ಭಾರತದ ಡೇಂಜರಸ್ ಪ್ಲೇಯರ್ ಅನ್ನು ಆಯ್ಕೆ ಮಾಡಿದ ಆಸ್ಟ್ರೇಲಿಯಾ ಕೋಚ್: ಯರಂತೆ ಗೊತ್ತೇ?? ಕೊಹ್ಲಿ, ಪಾಂಡ್ಯ ಅಲ್ಲ. ಮತ್ಯಾರು ಗೊತ್ತೇ??

113

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 3 t20 ಪಂದ್ಯಗಳ ಸರಣಿಯನ್ನು ಅಧಿಕಾರಯುತವಾಗಿ ಗೆದ್ದುಕೊಂಡಿದೆ. ವಿಶ್ವ ಕಪ್ ಮುನ್ನ ಇದೊಂದು ಅತ್ಯುತ್ತಮ ಬೆಳವಣಿಗೆ ಆಗಿದೆ ಎಂದರು ತಪ್ಪಾಗಲಾರದು. ಇನ್ನು ರೋಹಿತ್ ಶರ್ಮ ನೇತೃತ್ವದ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ನಿನ್ನೆಯಷ್ಟೇ ಸೌತ್ ಆಫ್ರಿಕಾ ವಿರುದ್ಧ ಆಡಿರುವ ಮೊದಲ ಟಿ ಟ್ವೆಂಟಿ ಪಂದ್ಯವನ್ನೇ ಭಾರಿ ಅಂತರದಿಂದ ಗೆದ್ದುಕೊಂಡಿದೆ.

ಒಟ್ಟಾರೆಯಾಗಿ ಟೀಮ್ ಇಂಡಿಯಾ ನಡೆಸಿದ ಎಲ್ಲಾ ಪ್ರಯೋಗಗಳು ಈಗ ಕೊನೆಯ ಕ್ಷಣದಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ ಎನ್ನಬಹುದಾಗಿದೆ. ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಇತ್ತೀಚಿಗಷ್ಟೇ ಭಾರತದ ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಅತ್ಯಂತ ಅಪಾಯಕಾರಿ ಆಟಗಾರ ಯಾರು ಎಂಬುದನ್ನು ಹೆಸರಿಸಿದ್ದಾರೆ. ನೀವು ಅದು ವಿರಾಟ್ ಕೊಹ್ಲಿಯೋ ಅಥವಾ ರೋಹಿತ್ ಶರ್ಮ ಇಲ್ಲವೇ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನು ಹೇಳಿರಬಹುದು ಎನ್ನುವುದಾಗಿ ಅಂದುಕೊಂಡಿರಬಹುದು. ಇವರ್ಯಾರ ಹೆಸರನ್ನು ಕೂಡ ಆಸ್ಟ್ರೇಲಿಯಾ ಕೋಚ್ ಅಪಾಯಕಾರಿ ಆಟಗಾರನ ಹೆಸರಿನಲ್ಲಿ ಸೂಚಿಸಿಲ್ಲ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಪ್ರಕಾರ ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವ ಅತ್ಯಂತ ಅಪಾಯಕಾರಿ ಆಟಗಾರ ಎಂದರೆ ಅದು ಸೂರ್ಯಕುಮಾರ್ ಯಾದವ್.. ಇತ್ತೀಚಿನ ದಿನಗಳಲ್ಲಿ ತಂಡದಲ್ಲಿ ಅತ್ಯಂತ ಸಮತೋಲಿತ ಪ್ರದರ್ಶನವನ್ನು ನೀಡುತ್ತಿರುವ ಏಕೈಕ ಬ್ಯಾಟ್ಸ್ಮನ್ ಎಂದರೆ ಅದು ಸೂರ್ಯಕುಮಾರ್ ಯಾದವ್ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ತಮಗೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿರುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ನಲ್ಲಿ ಕೂಡ ಇದೇ ರೀತಿಯ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರೆಸಲಿ ಎಂಬುದಾಗಿ ಹಾರೈಸೋಣ.