ತನ್ನ ಲಕ್ಕಿ ಹೀರೊಯಿನ್ ಕ್ರಾಂತಿ ನಟಿ ರಚಿತಾ ರವರ ಬರ್ತ್ ಡೇ ಗೆ ಡಿ ಬಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು ಗೊತ್ತೇ?? ಒಮ್ಮೆಲೇ ಶಾಕ್.

3,351

ನಮಸ್ಕಾರ ಸ್ನೇಹಿತರೆ ಕಿರುತೆರೆಯಲ್ಲಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಕಾಲಿಡುತ್ತಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಚಿತಾ ರಾಮ್ ರವರು ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡ ಮೇಲೆ ಮತ್ತೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಇನ್ನು ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಸದ್ಯಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ನಾಯಕಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬರೋಬ್ಬರಿ ಹತ್ತು ವರ್ಷದ ನಂತರ ಡಿ ಬಾಸ್ ರವರ ಜೊತೆಗೆ ಮತ್ತೊಮ್ಮೆ ನಾಯಕಿಯಾಗಿ ಈ ಸಿನಿಮಾದ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳು ಕೋರಿ ಚಿತ್ರರಂಗಕ್ಕೆ ಕಾಲಿಟ್ಟಿರುವ 10 ವರ್ಷದ ಶುಭಾಶಯಗಳು ಕೂಡ ಇದೇ ಸಂದರ್ಭದಲ್ಲಿ ಡಿ ಬಾಸ್ ಕೋರಿದ್ದಾರೆ. ಕೇವಲ ಜನ್ಮದಿನದ ಶುಭಾಶಯಗಳನ್ನು ಮಾತ್ರವಲ್ಲದೆ ರಚಿತರಾಮ್ ರವರಿಗೆ ಜನ್ಮದಿನದ ಉಡುಗೊರೆಯನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೀಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.

ಹೌದು ಗೆಳೆಯರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರಿಗೆ ದುಬಾರಿ ಬೆಲೆಯ ವಾಚ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಒಮ್ಮೆ ಡಿ ಬಾಸ್ ಯಾರನ್ನಾದರೂ ತಮ್ಮ ಆಪ್ತ ಬಳಗಕ್ಕೆ ಸೇರಿಸಿಕೊಂಡರೆ ಅವರ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿರುತ್ತಾರೆ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ರಚಿತಾ ರಾಮ್ ರವರ ಜನ್ಮದಿನವನ್ನು ನೆನಪಿಟ್ಟುಕೊಂಡು ಅವರಿಗೆ ವಾಚ್ ಅನ್ನು ಉಡುಗೊರೆ ನೀಡಿದ್ದು ಈಗ ಎಲ್ಲಾ ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕ್ರಾಂತಿ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.