ಕೇವಲ 15 ನಿಮಿಷಗಳಲ್ಲಿ ಮದುವೆಯಾಗಲು ನಿಶ್ಚಯ ಮಾಡಿದ ನೆಹ್ರಾ ಪ್ರೇಮ ಕಥೆ ಹೇಗಿದೆ ಗೊತ್ತೇ?? ಆಗಿನ ಕಾಲದಲ್ಲಿಯೇ ಹೇಗಿತ್ತು ಗೊತ್ತೇ ಲವ್ ಸ್ಟೋರಿ??

33

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಆಗಿರುವ ಆಶೀಶ್ ನೆಹ್ರ ಎಲ್ಲರಿಗೂ ಗೊತ್ತಿರುವ ವ್ಯಕ್ತಿ. 2011ರ ವರ್ಲ್ಡ್ ಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡದ ಸದಸ್ಯ ಕೂಡ ಆಗಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕಳೆದ ಬಾರಿಯ ಐಪಿಎಲ್ ನಲ್ಲಿ ಒಂದು ದಾಖಲೆಯನ್ನು ಕೂಡ ಮಾಡಿದ್ದಾರೆ. ಐಪಿಎಲ್ ಗೆ ಪಾದರ್ಪಣೆ ಮಾಡಿದ ಹೊಸ ಕ್ರಿಕೆಟ್ ಫ್ರಾಂಚೈಸಿಯ ಹೆಡ್ ಕೋಚ್ ಆಗಿ ಮೊದಲ ಆವೃತ್ತಿಯಲ್ಲಿಯೇ ಐಪಿಎಲ್ ಕಪ್ ಗೆದ್ದ ಮೊದಲ ಭಾರತೀಯ ಕೋಚ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.

ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಅವರ ಕ್ರಿಕೆಟ್ ಜೀವನದ ಕುರಿತಂತೆ ಅಲ್ಲ ಬದಲಾಗಿ ಅವರ ಲವ್ ಸ್ಟೋರಿಯ ಕುರಿತಂತೆ. ಆಶಿಶ್ ನೆಹ್ರ 2009ರಲ್ಲಿ ರುಷ್ಮಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರನ್ನು ಮೊದಲ ಬಾರಿಗೆ 2002ರ ಇಂಗ್ಲೆಂಡಿನ ಓವೆಲ್ ನಲ್ಲಿ ಸರಣಿ ನಡೆಯುತ್ತಿದ್ದ ಸಂದರ್ಭದಲ್ಲಿ ಆಶಿಶ್ ನೆಹ್ರ ಭೇಟಿಯಾಗಿ ಪರಿಚಯವಾಗುತ್ತಾರೆ. ಅಲ್ಲಿಂದ ಬರೋಬ್ಬರಿ ಏಳು ವರ್ಷಗಳ ಕಾಲ ಕದ್ದು ಮುಚ್ಚಿ ಅವರಿಬ್ಬರು ಡೇಟಿಂಗ್ ನಡೆಸುತ್ತಾರೆ. 2009ರಲ್ಲಿ ಸ್ನೇಹಿತರೊಂದಿಗೆ ಕುಳಿತಿದ್ದ ಸಂದರ್ಭದಲ್ಲಿ ಆಶಿಶ್ ನೆಹ್ರ ಮದುವೆಯಾಗಬೇಕು ಎನ್ನುವ ಯೋಚನೆ ಮಾಡುತ್ತಾರೆ.

ಅವರೇ ಸ್ವತಹ ಖುದ್ದಾಗಿ ಸಂದರ್ಶನದಲ್ಲಿ ಹೇಳಿರುವಂತೆ ಮದುವೆ ಆಗುವ ನಿರ್ಧಾರವನ್ನು ಕೇವಲ 15 ನಿಮಿಷಗಳಲ್ಲಿ ಅವರು ತೆಗೆದುಕೊಂಡಿದ್ದರಂತೆ. ಇದನ್ನು ಮೊದಲಿಗೆ ರುಷ್ಮ ಅವರಿಗೆ ಹೇಳಿದಾಗ ಅವರು ಜೋಕ್ ಮಾಡುತ್ತಿದ್ದಾರೆ ಎಂಬುದಾಗಿ ಭಾವಿಸಿದ್ದರಂತೆ. ನಂತರ ಇದು ನಿಜವಾಗಿಯೂ ಹೇಳುತ್ತಿರುವ ವಿಚಾರ ಎಂಬುದಾಗಿ ತಿಳಿದ ನಂತರ ಅವರು ಕೂಡ ಮದುವೆಗೆ ಒಪ್ಪುತ್ತಾರೆ. ಒಪ್ಪಿದ ಎರಡು ವಾರದ ಒಳಗೆ 2009ರಲ್ಲಿ ದಿಲ್ಲಿಯಲ್ಲಿ ಇಬ್ಬರೂ ಕೂಡ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗುತ್ತಾರೆ. ಈ ದಂಪತಿಗಳಿಗೆ ಈಗ ಇಬ್ಬರು ಮಕ್ಕಳಿದ್ದಾರೆ.