ಜೀವನ ಪೂರ್ತಿ ಮಾತ್ರೆಗಳ ಮೊರೆ ಹೋಗುವ ಬದಲು, ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಈ ನೀರು ಕುಡಿಯಿರಿ ಸಾಕು.

109

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕೇವಲ ವಯಸ್ಕರಲ್ಲಿ ಮಾತ್ರವಲ್ಲದೆ ಯುವಜನತೆಯಲ್ಲಿ ಕೂಡ ಮಧುಮೇಹದ ಸಮಸ್ಯೆ ಎನ್ನುವುದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕೆಲವೊಂದು ಪಾನೀಯಗಳು ಕೂಡ ಮಧುಮೇಹದ ನಿಯಂತ್ರಣಕ್ಕೆ ಸಹಕಾರಿಯಾಗುತ್ತವೆ. ಅದರಲ್ಲೂ ಕೆಲವೊಂದು ಮನೆಯಲ್ಲಿಯೇ ತಯಾರಿಸಬಹುದಾದ ಮನೆಮದ್ದಿನ ಕುರಿತಂತೆ ತಿಳಿಯೋಣ ಬನ್ನಿ. ಅದರಲ್ಲೂ ನಮ್ಮ ಅಡುಗೆ ಮನೆಯಲ್ಲಿರುವ ಕೊತ್ತಂಬರಿ ಕಾಳು ಹಾಗೂ ಧನಿಯಾ ದಂತಹ ವಸ್ತುಗಳಲ್ಲಿಯೇ ಆರೋಗ್ಯಕರ ಅಂಶಗಳಿರುತ್ತವೆ.

ಧನಿಯಾದಲ್ಲಿ ಐರನ್ ಹಾಗೂ ವಿಟಮಿನ್ ಎ ಮತ್ತು ಸಿ ಗುಣಾಂಶಗಳು ಇರುತ್ತವೆ. ಇನ್ನೂ ಕೊತ್ತಂಬರಿ ಕಾಳುಗಳಲ್ಲಿ ಕೂಡ ಮಧುಮೇಹವನ್ನು ನಿಯಂತ್ರಿಸುವ ಗುಣಲಕ್ಷಣಗಳು ಇರುತ್ತವೆ. ಕೊತ್ತಂಬರಿ ಕಾಳುಗಳು ರಕ್ತದಲ್ಲಿರುವ ಇನ್ಸುಲಿನ್ ಅಂಶವನ್ನು ನಿಯಂತ್ರಿಸಿ ಸಕ್ಕರೆ ಯ ಮಟ್ಟವನ್ನು ತಗ್ಗುವಂತೆ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಇದೊಂದು ನೀರು ಮಧುಮೇಹ ಕಡಿಮೆ ಮಾಡಲು ಅತ್ಯಂತ ಉಪಯುಕ್ತ ಆಹಾರ ಕ್ರಮ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಕೊತ್ತಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿ. ಬೆಳಗ್ಗೆ ಎದ್ದ ತಕ್ಷಣ ಬೀಜಗಳನ್ನು ಸೋಸಿ ಬೇರ್ಪಡಿಸಿ ಹಾಗೂ ನೀರನ್ನು ಫಿಲ್ಟರ್ ಮಾಡಿ ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಯಾಕೆಂದರೆ ರಾತ್ರಿಯೆಲ್ಲ ನೆನೆಸಿರುವ ಬೀಜದ ಸತ್ವಾಂಶಗಳನ್ನು ನೀರು ಹೀರಿಕೊಂಡಿರುತ್ತದೆ. ಈ ನೀರನ್ನು ಕುಡಿಯುವುದರ ಮೂಲಕ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಮಧುಮೇಹ ಬೇರೆ ಎಲ್ಲಾ ಮದ್ದುಗಳಿಗಿಂತ ಈ ಮನೆಮದ್ದನ್ನು ಉಪಯೋಗಿಸಿದರೆ ಸಂಪೂರ್ಣವಾಗಿ ಹತೋಟಿಯಲ್ಲಿ ಬರುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ನಿಮ್ಮ ಮುಖದ ಕಾಂತಿ ಕೂಡ ಹೆಚ್ಚಾಗಿ ಕೂದಲು ಉದುರುವ ಸಮಸ್ಯೆಗಳು ಕೂಡ ನಿಲ್ಲುತ್ತದೆ. ಒಂದು ಆರೋಗ್ಯಕರ ನೀರಿನಿಂದಾಗಿ ಎಷ್ಟೆಲ್ಲಾ ಪ್ರಯೋಜನಗಳು ಸಿಗಲಿವೆ ಎಂಬುದನ್ನು ನೀವೇ ಈ ಮೂಲಕ ನೋಡಬಹುದಾಗಿದೆ. ಒಂದು ವೇಳೆ ನೀವು ಕೂಡ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ನೀರನ್ನು ನೀವು ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಗೆ ಸೇವಿಸಬಹುದಾಗಿದೆ.