ಮೊದಲ ನೋಟದಲ್ಲಿಯೇ ಪ್ರೀತಿ ಮಾಡಿದ ಇರ್ಫಾನ್ ಪಠಾಣ್. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?? ತಿಳಿದರೆ ನೀವು ನಂಬೋದಿಲ್ಲ.

50

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ಕಂಡಂತಹ ಶ್ರೇಷ್ಠ ಆಲ್ ರೌಂಡರ್ ಆಟಗಾರರಲ್ಲಿ ಇರ್ಫಾನ್ ಪಟಾನ್ ಕೂಡ ಒಬ್ಬರಾಗಿದ್ದಾರೆ. ಇರ್ಫಾನ್ ಅವರ ಕ್ರಿಕೆಟ್ ಜೀವನದ ಬಗ್ಗೆ ಸಾಮಾನ್ಯವಾಗಿ ಬಹುತೇಕ ನಿಮಗೆಲ್ಲರಿಗೂ ಕೂಡ ತಿಳಿದಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಅವರ ವೈಯಕ್ತಿಕ ಜೀವನದ ಕುರಿತಂತೆ. ವೈಯಕ್ತಿಕ ಜೀವನ ಎಂದರೆ ಅವರ ಲವ್ ಕಹಾನಿಯ ಕುರಿದಂತೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಇರ್ಫಾನ್ ಪಟಾನ್ ಮದುವೆ ಆಗಿರುವುದು ಸಫಾ ಬೈಗ್ ಎನ್ನುವವರನ್ನು. ಇವರು ಜನಿಸಿರುವುದು ಸೌದಿ ಅರೇಬಿಯಾದಲ್ಲಿ. ಆರಂಭಿಕ ದಿನಗಳಲ್ಲಿ ಇವರು ಮಾಡಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯ ರಾಗಿದ್ದರು. ಇರ್ಫಾನ್ ಪಟಾನ್ ಹಾಗೂ ಸಫಾ ಬೈಗ್ ಇಬ್ಬರೂ ಕೂಡ ಮೊದಲ ಬಾರಿಗೆ ಭೇಟಿಯಾಗಿದ್ದು 2014ರಲ್ಲಿ. ಮೊದಲ ನೋಟದಲ್ಲಿಯೇ ಇರ್ಫಾನ್ ಪಟಾನ್ ಕ್ಲೀನ್ ಬೌಲ್ಡ್ ಆಗುತ್ತಾರೆ. ನಂತರ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ ನಂತರ ತಮ್ಮ ಮನೆಯವರಿಗೆ ಸಫಾ ಬೈಗ್ ಅವರನ್ನು ಇರ್ಫಾನ್ ಪಟಾನ್ ಭೇಟಿ ಮಾಡಿಸುತ್ತಾರೆ. ಇದಾದ ನಂತರ ಎರಡು ಕುಟುಂಬಗಳ ಒಪ್ಪಿಗೆ ನಂತರ ಅದ್ದೂರಿಯಾಗಿ 2016ರಲ್ಲಿ ಇಬ್ಬರು ಕೂಡ ಮದುವೆಯಾಗುತ್ತಾರೆ.

ಇವರಿಬ್ಬರ ನಡುವೆ ಹತ್ತು ವರ್ಷಗಳ ವಯಸ್ಸಿನ ಅಂತರವಿದ್ದರೂ ಕೂಡ ಪ್ರೀತಿ ಎನ್ನುವುದು ಎಲ್ಲವನ್ನು ಮೀರಿ ಬೆಳೆದಿತ್ತು. ಇನ್ನು ಅದೇ ವರ್ಷದ ಕೊನೆಯ ಡಿಸೆಂಬರ್ ನಲ್ಲಿ ದಂಪತಿಗಳು ಮಗುವಿಗೆ ತಂದೆ ತಾಯಿಯಾಗುತ್ತಾರೆ. ಈಗ ಸದ್ಯಕ್ಕೆ ಕ್ರಿಕೆಟ್ ಜೀವನದಿಂದ ದೂರವಿರುವ ಇರ್ಫಾನ್ ಪಠಾನ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.