ಕನ್ನಡದಲ್ಲಿ ತೆಲುಗಿನಲ್ಲಿ ಬಾರಿ ಮಿಂಚುತ್ತಿರುವ ನಟಿ ಶ್ರೀ ಲೀಲಾ ರವರ ನಿಜವಾದ ವಯಸ್ಸು ಎಷ್ಟು ಗೊತ್ತೇ?? ಇಷ್ಟು ಚಿಕ್ಕವರು ಎಂದರೆ ನಂಬಲಾಗುವುದಿಲ್ಲ.
ನಮಸ್ಕಾರ ಸ್ನೇಹಿತರೆ ನಮ್ಮ ಕನ್ನಡ ಚಿತ್ರರಂಗದಿಂದ ಈಗ ಬೇರೆ ಭಾಷೆಗಳಿಗೆ ಹಾರುತ್ತಿರುವ ನಟಿಯರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಆಗಿರುವ ಶ್ರೀ ಲೀಲಾ ಅವರ ಬಗ್ಗೆ.
ಎಪಿ ಅರ್ಜುನ್ ನಿರ್ದೇಶನದ ಹಾಗೂ ವಿರಾಟ್ ನಾಯಕನಾಗಿ ನಟಿಸಿದ್ದ ಕಿಸ್ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವ ನಟಿ ಶ್ರೀಲೀಲಾ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ನಟನೆಯ ಭರಾಟೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದಾದ ನಂತರ ನೇರವಾಗಿ ತೆಲುಗು ಚಿತ್ರರಂಗಕ್ಕೆ ಹಾರುವ ನಟಿ ಶ್ರೀ ಲೀಲಾ ಪೆಳ್ಳಿ ಸಂದಡಿ ಎನ್ನುವ ತೆಲುಗು ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡು ಮೊದಲ ಸಿನಿಮಾದಲ್ಲಿ ತೆಲುಗು ಪ್ರೇಕ್ಷಕರಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಇನ್ನು ಇದಾದ ನಂತರ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸಿನಿಮಾಗಳಿಗೆ ನಟಿ ಶ್ರೀ ಲೀಲಾ ಸಹಿ ಹಾಕಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಕನ್ನಡದಿಂದ ನಟನೆಯನ್ನು ಪ್ರಾರಂಭಿಸಿ ಬೆರಳುಣಿಕೆಯ ಸಿನಿಮಾದ ಮೂಲಕ ಈಗ ಟಾಲಿವುಡ್ ನಲ್ಲಿ ಕೂಡ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ನಟಿ ಶ್ರೀಲೀಲ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?

ಈ ಬಗ್ಗೆ ಹಲವಾರು ಜನರಿಗೆ ಸಾಕಷ್ಟು ಗೊಂದಲ ಇರಬಹುದು. ಈ ಗೊಂದಲವನ್ನು ನಾವು ಪರಿಹರಿಸುತ್ತೇವೆ. ಹೌದು ಮಿತ್ರರೇ ನಟಿ ಶ್ರೀಲೀಲಾ ಅವರು ನೋಡಲು ಸಾಕಷ್ಟು ಪ್ರಭುದ್ಧರಾಗಿ ಕಾಣಿಸಬಹುದು ಆದರೆ ಅವರ ನಿಜವಾದ ವಯಸ್ಸು ಕೇವಲ 21 ಮಾತ್ರ. ಖಂಡಿತವಾಗಿ ನಟಿ ಶೀಲೀಲಾ ಅವರ ವಯಸ್ಸನ್ನು ಕೇಳಿ ಹಲವಾರು ಜನರು ಆಶ್ಚರ್ಯಕ್ಕೆ ಒಳಗಾಗಿರಬಹುದು. ನಟಿ ಶ್ರೀ ಲೀಲಾ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.