ಆರ್ಯವರ್ಧನ್ ಗುರೂಜಿಗೆ ಮತ್ತೊಂದು ಶಾಕ್ ಕೊಟ್ಟ ಪ್ರಶಾಂತ್ ಸಂಭರ್ಗಿ: ಸತ್ಯ ಬಯಲಿಗೆಳೆಯಲು ಸಿದ್ದವಾದ ಪ್ರಶಾಂತ್. ಏನಾಗಿದೆ ಗೊತ್ತೇ?

16

ನಮಸ್ಕಾರ ಸ್ನೇಹಿತರೇ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಕಿರುತರೆ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಪ್ರಾರಂಭಗೊಂಡಿದೆ. ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭಗೊಂಡಿರುವ ಬೆನ್ನಲ್ಲೇ ಮನೆಯಲ್ಲಿ ಆರೋಪ ಪ್ರತ್ಯಾರೋಪಗಳು ಕೂಡ ಪ್ರಾರಂಭವಾಗಿವೆ. ಇನ್ನು ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿ ಕೂಡ ಈ ಬಾರಿಯ ಬಿಗ್ ಬಾಸ್ ನಲ್ಲಿ ಮತ್ತೆ ಆಗಮಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಆಗಮಿಸಿದ ಬೆನ್ನಲ್ಲೇ ಮತ್ತೆ ಅವರ ಲಾ ಪಾಯಿಂಟ್ ಮಾತುಗಳನ್ನು ಆಡಲು ಪ್ರಾರಂಭಿಸಿದ್ದಾರೆ. ಹೌದು ಆರ್ಯವರ್ಧನ ಗುರೂಜಿ ಅವರ ವಿರುದ್ಧ ಯಾರಿಗೂ ತಿಳಿಯದಂತಹ ಸತ್ಯವನ್ನು ಪ್ರಶಾಂತ್ ಸಂಬರ್ಗಿ ಈಗ ಬಿಗ್ ಬಾಸ್ ಮನೆಯಲ್ಲಿ ಬಯಲು ಮಾಡಿದ್ದಾರೆ. ಸಾಮಾನ್ಯವಾಗಿ ನಿಮಗೆ ಆರ್ಯವರ್ಧನ್ ಗುರೂಜಿ ಟಿವಿ ಮಾಧ್ಯಮಗಳಲ್ಲಿ ಸಂಖ್ಯಾ ಶಾಸ್ತ್ರದ ಬಗ್ಗೆ ಭವಿಷ್ಯ ಹೇಳುತ್ತಾ ಟ್ರೋಲ್ ಆಗುತ್ತಿರುವುದನ್ನು ನೀವು ನೋಡಿರುತ್ತೀರಿ. ಆದರೆ ಈಗ ಪ್ರಶಾಂತ್ ಸಂಬರ್ಗಿ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಲ್ಲೇ ಆರ್ಯವರ್ಧನ್ ಗುರೂಜಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆರ್ಯವರ್ಧನ್ ಗುರೂಜಿ ಮಾತಿನ ಭರದಲ್ಲಿ ತಪ್ಪಾಗಿ ಸಂಬರ್ಗಿ ಎನ್ನುವ ಬದಲು ಸಂಪಂಗಿ ಎನ್ನುತ್ತಾರೆ.

ಇದಕ್ಕೆ ಚರ್ಚೆಯನ್ನು ಪ್ರಾರಂಭಿಸಿದ ಪ್ರಶಾಂತ್ ಸಂಬರ್ಗಿ ನಿಮ್ಮ ನಿಜವಾದ ಹೆಸರು ಆರ್ಯವರ್ಧನ್ ಅಲ್ಲ ಸರ್ಕಾರಿ ದಾಖಲೆಯಲ್ಲಿ ನಿಮ್ಮ ಹೆಸರು ಏನಿದೆ ಅಂತ ಸುದೀಪ್ ಅವರಿಗೆ ಹೇಳ್ಲಾ ಎನ್ನುವುದಾಗಿ ಹೇಳುತ್ತಾರೆ. ಅದಕ್ಕೆ ಮುಂದುವರೆದು ಆರ್ಯವರ್ಧನ್ ಗುರೂಜಿ ನನ್ನ ನಿಜವಾದ ಹೆಸರು ಸುಬ್ರಮಣ್ಯ ಎನ್ನುವುದಾಗಿ ಹೇಳುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಅಲ್ಲಿಗೆ ಮುಗಿದಿದ್ದರೂ ಕೂಡ ಬಿಗ್ ಬಾಸ್ ಮನೆಯ ಹೊರಗೆ ನೆಟ್ಟಿಗರಲ್ಲಿ ಮಾತ್ರ ಇದರ ಕುರಿತಂತೆ ಚರ್ಚೆಗಳು ಇನ್ನಷ್ಟು ಹೆಚ್ಚಿವೆ. ಈಗಾಗಲೇ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಆರಂಭವಾಗಿದೆ. ನವೀನರು ಹಾಗು ಪ್ರವೀಣರ ನಡುವೆ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.