ಶುರುವಾಯಿತು ಬಿಗ್ ಬಾಸ್ ನಲ್ಲಿ ಕಿಚ್ಚನ ಹವಾ. ಮೊದಲ ವಾರವೇ ಹೇಗಿತ್ತು ಗೊತ್ತೇ ಕಿಚ್ಚ ರ್ರವರ ವೀಕೆಂಡ್. ಸ್ಪರ್ದಿಗಳಿಗೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 9 ರ ಮೊದಲ ವೀಕೆಂಡ್ ಈಗಾಗಲೇ ಆಗಮಿಸಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಶನಿವಾರದ ಎಪಿಸೋಡ್ ನಲ್ಲಿ ಕೆಲವರಿಗೆ ಕ್ಲಾಸ್ ತಗೊಂಡರೆ ಇನ್ನು ಕೆಲವರಿಗೆ ಎಚ್ಚರಿಕೆ ನೀಡಿದ್ದಾರೆ. ವಾರದ ಕಥೆಗೂ ಮುನ್ನ ಪ್ರಶಾಂತ್ ಅವರ ಜೊತೆಗೆ ರಾಕೇಶ್ ಅಡಿಗ, ಅನುಪಮಾ, ಅಮೂಲ್ಯ, ಗೊಬ್ಬರಗಾಲ ಹಾಗೂ ರೂಪೇಶ್ ಪ್ರ್ಯಾಂಕ್ ಮಾಡೋಣ ಎಂಬುದಾಗಿ ಭಾವಿಸುತ್ತಾರೆ.
ಆಗ ರಾಕೇಶ್ ಅಡಿಗ ನಾನು ಬಾಯಿಗೆ ಟೂತ್ಪೇಸ್ಟ್ ಹಾಕಿಕೊಂಡು ನೊರೆ ಬಂದವನಂತೆ ಮಾಡುತ್ತೇನೆ ಎಂಬುದಾಗಿ ಮೂರ್ಛೆ ಬಿದ್ದವನಂತೆ ನಟಿಸುತ್ತಾರೆ. ನಂತರ ಇದನ್ನು ನೋಡಿ ಪ್ರಶಾಂತ್ ಹಾಗೂ ಆರ್ಯವರ್ಧನ್ ರವರ ಓಡಿ ಬರುತ್ತಾರೆ. ಇದು ಪ್ರ್ಯಾಂಕ್ ಎಂದು ತಿಳಿದು ಬೇಸರವಾಗುತ್ತಾರೆ ಹಾಗೂ ನನ್ನ ಮಗನಿಗೂ ಕೂಡ ಇದೇ ಸಮಸ್ಯೆ ಇದೆ ಎಂಬುದಾಗಿ ಹೇಳುತ್ತಾರೆ. ಇದು ಎಲ್ಲರಿಗೂ ಬೇಸರವನ್ನು ತರಿಸಿತ್ತು. ನಂತರ ಲಕ್ಜುರಿ ಟಾಸ್ಕ್ ನ ಐಟಂಗಳ ಪಟ್ಟಿಯಲ್ಲಿ ಕೂಡ ಪ್ರಶಾಂತ್ ಸಂಬರ್ಗಿ ಅವರು ಐಟಂಗಳ ಸರಿಯಾದ ಬೆಲೆಯನ್ನು ಬರೆಯುವಲ್ಲಿ ತಪ್ಪು ಮಾಡಿದಾಗ ಅವರ ವಿರುದ್ಧ ಸಾನಿಯಾ ಅಯ್ಯರ್ ಹಾಗೂ ರೂಪೇಶ್ ಅವರು ಬೇಸರ ಮಾಡಿಕೊಳ್ಳುತ್ತಾರೆ. ಇದಾದ ನಂತರ ವಾರದ ಕಥೆ ಪ್ರಾರಂಭವಾಗುತ್ತದೆ.

ತಮಾಷೆಯಿಂದಲೆ ಪ್ರಾರಂಭಿಸಿದ ವಾರದ ಪಂಚಾಯಿತಿಯನ್ನು ಕಿಚ್ಚ ಸುದೀಪ್ ನಂತರ, ಅರುಣ್ ಸಾಗರ್, ದೀಪಿಕಾ ದಾಸ್, ಸಾನಿಯಾ ಅಯ್ಯರ್ ಹಾಗೂ ಅಮೂಲ್ಯ ಅವರಿಗೆ ಕ್ಲಾಸ್ ತೆಗೆದುಕೊಳ್ಳಲು ಕೂಡ ಸೀರಿಯಸ್ ಆಗುತ್ತಾರೆ. ಇನ್ನು 12 ಜನ ನಾಮಿನೇಷನ್ ಆಗಿರುವವರಲ್ಲಿ ಅರುಣ್ ಸಾಗರ್, ದಿವ್ಯ ಉರುಡುಗ ಹಾಗೂ ವಿನೋದ್ ಗೊಬ್ಬರಗಾಲ ಅವರು ಸೇಫಾಗಿ ಮುಂದಿನ ವಾರಕ್ಕೆ ತೇರ್ಗಡೆಯಾಗಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಮನೆಯಿಂದ ಯಾರು ಹೊರ ಹೋಗಲಿದ್ದಾರೆ, ಮೊದಲ ಎಲಿಮಿನೇಷನ್ ಅನ್ನು ಯಾರು ಕಾಣಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ತಿಳಿದು ಬರಲಿದೆ.