ದಕ್ಷಿಣಾ ಸರಣಿ ಗೆದ್ದ ಕೂಡಲೇ ಬಿಸಿಸಿಐ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ ಯುವದಾಂಡಿಗ ಪೃಥ್ವಿ ಶಾ. ಯಾಕೆ ಗೊತ್ತೇ??

145

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ತವರಿನಲ್ಲಿ ಮೂರು ಟಿ 20 ಪಂದ್ಯಗಳ ಸರಣಿಯಲ್ಲಿ ಸೋಲಿಸಿ, ಈಗ ಬಲಿಷ್ಠ ಸೌತ್ ಆಫ್ರಿಕಾ ತಂಡವನ್ನು ಕೂಡ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಶ್ ಮಾಡುವ ಸಿದ್ಧತೆಯಲ್ಲಿದೆ. ಏಷ್ಯಾ ಕಪ್ ಟೂರ್ನಮೆಂಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಇನ್ನೂ ಕೂಡ ವಿಶ್ವಕಪ್ ಗೆ ಸಿದ್ಧ ಆಗಿಲ್ಲ ಎನ್ನುವುದಾಗಿ ಎಲ್ಲರೂ ಕೂಡ ಅನುಮಾನವನ್ನು ವ್ಯಕ್ತಪಡಿಸಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಸೌತ್ ಆಫ್ರಿಕಾ ತಂಡವನ್ನು ಡಾಮಿನೇಷನ್ ಮೂಲಕ ಸೋಲಿಸಿರುವ ರೀತಿಯನ್ನು ನೋಡಿದರೆ ಭಾರತೀಯ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಅಗ್ರಗಣ್ಯರಾಗಿ ಕಾಣಿಸಿಕೊಳ್ಳಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಇನ್ನು ಟಿ ಟ್ವೆಂಟಿ ಸರಣಿ ಮುಗಿದ ನಂತರ ಸೌತ್ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಕೂಡ ಭಾರತ ಕ್ರಿಕೆಟ್ ತಂಡ ಆಡಳಿದೆ. ಇನ್ನು ಈ ತಂಡವನ್ನು ಶಿಖರ್ ಧವನ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಆಡಲಿದೆ. ಆದರೆ ಈಗ ಪೃಥ್ವಿ ಶಾ ಸೋಶಿಯಲ್ ಮೀಡಿಯಾದ ಮೂಲಕ ಇದರ ವಿರುದ್ಧವಾಗಿ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿಯೇ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಅವರು ಹಾಡಿರುವ ಡೊಮೆಸ್ಟಿಕ್ ಹಾಗೂ ಇಂಟರ್ನ್ಯಾಷನಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದರು ಕೂಡ ಅವರಿಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿಲ್ಲ.

ಇದರಿಂದಾಗಿ ಮುನಿಸಿಕೊಂಡಿರುವ ಪೃಥ್ವಿ ಶಾ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿಸಿಐಗೆ ಪರೋಕ್ಷವಾಗಿ, ಅವರ ಮಾತುಗಳನ್ನು ನಂಬಬೇಡಿ ಅವರ ಕಾರ್ಯಗಳನ್ನು ನಂಬಿ ಯಾಕೆಂದರೆ ಅವರ ಕಾರ್ಯಗಳು ಅವರಾಡಿರುವ ಮಾತುಗಳು ಅರ್ಥ ಹೀನ ಎಂಬುದನ್ನು ಸಾಬೀತುಪಡಿಸುತ್ತವೆ ಎಂಬುದಾಗಿ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಕ್ರಿಕೆಟ್ ಅಭಿಮಾನಿಗಳು ಯಾಕೆ ಪೃಥ್ವಿ ಶಾ ಅವರನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಅದಕ್ಕಿರುವ ನಿಜವಾದ ಕಾರಣಗಳನ್ನು ನೀಡಿ ಅದನ್ನಾದರೂ ನಾವು ಅರ್ಥಮಾಡಿಕೊಳ್ಳಬಹುದು, ಆದರೆ ಯಾವುದೇ ಕಾರಣಗಳನ್ನು ನೀಡದೇ ಅವರ ಆಯ್ಕೆ ಮಾಡದಿರುವ ಪ್ರಕ್ರಿಯೆ ಅರ್ಥವಾಗುತ್ತಿಲ್ಲ ಎಂಬುದಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.