ಮಹೇಶ್ ಬಾಬು ರವರ ಮನೆಗೆ ಹೋದ ಕಳ್ಳನಿಗೆ ಕಾಡಿತ್ತು ಶಾಕ್. ಸೂಪರ್ ಸ್ಟಾರ್ ಮನೆಯಲ್ಲಿ ಕದಿಯಲು ಹೋದಾಗ ಏನಾಗಿದೆ ಗೊತ್ತೆ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಮೊನ್ನೆಯಷ್ಟೇ ದೈವಾಧೀನರಾಗಿದ್ದಾರೆ. ಆದರೆ ಇದರ ಜೊತೆಗೆ ಅವರ ಮನೆಯಲ್ಲಿ ಇತ್ತೀಚಿಗಷ್ಟೇ ಒಂದು ಘಟನೆ ಕೂಡ ನಡೆದಿದ್ದು ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹೌದು ಇದೇ ಮಂಗಳವಾರ ರಾತ್ರಿಯ ಸಮಯದಲ್ಲಿ ಕೃಷ್ಣ ಎನ್ನುವ ಒಡಿಶಾ ಮೂಲದ ವ್ಯಕ್ತಿ ಮಹೇಶ್ ಬಾಬು ಅವರ ಮನೆಗೆ ಕನ್ನ ಹಾಕಲು ಬಂದಿದ್ದ. ಮಹೇಶ್ ಬಾಬು ಅವರ ಮನೆಗೆ ಕಳ್ಳತನ ಮಾಡಲು ಬಂದಿದ್ದ ಕೃಷ್ಣ ಮಾಡಿಕೊಂಡ ಅವಾಂತರ ಈಗ ದೊಡ್ಡ ಮಟ್ಟದಲ್ಲಿ ಸದ್ದಾಗಲು ಕಾರಣವಾಗುತ್ತಿದೆ. ಜುಬಿಲಿ ಹಿಲ್ಸ್ ನಲ್ಲಿರುವ ಮಹೇಶ್ ಬಾಬು ಅವರ 30 ಅಡಿ ಎತ್ತರದ ಕಾಂಪೌಂಡನ್ನು ಹತ್ತಿ ಕೃಷ್ಣ ಕೆಳಗೆ ಜಿಗಿದಿದ್ದಾನೆ. 30 ಅಡಿಯಿಂದ ಒಬ್ಬ ವ್ಯಕ್ತಿ ಕೆಳಗೆ ಬಿದ್ದರೆ ಏನಾಗುತ್ತದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೌದು ಗೆಳೆಯರೇ, ಕಾಂಪೌಂಡ್ ನಿಂದ ಕೆಳಗೆ ಬಿದ್ದ ಕೃಷ್ಣ ಕಾಲಿಗೆ ಏಟು ಮಾಡಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕೂಡಲೇ ಸೆಕ್ಯೂರಿಟಿ ಗಾರ್ಡ್ ಓಡಿಬಂದು ಈ ವಿಚಾರವನ್ನು ಅರಿತುಕೊಂಡು ಪೊಲೀಸರಿಗೆ ದೂರು ನೀಡಿದ್ದಾನೆ.

ಈಗಾಗಲೇ ಕೃಷ್ಣನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದ್ದು ಮುಂದಿನ ದಿನಗಳಲ್ಲಿ ಆತನನ್ನು ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಘಟನೆ ನಡೆದಿದ್ದು ಸಂದರ್ಭದಲ್ಲಿ ಆಶ್ಚರ್ಯ ಎನ್ನುವಂತೆ ಮಹೇಶ್ ಬಾಬು ಕೂಡ ಮನೆಯಲ್ಲೇ ಇದ್ದರಂತೆ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.