ಸೂರ್ಯ ಕುಮಾರ್ ರೌದ್ರಾವತಾರ ಪ್ರದರ್ಶನ ಮಾಡಿದರೂ, ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಿನ್ನೆ ನಡೆದಿರುವ ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳ ನಡುವಿನ ಎರಡನೇ ಟಿ20 ಪಂದ್ಯದ ಬಗ್ಗೆ ಈಗಾಗಲೇ ತಿಳಿದಿದೆ. ಭಾರತ ತಂಡ ರೋಚಕವಾಗಿ 16 ರನ್ನುಗಳ ಗೆಲುವನ್ನು ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಕ್ರಿಕೆಟ್ ತಂಡ ರೋಹಿತ್ ಶರ್ಮ, ಕೆ ಎಲ್ ರಾಹುಲ್, ಸೂರ್ಯ ಕುಮಾರ್ ಯಾದವ್ ಹಾಗೂ ವಿರಾಟ್ ಕೊಹ್ಲಿ ಅವರ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಬರೋಬ್ಬರಿ 238 ರನ್ನುಗಳ ಗುರಿಯನ್ನು ಸೌತ್ ಆಫ್ರಿಕ ತಂಡಕ್ಕೆ ನೀಡಿತ್ತು.
ಇಂತಹ ಬೃಹತ್ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಆರಂಭಿಕ ಸಮಯದಲ್ಲಿ ವಿಕೆಟ್ಗಳನ್ನು ಬೇಗನೆ ಕಳೆದುಕೊಂಡರು ಕೂಡ ಮಿಲ್ಲರ್ ಹಾಗೂ ಕ್ವಿಂಟನ್ ಡಿಕಾಕ್ ರವರ ಪಾರ್ಟ್ನರ್ಶಿಪ್ ಕಾರಣದಿಂದಾಗಿ ಗೆಲ್ಲುವ ಸನಿಹಕ್ಕೆ ಬಂದಿತ್ತು. ಆದರೆ ಕೊನೆಯಲ್ಲಿ ಭಾರತೀಯ ಕ್ರಿಕೆಟ್ ತಂಡ ಮೇಲುಗೈ ಸಾಧಿಸಿ ಪಂದ್ಯವನ್ನು 16 ರನ್ನುಗಳ ಅಂತರದಲ್ಲಿ ಗೆದ್ದಿತು. ಇನ್ನು ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೆ ಎಲ್ ರಾಹುಲ್ ಅವರು ಪಡೆದುಕೊಳ್ಳುತ್ತಾರೆ.

ತಂಡದ ಪರವಾಗಿ ಸೂರ್ಯ ಕುಮಾರ್ ಅವರು ಅತ್ಯಧಿಕ 61 ರನ್ನುಗಳನ್ನು ಗಳಿಸಿದ್ದರು ಕೂಡ ರಾಹುಲ್ ಅವರಿಗೆ ಯಾಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿತು ಎನ್ನುವುದಾಗಿ ಕೆಲವರು ಗೊಂದಲದಲ್ಲಿದ್ದಾರೆ. ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಕೂಡ 57 ರನ್ನುಗಳನ್ನು ಬಾರಿಸಿದ್ದಾರೆ. ಇನ್ನು ಕೆ ಎಲ್ ರಾಹುಲ್ ಕೂಡ ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ತಮಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಆಶ್ಚರ್ಯ ಚಕಿತರಾಗಿದ್ದಾರೆ ಎಂದು ಹೇಳಬಹುದಾಗಿದೆ.