ಪಂದ್ಯ ಗೆಲ್ಲಿಸಿಕೊಟ್ಟವರೇ ಔಟ್. ಭಾರತಕ್ಕೆ ಮುಂದಿನ ಆಫ್ರಿಕಾ ಸರಣಿಗೂ ಮುನ್ನವೇ ಬಿಗ್ ಶಾಕ್. ಹೊರಹೋಗಿದ್ದು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 2 ಹಾಗೂ 1 ಅಂತರದಿಂದ ಗೆದ್ದು ಬೀಗಿದ್ದು ಮುಂದಿನ ಸರಣಿಯನ್ನು ಸೌತ್ ಆಫ್ರಿಕಾ ತಂಡದ ವಿರುದ್ಧ ಆಡಲಿದೆ. ಇನ್ನು ಸೌತ್ ಆಫ್ರಿಕಾ ವಿರುದ್ಧ 3 ಟಿ 20 ಪಂದ್ಯಗಳ ಸರಣಿ ಇದೇ ಸೆಪ್ಟೆಂಬರ್ 28 ರಿಂದ ಪ್ರಾರಂಭವಾಗಲಿದೆ. ಇನ್ನು ಇಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡವನ್ನು ರೋಹಿತ್ ಶರ್ಮ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ.
ಆದರೆ ಆಶ್ಚರ್ಯ ಏನೆಂದರೆ ಈ ಬಾರಿ ತಂಡದಲ್ಲಿ ಇಬ್ಬರು ಪ್ರಮುಖ ಸ್ಟಾರ್ ಆಟಗಾರರು ವಿಶ್ರಾಂತಿಯನ್ನು ಪಡೆದು ತಂಡದಿಂದ ಹೊರ ಹೋಗಲಿದ್ದಾರೆ. ಹಾಗಿದ್ದರೆ ತಂಡದಿಂದ ಸೌತ್ ಆಫ್ರಿಕಾ ಸರಣಿಗೂ ಮುನ್ನವೇ ಹೊರ ಹೋಗಿರುವ ಆಟಗಾರರು ಯಾರು ಹಾಗೂ ಅವರ ಬದಲಿಗೆ ತಂಡವನ್ನು ಸೇರಿರುವ ಆಟಗಾರ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಸೌತ್ ಆಫ್ರಿಕಾ ಸರಣಿಗೂ ಮುನ್ನವೇ ತಂಡದಿಂದ ಪ್ರಮುಖ ಸ್ಟಾರ್ ಆಲ್ ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ ಹಾಗೂ ದೀಪಕ್ ಹೂಡ ಇಬ್ಬರು ಕೂಡ ವಿಶ್ರಾಂತಿ ಹಾಗೂ ಫಿಟ್ನೆಸ್ ದೃಷ್ಟಿಯಿಂದ ತಂಡದಿಂದ ಹೊರ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ಹಾರ್ದಿಕ್ ಪಾಂಡ್ಯ ಅವರ ಸ್ಥಾನಕ್ಕೆ ತಂಡದಲ್ಲಿ ಆರ್‌ಸಿಬಿ ತಂಡದ ಆಲ್ರೌಂಡರ್ ಒಬ್ಬರು ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೌದು ಆರ್ಸಿಬಿ ತಂಡದ ಸ್ಟಾರ್ ರೌಂಡರ್ ಆಗಿರುವ ಶಾಬಾಜ್ ಅಹ್ಮದ್ ಹಾರ್ದಿಕ್ ಪಾಂಡ್ಯ ಅವರ ಬದಲಾಗಿ ತಂಡಕ್ಕೆ ಸೇರಿಕೊಂಡರೆ, ಇನ್ನು ದೀಪಕ್ ಹೂಡ ಅವರ ಬದಲಾಗಿ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇರಿಕೊಂಡಿದ್ದಾರೆ. ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಗೆದ್ದಿರುವ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.