ತಮ್ಮ ನೆಚ್ಚಿನವರನ್ನು ಉಳಿಸಿಕೊಳ್ತಾರೆ, ಉಳಿದವರನ್ನು ಹೊರಗೆ ಹಾಕ್ತಾರೆ ಎಂದು ಬಿಗ್ ಬಾಸ್ ನ ಮತ್ತೊಂದು ಮುಖ ಬಿಚ್ಚಿಟ್ಟ ಕಿರುತೆರೆ ನಟಿ. ಹೇಳಿದ್ದೇನು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ವಿದೇಶದಲ್ಲಿ ಬಿಗ್ ಬ್ರದರ್ ಎನ್ನುವ ರಿಯಾಲಿಟಿ ಶೋ ಪ್ರಾರಂಭವಾಗಿತ್ತು. ಇದು ಭಾರತದ ಕಿರುತರಿಗೆ ಕಾಲಿಟ್ಟು ಬಿಗ್ ಬಾಸ್ ಎನ್ನುವ ನಾಮವನ್ನು ಪಡೆದಿತ್ತು. ಮೊದಲ ಬಾರಿಗೆ ಹಿಂದಿಗೆ ಕಾಲಿಟ್ಟ ಬಿಗ್ ಬಾಸ್ ಈಗ ಕೇವಲ ಹಿಂದಿಯಲ್ಲಿ ಮಾತ್ರವಲ್ಲದೆ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಕೂಡ ಪ್ರಸಾರ ಆಗುತ್ತಿದೆ. ಕಿರುತೆರೆಯ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಎಂಬ ಹೆಸರುವಾಸಿಗೆ ಕಾರಣವಾಗಿರುವ ಈ ರಿಯಾಲಿಟಿ ಶೋ ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮ ಎಂದರೆ ತಪ್ಪಾಗಲಾರದು.

ಹಿಂದಿಯಲ್ಲಿ ಬಿಗ್ ಬಾಸ್ ಅನ್ನು ಸಲ್ಮಾನ್ ಖಾನ್, ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ತಮಿಳಿನಲ್ಲಿ ಕಮಲ್ ಹಾಸನ್ ಹಾಗೂ ತೆಲುಗಿನಲ್ಲಿ ನಾಗಾರ್ಜುನ ರವರು ನಿರೂಪಕರಾಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಈಗ ಈ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಖ್ಯಾತ ನಟಿ ಒಬ್ಬರು ದೊಡ್ಡಮಟ್ಟದ ಆರೋಪವನ್ನು ಹೊರಿಸುವ ಮೂಲಕ ಬಿಗ್ ಬಾಸ್ ಕಾರ್ಯಕ್ರಮದ ಕುರಿತಂತೆ ಎಲ್ಲರೂ ಕೂಡ ಅನುಮಾನದ ದೃಷ್ಟಿಯಿಂದ ನೋಡಿಕೊಳ್ಳುವಂತಾಗಿದೆ. ಕರಿಯ ಸಿನಿಮಾದಲ್ಲಿ ನಟಿಸಿದ್ದ ಅಭಿನಯಶ್ರೀ ಈ ಬಾರಿಯ ತೆಲುಗು ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ತೆಲುಗು ಬಿಗ್ ಬಾಸ್ ಅನ್ನು ಅಕ್ಕಿನೇನಿ ನಾಗಾರ್ಜುನ ರವರ ನಡೆಸಿಕೊಡುತ್ತಿದ್ದಾರೆ. ಈ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ನಟಿ ಅಭಿನಯಶ್ರೀ ದೊಡ್ಡಮಟ್ಟದ ಆರೋಪವನ್ನು ಮಾಡಿದ್ದಾರೆ.

ಅದೇನೆಂದರೆ ಬಿಗ್ ಬಾಸ್ ಅವರಿಗೆ ಬೇಕಾಗಿರುವ ಸ್ಪರ್ಧಿಗಳನ್ನು ಮಾತ್ರ ಮನೆಯಲ್ಲಿ ಉಳಿಸಿಕೊಳ್ಳುತ್ತಿದೆ, ಅಭಿಮಾನಿಗಳು ಮಾಡುವ ವೋಟಿಂಗ್ ಎಲ್ಲಾ ಬೋಗಸ್ ಎಂಬುದಾಗಿ ಅಭಿನಯಶ್ರೀ ಹೇಳಿದ್ದಾರೆ. ನಾನು ಬಿಗ್ ಬಾಸ್ ನಲ್ಲಿ ಇದ್ದಂತಹ ಬಹುತೇಕ ಎಲ್ಲಾ ಫೂಟೇಜ್ ಗಳನ್ನು ಕೂಡ ಬಿಗ್ ಬಾಸ್ ಪ್ರಸಾರ ಮಾಡಿಲ್ಲ ಎಂಬುದಾಗಿ ಕೂಡ ಆರೋಪವನ್ನು ಮಾಡಿದ್ದಾರೆ. ಒಟ್ಟಾರೆಯಾಗಿ ವಾಹಿನಿಯವರು ತಮಗೆ ಬೇಕಾದವರನ್ನು ಮಾತ್ರ ಸೇವ್ ಮಾಡುತ್ತಾರೆ ಎಂಬುದಾಗಿ ಅಭಿನಯಶ್ರೀ ಹೇಳಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ವಾಹಿನಿ ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.