ಯಾರೇ ಆಗಲಿ ಪ್ರೀತಿಸಿ ಮದುವೆಯಾಗುವ ಮುನ್ನ ಯೋಚಿಸುವಂತೆ ಮಾಡಿದ ಪ್ರಕರಣ; ಅತ್ತೆ ಮನೆಯವರು ಈ ಹುಡುಗಿಗೆ ಏನು ಮಾಡಿದ್ದಾರೆ ಗೊತ್ತೇ??

64

ನಮಸ್ಕಾರ ಸ್ನೇಹಿತರೆ ಒಂದು ಕಾಲದಲ್ಲಿ ಮದುವೆಗೆ ಸಾಕಷ್ಟು ಪಾವಿತ್ರ್ಯತೆ ಹಾಗೂ ಮಾನ್ಯತೆ ಇತ್ತು. ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಣು ಮಗಳನ್ನು ತಮ್ಮ ಸ್ವಂತ ಮಗಳಂತೆ ಗಂಡನ ಮನೆಯವರು ಕಾಣುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಕೆಲವೊಂದು ಪ್ರಕರಣಗಳನ್ನು ನೋಡಿದರೆ ನಿಜಕ್ಕೂ ಕೂಡ ಕಲಿಯುಗ ಅಂತ್ಯವಾಗುತ್ತಿದೆಯೇನೋ ಎಂಬ ಅಭಿಪ್ರಾಯ ಮೂಡುವಂತೆ ಮಾಡುತ್ತದೆ. ವಾರಂಗಲ್ ನಲ್ಲಿ ನೂರ್ ಜಹಾನ್ ಎನ್ನುವ ಹುಡುಗಿ ತನ್ನ ಗಂಡನ ಮನೆಯಲ್ಲಿ ನೀಡಿರುವ ಕಿರುಕುಳವನ್ನು ಸೆಲ್ಫಿ ವಿಡಿಯೋ ಮಾಡುವುದರ ಮುಖಾಂತರ ತಿಳಿಸಿ ತನ್ನ ಜೀವವನ್ನು ತಾನೇ ತೆಗೆದುಕೊಳ್ಳಲು ಪ್ರಯತ್ನಿಸಿದ ಘಟನೆ ನಡೆದಿದೆ.

ಈಕೆ ಶರತ್ ಎನ್ನುವವನನ್ನು ಕುಟುಂಬದ ವಿರೋಧದ ನಡುವೆ ಕೂಡ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಳು. ಮದುವೆಯಾದ ಕೆಲವೇ ತಿಂಗಳ ನಂತರ ಅತ್ತೆ ನೂರ್ ಜಹಾನ್ ಳನ್ನು ವರದಕ್ಷಿಣೆ ತರುವಂತೆ ಪೀಡಿಸುತ್ತಾಳೆ. ಗಂಡ ಶರತ್ ಕೂಡ ತನ್ನ ಮನೆಯವರೊಂದಿಗೆ ಸೇರಿ ಹೆಂಡತಿಯನ್ನು ವರದಕ್ಷಿಣೆ ತರುವಂತೆ ಕಾಡುತ್ತಾನೆ. ಇದಾದ ನಂತರ ನೂರ್ ಜಹಾನ್ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಇದರ ಕುರಿತಂತೆ ದೂರು ನೀಡಿದಾಗಲೂ ಕೂಡ ಅವರು ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಹತಾಶೆಯಿಂದ ನೂರ್ ಜಹಾನ್ ಕೊನೆಗೆ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಾಳೆ.

ಹೌದು ಸೆಲ್ಫಿ ವಿಡಿಯೋ ಮಾಡಿ ನನ್ನ ಮರಣಕ್ಕೆ ನನ್ನ ಪತಿ ಹಾಗೂ ಅತ್ತೆ ಹಾಗೂ ಮಾವ ಕಾರಣ ಎಂಬುದಾಗಿ ಹೇಳಿದ್ದು, ನಾನು ಕೆಳ ಜಾತಿಯವಳು. ನನ್ನದು ಪ್ರೇಮ ವಿವಾಹ. ವರದಕ್ಷಿಣೆ ತೆಗೆದುಕೊಂಡು ಬಾ ಎಂಬುದಾಗಿ ಪ್ರತಿದಿನ ನನ್ನನ್ನು ಪೀಡಿಸುತ್ತಿದ್ದರು. ಇದರ ವಿರುದ್ಧ ದೂರ ನೀಡಲು ಮಹಿಳಾ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಲಂಚ ತೆಗೆದುಕೊಂಡು ನನ್ನ ದೂರನ್ನು ನಿರ್ಲಕ್ಷಿಸಿದರು. ಇದೇ ಕಾರಣಕ್ಕಾಗಿ ನನ್ನ ಕೊನೆಯ ಪ್ರಯತ್ನ ಎಂಬಂತೆ ನಾನು ಈಗ ಕೀಟನಾಶಕವನ್ನು ಸೇವಿಸಿ ಮರಣ ಹೊಂದುತ್ತಿದ್ದೇನೆ ಎಂಬುದಾಗಿ ಸೆಲ್ಫಿ ವಿಡಿಯೋದಲ್ಲಿ ರೆಕಾರ್ಡ್ ಮಾಡಿದ್ದಾಳೆ. ಸದ್ಯ ಆಕೆ ಗಂಭೀರ ಆರೋಗ್ಯ ಸ್ಥಿತಿಯನ್ನು ಹೊಂದಿದ್ದು ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಈ ವಿಡಿಯೋ ನೋಡಿದ ನಂತರ ಪೊಲೀಸ್ ತನಿಖೆ ಕೂಡ ಚುರುಕಾಗಿದೆ.