ಹಳೆ ದಿವ್ಯ ಉರುಡುಗ ಇನ್ನು ಹಂಗೆ ಇದ್ದಾರೆ, ಮತ್ತೊಮ್ಮೆ ಮನೆಯವರಿಗೆಲ್ಲ ಶಾಕ್ ಕೊಟ್ಟ ದಿವ್ಯ ಉರುಡುಗ. ಅವಿ ಇಲ್ಲದೆಯೇ ಇವರದ್ದೇ ಹವಾ. ಏನಾಗಿದೆ ಗೊತ್ತೇ??

23

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು ಪ್ರವೀಣರು ಹಾಗೂ ನವೀನರ ನಡುವೆ ಯಾರು ಗೆಲ್ಲುತ್ತಾರೆ ಎಂಬ ಜಿದ್ದಾಜಿದ್ದಿ ಈಗಾಗಲೇ ಟಾಸ್ಕ್ ಗಳ ಮೂಲಕ ಪ್ರಾರಂಭವಾಗಿದೆ. ಇನ್ನು ಈ ಬಾರಿ ಬಿಗ್ ಬಾಸ್ ಮನೆಗೆ ಕಳೆದ ಬಾರಿಯ ಬಿಗ್ ಬಾಸ್ ನ ಸ್ಪರ್ಧಿ ಆಗಿರುವ ದಿವ್ಯ ಉರುಡುಗ ಕೂಡ ಬಂದಿದ್ದು ಕಳೆದ ಬಾರಿಗಿಂತ ಈ ಬಾರಿ ಸಾಕಷ್ಟು ಸ್ಟ್ರಾಂಗ್ ಆಗಿದ್ದಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುವಂತೆ ಮಾಡಿದ್ದಾರೆ.

ಇದೇ ಸಪ್ಟೆಂಬರ್ 27ರ ಸಂಚಿಕೆಯಲ್ಲಿ ಮನೆ ಸದಸ್ಯರಿಗೆ ಒಂದು ಟಾಸ್ಕ್ ಅನ್ನು ನೀಡಲಾಗಿತ್ತು. ಆ ಟಾಸ್ಕ್ ಪ್ರಕಾರ ತ್ರಿಕೋನಾಕಾರದ ಬಾಕ್ಸ್ ಒಳಗೆ ಬಾಲ್ ಗಳನ್ನು ಪಿರಮಿಡ್ ರೀತಿಯಲ್ಲಿ ಜೋಡಿಸಬೇಕು. ಇದು ಜೋಡಿ ಟಾಸ್ಕ್ ಆಗಿದ್ದು ಮೊದಲಿಗೆ ಹೋದ ಅರುಣ್ ಸಾಗರ್ ಹಾಗೂ ನವಾಜ್ ಜೋಡಿ ಮತ್ತು ಆರ್ಯವರ್ಧನ್ ಗುರೂಜಿ ಹಾಗೂ ದರ್ಶ್ ಎರಡು ಜೋಡಿಗಳು ಕೂಡ ಈ ಟಾಸ್ಕ್ ಅನ್ನು ಸಂಪೂರ್ಣವಾಗಿ ಮಾಡಲಾರದೆ ಸೋತು ಹಿಂದಿರುಗಿತು. ಆದರೆ ದಿವ್ಯ ಉರುಡುಗ ಹಾಗೂ ಐಶ್ವರ್ಯ ಪಿಸೆ ಜೋಡಿ ಈ ಟಾಸ್ಕ್ ಅನ್ನು ಮಾಡಿದ ಪರಿ ನಿಜಕ್ಕೂ ಕೂಡ ಎಲ್ಲರೂ ಆಶ್ಚರ್ಯ ಪಡುವಂತಿತ್ತು.

ಹೌದು ಮಿತ್ರರೇ, ಇಬ್ಬರೂ ಕೂಡ ಈ ಟಾಸ್ಕ್ ಅನ್ನು ಕೆಲವೇ ನಿಮಿಷಗಳಲ್ಲಿ ಮುಗಿಸಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಇದನ್ನು ನೋಡಿರುವ ಬಿಗ್ ಬಾಸ್ ಪ್ರೇಕ್ಷಕರು ಕಳೆದ ಬಾರಿಗಿಂತ ಈ ಬಾರಿ ದಿವ್ಯ ಸಖತ್ ಸ್ಟ್ರಾಂಗ್ ಆಗಿದ್ದಾರೆ ಈ ಬಾರಿ ಅವರೇ ಗೆದ್ದೇ ಗೆಲ್ಲುತ್ತಾರೆ ಎಂಬುದಾಗಿ ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.