ನಾಲ್ಕು ರಿವ್ಯೂ ಹೇಳಿ ಬಿಗ್ ಬಾಸ್ ಗೆ ಹೋಗಿರುವ ನವಾಜ್ ನಿಜವಾದ ಮತ್ತೊಂದು ಮುಖ ಅನೇಕರಿಗೆ ಗೊತ್ತಿಲ್ಲ. ಏನು ಗೊತ್ತೇ??

100

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಸೆಪ್ಟೆಂಬರ್ 24 ರಿಂದ ಹೊಸ ಬಿಗ್ ಬಾಸ್ ಸೀಸನ್ ಪ್ರಾರಂಭವಾಗಿದೆ. ಓಟಿಟಿ ಬಿಗ್ ಬಾಸ್ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗಿರುವುದು ಬಿಗ್ ಬಾಸ್ ಪ್ರೇಕ್ಷಕರಿಗೆ ನಿಜಕ್ಕೂ ಕೂಡ ಸಂತೋಷದ ಸುದ್ದಿಯಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾವೆಲ್ಲ ಸ್ಪರ್ಧಿಗಳು ಬಂದಿದ್ದಾರೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

ಅದರಲ್ಲೂ ವಿಶೇಷವಾಗಿ ಈಗ ಎಲ್ಲರ ಗಮನ ಸೆಳೆಯುತ್ತಿರುವುದು ಪ್ರಾಸ ಪದದಲ್ಲಿ ರಿವ್ಯೂ ಹೇಳುವ ಮೂಲಕ ಎಲ್ಲರ ಮನೆಗೆದ್ದಿರುವ ಸೈಕ್ ನವಾಜ್. ಇದೇನಿದು ಕೇವಲ ರಿವ್ಯೂ ಹೇಳುವ ಮೂಲಕ ಬಿಗ್ ಬಾಸ್ ಗೆ ಅವನನ್ನು ಕರೆಸಿಕೊಂಡಿದ್ದಾರೆ ಎಂಬುದಾಗಿ ನೀವು ಅಂದುಕೊಂಡಿರಬಹುದು ಆದರೆ ಆತನ ಜೀವನದಲ್ಲಿ ಆತನ ಧ್ಯೇಯಗಳು ಹಾಗೂ ಈಗಾಗಲೇ ಆತ ಮಾಡಿರುವ ಕೆಲಸ ನಿಜಕ್ಕೂ ಕೂಡ ಆತನ ಇನ್ನೊಂದು ಮುಖವನ್ನು ಜನರಿಗೆ ಪರಿಚಯ ಮಾಡಿಸುತ್ತದೆ. ಇದಕ್ಕೂ ಮುನ್ನ ಆತ ಯಾರಿಗೂ ಆರೋಗ್ಯ ಏರುಪೇರಾಗಿದ್ದು ಎನ್ನುವ ಕಾರಣಕ್ಕಾಗಿ ಅವರ ಸಹಾಯಕ್ಕಾಗಿ ಪೋಸ್ಟ್ ಮಾಡಿದ್ದ. ಅದರಿಂದ ಸಿಕ್ಕಿದ 15 ಸಾವಿರ ರೂಪಾಯಿಗಳನ್ನು ಅವರಿಗೆ ಹೋಗಿ ನೀಡಿದ್ದ.

ನವಾಜ್ ಹೇಳುವ ಪ್ರಕಾರ ಆತನಿಗೆ ಧರ್ಮಗಳ ನಡುವಿನ ಅಂತರ ತಿಳಿದಿಲ್ಲ. ಆತ ಹಸಿವಾದಾಗ ತನ್ನ ಹಿಂದೂ ಸ್ನೇಹಿತರ ಮನೆಗೆ ಹೋಗಿ ಊಟ ಮಾಡಿದ್ದು ಹೆಚ್ಚು ಎಂಬುದಾಗಿ ಹೇಳುತ್ತಾನೆ. ಕೇವಲ ಇಷ್ಟೇ ಮಾತ್ರವಲ್ಲದೆ ಆತ ಹನುಮಂತನ ದೇವಸ್ಥಾನಕ್ಕೂ ಹೋಗುತ್ತಾನೆ, ಸಾಯಿಬಾಬನ ದೇವಸ್ಥಾನಕ್ಕೂ ಹೋಗುತ್ತಾನೆ, ಚರ್ಚ್ ಗೆ ಹೋಗಿ ಕೂಡ ಪ್ರಾರ್ಥಿಸುತ್ತಾನೆ ಹಾಗೂ ಮಸೀದಿಗೆ ಹೋಗಿ ನಮಾಜ್ ಕೂಡ ಮಾಡುತ್ತಾನೆ ಎಂಬುದಾಗಿ ಹೇಳುತ್ತಾನೆ. ಕೇವಲ ಸಿನಿಮಾ ರಿಲೀಸ್ ಆದಾಗ ರಿವ್ಯೂ ಹೇಳುವ ನವಾಜ್ ಬಗ್ಗೆ ಎಲ್ಲರಿಗೂ ಗೊತ್ತಿದೆ, ಆದರೆ ಆತ ನಿಜ ಜೀವನದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಹೇಗೆ ಸಾರುತ್ತಾನೆ ಎಂಬುದರ ಕುರಿತಂತೆ ಬಿಗ್ ಬಾಸ್ ಮನೆಯಲ್ಲಿ ನೋಡಬಹುದಾಗಿದೆ ಎಂದು ಹೇಳಬಹುದಾಗಿದೆ. ನವಾಜ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.