ಮೂರು ರಾಶಿಗಳಿಗೆ ಇಂದೇ ಅದೃಷ್ಟ ಆರಂಭ: ಇಡೀ ತಿಂಗಳು ಬೇಡ ಬೇಡ ಎಂದರು ದುಡ್ಡು. ಯಾವ್ಯಾವ ರಾಶಿಗಳಿಗೆ ಗೊತ್ತೇ??

10,339

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಕುಬೇರನ ಆಶೀರ್ವಾದಕ್ಕೆ ಮೂರು ರಾಶಿಗಳು ಪಾತ್ರವಾಗಲಿವೆ. ಈ ಕಾರಣದಿಂದಾಗಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಹಾಗೂ ಹಣದ ಹರಿವು ಹೆಚ್ಚಾಗಲಿದೆ. ಹಾಗಿದ್ದರೆ ಆ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ; ವೃಷಭ ರಾಶಿಯವರು ತಾವು ಕೆಲಸ ಮಾಡುವ ಸ್ಥಳದ ಹಣದ ಕೆಲಸಗಳನ್ನು ತಾವೇ ಮುನ್ನಡೆಸುತ್ತಾರೆ. ಅದರಲ್ಲೂ ವಿಶೇಷವಾಗಿ ವ್ಯಾಪಾರಿಗಳು ಲಾಭದ ವ್ಯಾಪಾರವನ್ನು ಮಾಡಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲ ಕೂಡ ಸಿಗಲಿದೆ. ಪ್ರತಿಯೊಂದು ಕೆಲಸವನ್ನು ಪಕ್ಕಾ ಪರಿಶ್ರಮದಿಂದ ಹಾಗೂ ಪರಿಪಕ್ವವಾಗಿ ನಿರ್ವಹಿಸುವ ನಿಮ್ಮ ಕೆಲಸದ ಶೈಲಿ ನಿಮಗೆ ಈ ದೊಡ್ಡ ಮಟ್ಟದ ಯಶಸ್ಸನ್ನು ತಂದು ಕೊಡುತ್ತದೆ. ಈ ತಿಂಗಳು ನಿಮಗೆ ಎಲ್ಲಾ ಒಳ್ಳೆಯದಾಗಲಿ, ದುರ್ಗಾ ದೇವಸ್ಥಾನದಲ್ಲಿ ನೀವು ದುರ್ಗಾ ಚಾಲಿಸ ಮಂತ್ರವನ್ನು ಪಠಣೆ ಮಾಡುವುದು ಪ್ರಮುಖವಾಗಿರುತ್ತದೆ.

ಧನು ರಾಶಿ; ಧನು ರಾಶಿ ಅವರ ಉದ್ಯಮದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ಲಾಭ ಹೆಚ್ಚಾಗುವ ಕಾರಣದಿಂದಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಲಿದ್ದಾರೆ. ಕೆಲಸದ ಮೂಲಕವೂ ಕೂಡ ನೀವು ಅಂದುಕೊಂಡಿರುವ ಎಲ್ಲಾ ಕೆಲಸಗಳು ಯಶಸ್ವಿಯಾಗಿ ಪೂರ್ತಿ ಆಗಲಿದೆ. ಕುಬೇರನ ಕ್ರಪೆ ಎನ್ನುವುದು ನಿಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಆಗುವಂತಹ ಕಾರ್ಯಗಳನ್ನು ಮೂಡಿಸುವಂತೆ ಮಾಡುತ್ತದೆ. ಯಾವುದೇ ಕಾರಣಕ್ಕೂ ಯಾವುದೇ ಕೆಲಸ ಬಂದರೂ ಅದನ್ನು ಪರಿಪೂರ್ಣವಾಗಿ ಯಶಸ್ವಿಯಾಗಿ ಪೂರ್ಣಗೊಳ್ಳುವಂತೆ ಮಾಡುತ್ತೀರಿ.

ಮೀನ ರಾಶಿ; ಜೀವನದಲ್ಲಿ ಎಂದೂ ಕಾಣದಂತಹ ಲಾಭವನ್ನು ಈ ತಿಂಗಳಿನಲ್ಲಿ ನೀವು ಪಡೆಯಲಿದ್ದೀರಿ. ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೂಡ ದೊಡ್ಡಮಟ್ಟದ ಜವಾಬ್ದಾರಿಯನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಇನ್ನಷ್ಟು ಹೊಸ ಹೊಸ ಅವಕಾಶಗಳು ನಿಮಗೆ ಹುಡುಕಿಕೊಂಡು ಬರಲಿವೆ. ಜೀವನದಲ್ಲಿ ಹಣದ ಹರಿವು ಕೂಡ ಕುಬೇರನ ಆಶೀರ್ವಾದದಿಂದಾಗಿ ಸರಾಗವಾಗಿ ಹರಿಯಲಿದೆ. ಇವುಗಳೇ ಈ ತಿಂಗಳಿನಲ್ಲಿ ಕುಬೇರನ ಆಶೀರ್ವಾದದಿಂದಾಗಿ ಲಾಭವನ್ನು ಪಡೆಯಲಿರುವ ರಾಶಿಗಳು. ನಿಮ್ಮ ರಾಶಿಗಳು ಕೂಡ ಈ ಪಟ್ಟಿಯಲ್ಲಿದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.