ವಿಶ್ವಕಪ್ ನಿಂದ ಬುಮ್ರಾ ಹೊರ ಹೋಗುತ್ತಿದ್ದಂತೆ ಬುಮ್ರಾ ಸ್ಥಾನಕ್ಕೆ ಆರ್ಸಿಬಿ ಆಟಗಾರ?? ಇವನಂತು ಬೇಡವೇ ಬೇಡ ಎಂದ ನೆಟ್ಟಿಗರು. ಯಾರು ಗೊತ್ತೇ??

21

ನಮಸ್ಕಾರ ಸ್ನೇಹಿತರೇ ಒಂದು ಲೆಕ್ಕದಲ್ಲಿ ಹೇಳುವುದಾದರೆ ಭಾರತೀಯ ಕ್ರಿಕೆಟ್ ತಂಡದ ಗ್ರಹಚಾರವೇ ನೆಟ್ಟಗಿಲ್ಲ ಎಂದು ಹೇಳಬಹುದು. ಏಷ್ಯಾಕಪ್ ಕಿಂತ ಮುನ್ನವೇ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆಗಳು ಪ್ರಾರಂಭವಾಗಿದ್ದವು. ವಿಶ್ವ ಕಪ್ ಸಮೀಪಿಸುತ್ತಿದ್ದರು ಕೂಡ ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರ ಇಂಜುರಿ ಸಮಸ್ಯೆಗಳು ಕಡಿಮೆಯಾಗಿಲ್ಲ.

ಹೌದು ಮಿತ್ರರೇ, ಈಗ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ವೇಗಿ ಆಗಿರುವ ಜಸ್ಪ್ರೀತ್ ಬುಮ್ರಾ ಅಧಿಕೃತವಾಗಿ ಹೊರ ಬಿದ್ದಿದ್ದಾರೆ. ಬೆನ್ನಿನ ಫ್ರಾಕ್ಚರ್ ಸಮಸ್ಯೆಯಿಂದಾಗಿ ಬುಮ್ರ ಹೊರಬಿದ್ದಿರುವುದು ಈಗ ಭಾರತೀಯ ಕ್ರಿಕೆಟ್ ತಂಡಕ್ಕೆ ವಿಶ್ವಕಪ್ ನಂತಹ ಪ್ರಮುಖ ಟೂರ್ನಮೆಂಟ್ ನಲ್ಲಿ ನಿಜಕ್ಕೂ ತಲೆನೋ’ವಿನ ಸಮಸ್ಯೆಯಾಗಿದೆ. ಬುಮ್ರ ವಿಶ್ವ ಕಪ್ ತಂಡದಿಂದ ಹೊರ ಬೀಳುವುದು ಬಹುತೇಕ ಖಾತ್ರಿ ಆಗಿದ್ದು ಅವರ ಬದಲಿಗೆ ಆರ್‌ಸಿಬಿ ತಂಡದ ಬೌಲರ್ ಅನ್ನು ಕರೆತರುವ ಯೋಜನೆ ನಡೆಯುತ್ತಿದೆ ಎಂಬುದಾಗಿ ತೆರೆಮರೆಯಲ್ಲಿ ಕೇಳಿ ಬರುತ್ತಿದೆ. ಹೌದು ಗೆಳೆಯರೇ ಮೊಹಮ್ಮದ್ ಶಮ್ಮಿ ಹಾಗೂ ದೀಪಕ್ ಚಹಾರ್ ಅವರ ಜೊತೆಗೆ ಆರ್ ಸಿ ಬಿ ತಂಡದ ಸಿರಾಜ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರ ನಡೆಯುತ್ತಿದೆ.

ಈಗಾಗಲೇ ಸಿರಾಜ್ ಅವರು ಸಿಕ್ಕಿರುವ ಹಲವಾರು ಅವಕಾಶಗಳನ್ನು ಲಿಮಿಟೆಡ್ ಓವರ್ ಗಳ ಫಾರ್ಮೆಟ್ ನಲ್ಲಿ ಹಾಳು ಮಾಡಿಕೊಂಡಿದ್ದಾರೆ ಎನ್ನುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಿರಾಜ್ ಅವರನ್ನು ಆಯ್ಕೆ ಮಾಡುತ್ತಿರುವ ಸುದ್ದಿಯ ವಿರುದ್ಧವಾಗಿ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳಿಗೆ ಈಗಾಗಲೇ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು, ಒಂದು ವೇಳೆ ಬುಮ್ರಾ ವಿಶ್ವ ಕಪ್ ನಿಂದ ಹೊರ ಬೀಳುವುದು ಖಾತ್ರಿ ಆದರೆ ಖಂಡಿತವಾಗಿ ಸಿರಾಜ್ ತಂಡದ ಒಳ ಹೋಗುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.