ಊಹೆಗೂ ಮೀರಿದ ಯಶಸ್ಸನ್ನು ಹೊತ್ತು ತರುತ್ತಿದ್ದಾನೆ ಸೂರ್ಯ ದೇವ: ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

21,175

ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದೇ ಅಕ್ಟೋಬರ್ 17ರಂದು ಗ್ರಹಗಳ ರಾಜನಾಗಿರುವ ಸೂರ್ಯ ಶುಕ್ರ ಗ್ರಹದ ರಾಶಿ ಆಗಿರುವ ತುಲಾ ರಾಶಿಗೆ ಕಾಲಿಡಲಿದ್ದಾನೆ. ಇದರಿಂದ ಐದು ರಾಷ್ಟ್ರೀಯ ಅವರಿಗೆ ರಾಜಯೋಗ ಸಿಗಲಿದ್ದು ಆ ಐದು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ವೃಷಭ ರಾಶಿ; ತುಲಾ ರಾಶಿಗೆ ಸೂರ್ಯನು ಕಾಲಿಡುತ್ತಿರುವುದು ವೃಷಭ ರಾಶಿಯವರಿಗೆ ದೊಡ್ಡ ಮಟ್ಟದ ಅದೃಷ್ಟವನ್ನು ನೀಡಲಿದೆ. ಯಾವುದೇ ಕೆಲಸ ಮಾಡಿದರು ಯಶಸ್ಸು ಸಿಗಲಿದ್ದು ಉದ್ಯೋಗವನ್ನು ಹುಡುಕುತ್ತಿರುವವರಿಗೆ ಅವರ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗಲಿದೆ. ಈಗಾಗಲೇ ಉದ್ಯೋಗದಲ್ಲಿ ಇರುವವರಿಗೆ ಕೆಲಸದಲ್ಲಿ ಪ್ರಮೋಷನ್ ಸಿಗಲಿದೆ.

ಸಿಂಹ ರಾಶಿ; ಹಲವಾರು ಸಮಯಗಳಿಂದ ನಿಂತಿರುವ ಕೆಲಸಗಳು ಮತ್ತೆ ಪ್ರಾರಂಭವಾಗಲಿದ್ದು, ವೃತ್ತಿ ಜೀವನ ಸರಾಗವಾಗಿ ನಡೆಯಲಿದೆ. ಆರೋಗ್ಯವೂ ಕೂಡ ಚೆನ್ನಾಗಿರಲಿದೆ. ನಿಮಗೆ ಕೆಲಸದ ಒತ್ತಡ ಆದಂತೆ ಮನೋಭಾವನೆ ಬರಬಹುದು ಆದರೆ ಕೆಲಸದಲ್ಲಿ ಸಿಗುವ ಗೆಲುವು ನಿಮ್ಮ ಒತ್ತಡವನ್ನು ಕಡಿಮೆ ಮಾಡುತ್ತದೆ.

ಧನು ರಾಶಿ; ಪ್ರಮೋಷನ್ ಸಿಗುವಂತಹ ಮಾಹಿತಿಗಳು ನಿಮಗೆ ಕೆಲಸದಲ್ಲಿ ಸಿಗುವ ಕಾರಣದಿಂದಾಗಿ ಅತಿ ಶೀಘ್ರದಲ್ಲೇ ಕೆಲಸದಲ್ಲಿ ಉತ್ತಮ ಜವಾಬ್ದಾರಿ ನಿಮ್ಮ ಕೈ ಸೇರಲಿದೆ. ಕೆಲಸದಲ್ಲಿ ಸಂಬಳ ಕೂಡ ವೇಗವಾಗಿ ಹೆಚ್ಚಾಗುತ್ತದೆ ಹಾಗೂ ವ್ಯಾಪಾರದಲ್ಲಿ ಕೂಡ ದೊಡ್ಡಮಟ್ಟದ ಲಾಭದ ಹಣ ಕೈ ಸೇರಲಿದೆ.

ಮಕರ ರಾಶಿ; ಕೆಲಸದಲ್ಲಿ ನೀವು ತೋರುವ ಶ್ರದ್ದೆ ಹಾಗೂ ಕೆಲಸದ ಉತ್ತಮ ಶೈಲಿಯಿಂದಾಗಿ ಸಹ ಉದ್ಯೋಗಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗುವ ನೀವು ಅತ್ಯಂತ ಶೀಘ್ರದಲ್ಲೇ ಪ್ರವಾಸವನ್ನು ಕೂಡ ಕೈಗೊಳ್ಳಲಿದ್ದೀರಿ. ಆರ್ಥಿಕ ಪ್ರಗತಿಯನ್ನು ಸಾಧಿಸುವ ಮೂಲಕ ಸಮಾಜದಲ್ಲಿ ಗೌರವವನ್ನು ಕೂಡ ಸಂಪಾದಿಸಲಿದ್ದೀರಿ.

ಮೀನ ರಾಶಿ; ಸೂರ್ಯ ರಾಶಿ ಬದಲಾವಣೆ ಮಾಡುವ ಕಾರಣದಿಂದಾಗಿ ಮೀನ ರಾಶಿಯವರಿಗೆ ದೊಡ್ಡ ಮಟ್ಟದ ಅದೃಷ್ಟದ ಸಾಥ್ ದೊರೆಯಲಿದೆ. ಅದೃಷ್ಟ ನಿಮ್ಮ ಹಿಂದೆ ಇರುವ ಕಾರಣದಿಂದಾಗಿ ನೀವು ಯಾವುದೇ ಕೆಲಸ ಮಾಡಿದರು ಕೂಡ ಅದರಲ್ಲಿ ಅದ್ವಿತೀಯ ಜಯವನ್ನು ಸಾಧಿಸುತ್ತೀರಿ. ಇವುಗಳೇ ಸೂರ್ಯನ ರಾಶಿ ಬದಲಾವಣೆಯಿಂದಾಗಿ ರಾಜಯೋಗವನ್ನು ಪಡೆಯಲಿರುವ 5 ರಾಶಿಗಳು.