ಇಬ್ಬರು ಬೆಳ್ಳಗಿದ್ದೇವೆ ಮಗು ಮಾತ್ರ ಕಪ್ಪಾಗಿದೆ ಎಂದ ಗಂಡ: ಹೀಗೆ ಆರಂಭವಾದ ಜಗಳದ ಬಳಿಕ ಅದೆಂತಹ ಘಟನೆ ನಡೆದಿತ್ತು ಗೊತ್ತೇ?? ಮಗು ಬಾಯ್ಬಿಟ್ಟ ಸತ್ಯವೇನು ಗೊತ್ತೇ??

109

ನಮಸ್ಕಾರ ಸ್ನೇಹಿತರೆ ಒಂದು ಸಂಬಂಧದಲ್ಲಿ ಅತ್ಯಂತ ಪ್ರಮುಖವಾಗಿ ಬೇಕಾಗಿರುವುದು ನಂಬಿಕೆ. ಪರಸ್ಪರ ನಂಬಿಕೆ ಇದ್ದರೆ ಮಾತ್ರ ಆ ಜೀವನ ಎನ್ನುವುದು ಸುಮಧುರವಾಗಿ ಸಾಗುತ್ತದೆ. ಆದರೆ ಇನ್ನೊಬ್ಬ ಆಸಾಮಿ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಕೂಡ ಬಿಳಿಯಾಗಿದ್ದೇವೆ ಆದರೆ ಮಗು ಮಾತ್ರ ಕಪ್ಪು ಬಣ್ಣದಾಗಿದೆ ಎಂಬುದಾಗಿ ಹೆಂಡತಿಯ ಮೇಲೆ ಸಂಶಯ ಪಟ್ಟು ಮಾಡಿರುವ ಕಾರ್ಯ ಈಗ ದೊಡ್ಡ ಸುದ್ದಿ ಮಾಡುತ್ತಿದೆ.

ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಕಾಕಿನಾಡದಲ್ಲಿ. ಈ ಕಥೆಯ ಕೇಂದ್ರ ಬಿಂದುಗಳು ಮಾಣಿಕ್ ಘೋಷ್ ಹಾಗೂ ಆತನ ಪತ್ನಿ ಲಿಪಿಕಾ ಮಂಡಲ್. ಹಲವಾರು ವರ್ಷಗಳ ಹಿಂದೆ ಈ ದಂಪತಿಗಳು ಮದುವೆಯಾಗಿ ಕಾಕಿನಾಡಗೆ ಕೆಲಸಕ್ಕೆ ಎಂದು ಬಂದಿದ್ದರು. ಎರಡುವರೆ ವರ್ಷಗಳ ಹಿಂದೆ ಇವರಿಬ್ಬರಿಗೂ ಒಂದು ಹೆಣ್ಣು ಮಗು ಜನಿಸಿತ್ತು. ಮಗು ಕಪ್ಪಾಗಿತ್ತು. ದಂಪತಿಗಳಿಬ್ಬರೂ ಕೂಡ ಬೆಳ್ಳಗಿದ್ದರು ಮಗು ಯಾಕೆ ಕಪ್ಪಾಗಿ ಹುಟ್ಟಿದೆ ಎಂಬುದಾಗಿ ಗಂಡ ಪದೇ ಪದೇ ಹೆಂಡತಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಹೋದ ಹೆಂಡತಿ ತವರಿಗೆ ವಾಪಸ್ ಆಗಿದ್ದರು, ನಂತರ ಮನೆಯವರು ಇಬ್ಬರು ನಡುವೆ ರಾಜಿ ಮಾಡಿಸಿದ್ದರು.

ಇದೇ ತಿಂಗಳ 18ನೇ ತಾರೀಕಿನಂದು ಹೆಂಡತಿ ಲಿಪಿಕಾ ಮೋರ್ಚ ತಪ್ಪಿ ಬಿದ್ದಿದ್ದಾಳೆ ಎಂದು ಕಾರಣ ಒಡ್ಡಿ ಆಕೆಯನ್ನು ಆಸ್ಪತ್ರೆಗೆ ಗಂಡ ಸೇರಿಸಿದ್ದ. ಆದರೆ ಆಕೆಯ ಕತ್ತಿನಲ್ಲಿದ್ದ ಕಲೆಗಳು ಬೇರೆಯದೇ ಕಥೆಯನ್ನು ಹೇಳಲು ಆರಂಭಿಸಿದ್ದವು. ಇದಾದ ನಂತರ ಅಮ್ಮ ತೀರಿ ಹೋಗಿದ್ದ ಸಂದರ್ಭದಲ್ಲಿ ತಮ್ಮ ಅಜ್ಜ ಹಾಗೂ ಅಜ್ಜಿಯ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಮ್ಮನ ಕುತ್ತಿಗೆಯನ್ನು ಅಪ್ಪ ಒತ್ತಿ ಹಿಡಿದಿದ್ದರು ಎಂಬುದಾಗಿ ಮಗು ಹೇಳಿದ್ದು ಇದನ್ನು ಅರಿತ ಕೂಡಲೇ ತಾಯಿಯ ಪೋಷಕರು ಕೂಡಲೇ ಪೊಲೀಸ್ ದೂರನ್ನು ದಾಖಲಿಸಿದ್ದಾರೆ. ಸದ್ಯಕ್ಕೆ ಈಗಾಗಲೇ ವಿಚಾರಣೆ ಚುರುಕುಗೊಂಡಿದ್ದು ಅತಿ ಶೀಘ್ರದಲ್ಲೇ ಆರೋಪಿಗೆ ಶಿಕ್ಷೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ಅನುಮಾನ ಎನ್ನುವುದು ಎಷ್ಟೆಲ್ಲ ದೊಡ್ಡ ಅನಾಹುತಕ್ಕೆ ಕಾರಣವಾಗಿದೆ ಎಂಬುದನ್ನು ನೀವೇ ನೋಡಬಹುದಾಗಿದೆ.