ಈ ಮುಸ್ಲಿಂ ಹುಡುಗಿಯ ಪ್ರೀತಿ ಕ್ಲೀನ್ ಬೋಲ್ಡ್ ಭಾರತೀಯ ಕ್ರಿಕೆಟಿಗ ಶಿವ ದುಬೆ. ಹೇಗಿತ್ತು ಗೊತ್ತೇ ಮದುವೆ ಸಂಭ್ರಮ.

47

ನಮಸ್ಕಾರ ಸ್ನೇಹಿತರೆ ನೀವು ಐಪಿಎಲ್ ನೋಡುತ್ತಿದ್ದರೆ ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ ತಂಡದ ಪರವಾಗಿ ಆಡಿರುವ ಶಿವಂ ದುಬೆ ನಿಮಗೆಲ್ಲರಿಗೂ ಗೊತ್ತಿರುತ್ತದೆ. ಕಳೆದ ಬಾರಿಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿತ್ತು. ಹೀಗಿದ್ದರೂ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ ಆಟಗಾರ ಎಂದು ಶಿವಂ ದುಬೆ. ಎಲ್ಲರೂ ಅವರ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಯುವರಾಜ್ ಸಿಂಗ್ ಸಿಕ್ಕಿದ್ದಾರೆ ಎಂಬುದಾಗಿ ಮಾತನಾಡಿಕೊಂಡಿದ್ದರು.

ಇನ್ನು ಶಿವಂ ದುಬೆ ಅವರನ್ನು ನೋಡಿದರೆ ಮದುವೆ ಆಗಿರುವ ರೀತಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಇವರ ಮದುವೆ ಎನ್ನುವುದು ಕೂಡ ಅಷ್ಟೊಂದು ಸುಲಭ ವಾಗಿರಲಿಲ್ಲ. ಇವರು ಮದುವೆಯಾಗಿರುವುದು ಅಂಜುಮ್ ಖಾನ್ ಎನ್ನುವವರನ್ನು. ಇಬ್ಬರ ಧರ್ಮ ಕೂಡ ಬೇರೆ ಆಗಿದ್ದರಿಂದ ಇವರ ಮದುವೆ ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಹೀಗಿದ್ದರೂ ಕೂಡ ಕೊನೆಯವರೆಗೂ ಇವರು ತಮ್ಮ ಪ್ರೀತಿಯನ್ನು ಮುಚ್ಚಿಟ್ಟುಕೊಂಡೇ ಬಂದರು. ನಂತರ ಇವರಿಬ್ಬರೂ ಹಿಂದೂ ಹಾಗೂ ಮುಸ್ಲಿಂ ಎರಡು ಧರ್ಮದ ಪ್ರಕಾರ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತಾರೆ. ಇವುಗಳ ಫೋಟೋಗಳನ್ನು ಕೂಡ ನೀವು ಶಿವಂ ದುಬೆ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಗಳಲ್ಲಿ ನೋಡಬಹುದಾಗಿದೆ.

ಇನ್ನು ಇವರಿಬ್ಬರ ಪ್ರೀತಿಯ ಪ್ರತೀಕವಾಗಿ ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಮಗುವಿನ ಜನ್ಮ ನೀಡಿದ್ದಾರೆ. ಹಲವಾರು ವರ್ಷಗಳ ಕಾಲ ಡೇಟಿಂಗ್ ನಡೆಸಿದ ನಂತರ ಕೊನೆಗೆ ಈ ವಿಚಾರವನ್ನು ಇವರು ಎಲ್ಲರಿಗೂ ಬಹಿರಂಗಪಡಿಸಿದ್ದರು. ಇದು ಆ ಸಂದರ್ಭದಲ್ಲಿ ಅವರ ಸ್ನೇಹಿತರಿಗೆ ಕೂಡ ಸಾಕಷ್ಟು ಆಶ್ಚರ್ಯವನ್ನು ತಂದಿತ್ತು ಎಂಬುದಾಗಿ ತಿಳಿದು ಬಂದಿದೆ.