ಅವರ ಈಗಿನ ನಿಜವಾದ ವಯಸ್ಸು 39 ವರ್ಷ ವಯಸ್ಸಾಗಿದೆ. ವಯಸ್ಸು 39 ಆಗಿದ್ದರೂ ಕೂಡ ನಟಿ ರಮ್ಯಾ ಅವರು 25 ರ ಹರಿಯಾದ ಯುವತಿಯಂತೆ ಕಾಣಿಸಿಕೊಳ್ಳುತ್ತಾರೆ ಹಾಗೂ ಇಂದಿನ ಯುವ ನಟಿಯರಿಗೆ ಪೈಪೋಟಿ ನೀಡುವ ಸೌಂದರ್ಯ ಅವರಲ್ಲಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.