ವೈರಲ್ ವಿಡಿಯೋ; ತನ್ನ ವಿದ್ಯಾರ್ಥಿನಿಯ ಬ್ಯಾಗ್ ಅನ್ನು ತೆರೆದ ಶಿಕ್ಷಕನಿಗೆ ಬಿಗ್ ಶಾಕ್; ಅಷ್ಟಕ್ಕೂ ಆ ಬ್ಯಾಗ್ ನಲ್ಲಿ ಏನಿತ್ತು ಗೊತ್ತೇ?
ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಪೋಸ್ಟ್ ಆಗುವಂತಹ ವಿಡಿಯೋಗಳು ವೈರಲ್ ಆಗುತ್ತವೆ. ಅದೇ ವೈರಲ್ ಆಗಿರುವ ಒಂದು ವಿಡಿಯೋ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತ ದೇಶದ ಹಲವಾರು ಪ್ರದೇಶಗಳಲ್ಲಿ ಈಗಲೂ ಕೂಡ ಬೆಂಬಿಡದಂತೆ ಮಳೆ ಸುರಿಯುತ್ತಿದೆ. ಈ ಸಂದರ್ಭದಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ನಾವು ಜಾಗೃತರಾಗಿರಬೇಕು ಎಂಬುದನ್ನು ಇಂದಿನ ಲೇಖನಿಯಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ವಿವರಿಸುತ್ತಾ ಹೇಳಲು ಹೊರಟಿದ್ದೇವೆ.
ಈ ಘಟನೆ ನಡೆದಿರುವುದು ಮಧ್ಯ ಪ್ರದೇಶದ ಬಡೋನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ. ಇದೇ ಸೆಪ್ಟೆಂಬರ್ 22ರಂದು ನಡೆದಿರುವ ಘಟನೆ ಇದಾಗಿದೆ. ಹತ್ತನೆಯ ತರಗತಿ ವಿದ್ಯಾರ್ಥಿನಿ ಆಗಿರುವ ಉಮಾ ರಜಾಕ್ ತನ್ನ ಶಾಲಾ ಚೀಲವನ್ನು ತೂಗು ಹಾಕಿಕೊಂಡು ತನ್ನ ಶಾಲೆಗೆ ಬರುತ್ತಾಳೆ. ಪುಸ್ತಕವನ್ನು ತೆಗೆಯಬೇಕು ಎನ್ನುವ ಕಾರಣಕ್ಕಾಗಿ ಶಾಲೆಯ ಚೀಲದ ಒಳಗೆ ಕೈ ಹಾಕಿದಾಗ ಮೃದುವಾದ ವಸ್ತು ಒಂದು ಕೈಗೆ ತಾಗುತ್ತದೆ. ಇದರಿಂದಾಗಿ ಕೊಂಚ ಗಲಿಬಿಲಿಗೊಂಡ ಆಕೆ ಶಿಕ್ಷಕರಿಗೆ ಈ ಕುರಿತಂತೆ ತಿಳಿಸುತ್ತಾಳೆ.

ಆಗ ಶಿಕ್ಷಕರು ಚೀಲದಲ್ಲಿರುವ ಪುಸ್ತಕವನ್ನೆಲ್ಲ ಕೊಡವುತ್ತಾರೆ, ಆಗ ಪುಸ್ತಕ ಎಲ್ಲಾ ಕೆಳಗೆ ಬೀಳುತ್ತದೆ ಆದರೆ ಚೀಲದ ಒಳಗಿದ್ದ ಆ ವಸ್ತು ಮಾತ್ರ ಕೆಳಗೆ ಬೀಳುವುದಿಲ್ಲ. ಇನ್ನೂ ಜೋರಾಗಿ ಚೀಲವನ್ನು ಕೊಡವಿದಾಗ ಚೀಲದ ಒಳಗಿದ್ದ ಕಪ್ಪು ಹಾವು ಕೆಳಗೆ ಬಿದ್ದು ಹೆಡೆ ಬಿಚ್ಚುತ್ತದೆ. ನಂತರ ಆ ಹಾವು ಕೂಡಲೇ ಅಲ್ಲಿಂದ ಪರಾರಿ ಯಾಗುತ್ತದೆ. ಇದನ್ನು ನೋಡಿ ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು ಕೂಡ ಗಾಬರಿಯಾಗುತ್ತಾರೆ. ಮಳೆಗಾಲದಲ್ಲಿ ಬೆಚ್ಚನೆಯ ಜಾಗವನ್ನು ಹುಡುಕಿಕೊಂಡು ಹಾವು ಸೇರಿದಂತೆ ಇನ್ನಿತರ ಪ್ರಾಣಿಗಳು ಕೂಡ ಈ ತರಹ ಚೀಲ ಸೇರಿದಂತೆ ಇನ್ನೂ ನಿಮಗೆ ಕೆಲವೊಂದು ಬೇಕಾದ ವಸ್ತುಗಳ ನಡುವೆ ಅವಿತು ಕುಳಿತುಕೊಳ್ಳಬಹುದು ಇದರ ಕುರಿತಂತೆ ಕೊಂಚಮಟ್ಟಿಗೆ ಜಾಗೃತೆ ವಹಿಸುವುದು ಒಳ್ಳೆಯದು.
कक्षा 10 की छात्रा कु. उमा रजक के बैग से, घर से स्कूल आकर जैसे ही बैग खोला तो छात्रा को कुछ आभाष हुआ तो शिक्षक से शिकायत की, कि बस्ते में अंदर कुछ है, छात्रा के बैग को स्कूल के बाहर ले जाकर खोला तो बैग के अंदर से एक नागिन बाहर निकली, यह घटना दतिया जिले के बड़ोनी स्कूल की है। pic.twitter.com/HWKB3nktza
— Karan Vashistha BJP 🇮🇳 (@Karan4BJP) September 22, 2022