ಸೂರ್ಯ ಕುಮಾರ್ ರವರು ಬ್ಯಾಟ್ ಮಾಡಿದ ರೀತಿ ನೋಡಿ ಕಿಂಗ್ ಕೊಹ್ಲಿಯೇ ಶಾಕ್. ಪಂದ್ಯ ಮುಗಿದ ಬಳಿಕ ಕೊಹ್ಲಿ ಹೇಳಿದ್ದೇನು ಗೊತ್ತೇ?

7,995

ನಮಸ್ಕಾರ ಸ್ನೇಹಿತರೆ ನಿನ್ನೆಯಷ್ಟೇ ಹೈದರಾಬಾದ್ ನಲ್ಲಿ ನಡೆದಿರುವ ಮೂರನೇ ಟಿ20 ಪಂದ್ಯ ಈಗಾಗಲೇ ಮುಗಿದಿದ್ದು ಭಾರತ ತಂಡ ಈ ಕ್ರಿಕೆಟ್ ಸರಣಿಯನ್ನು ಗೆಲ್ಲಲು ಯಶಸ್ವಿಯಾಗಿದೆ. ಬಲಾಡ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ರೋಚಕವಾಗಿ ಗೆಲುವನ್ನು ಸಾಧಿಸಿದರು ಕೂಡ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ರವರ ಬ್ಯಾಟಿಂಗ್ ಪಾರ್ಟ್ನರ್ ಶಿಪ್ ಮಾತ್ರ ಅಧಿಕಾರಯುತವಾಗಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ರವರು ಕೇವಲ 38 ಎಸೆತಗಳಲ್ಲಿ ಬರೋಬ್ಬರಿ 69 ರನ್ನುಗಳನ್ನು ಬಾರಿಸಿದ್ದರು. ಇನ್ನು ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಅವರು 48 ಎಸೆತಗಳಿಂದ 63 ರನ್ನುಗಳನ್ನು ಬಾರಿಸಿದರು. ಭಾರತದ ಗೆಲುವಿನಲ್ಲಿ ಈ ಇಬ್ಬರು ಆಟಗಾರರ ಕೊಡುಗೆ ಸಿಂಹ ಪಾಲನ್ನು ಹೊಂದಿದೆ ಎಂದು ತಪ್ಪಾಗಲಾರದು. ಎಲ್ಲದಕ್ಕಿಂತ ಪ್ರಮುಖವಾಗಿ ಪಂದ್ಯ ಮುಗಿದ ನಂತರ ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಅನ್ನು ಹೊಗಳುತ್ತಾ ಹೇಳಿರುವ ಮಾತುಗಳು ನಿಜಕ್ಕೂ ಕೂಡ ಶ್ಲಾಘನೀಯ. ಕಳೆದ ಆರು ತಿಂಗಳಿಂದ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಕೂಡ ಅತ್ಯುತ್ತಮ ಸ್ಥರದಲ್ಲಿದೆ. ಆ ರೀತಿಯ ಶೈಲಿಯ ಬ್ಯಾಟಿಂಗ್ ಪ್ರದರ್ಶನವನ್ನು ನೀಡುವುದು ಅವರಿಗೆ ಮಾತ್ರ ತಿಳಿದಿರುವ ವಿದ್ಯೆ ಎಂಬುದಾಗಿ ಕೊಹ್ಲಿ ಹೇಳಿದ್ದಾರೆ.

ಕೇವಲ ಎಷ್ಟು ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ಯಾವುದೇ ಸ್ಥಾನದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಕೂಡ ಬ್ಯಾಟಿಂಗ್ ಮಾಡಲು ಹೇಳಿದರೆ, ಅದನ್ನು ಪರಿಪೂರ್ಣವಾಗಿ ನಿಭಾಯಿಸುವ ಸಾಮರ್ಥ್ಯ ಸೂರ್ಯ ಕುಮಾರ್ ಯಾದವ್ ಅವರ ಬಳಿ ಇದೆ ಎಂಬುದಾಗಿ ಮನಸಾರೆ ವಿರಾಟ್ ಕೊಹ್ಲಿ ಅವರು ಸೂರ್ಯ ಕುಮಾರ್ ಯಾದವ್ ಅವರ ಬಗ್ಗೆ ಹೊಗಳಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ವಿರುದ್ಧ ಟಿ ಟ್ವೆಂಟಿ ಸರಣಿಯನ್ನು ಮುಗಿಸಿರುವ ಭಾರತೀಯ ಕ್ರಿಕೆಟ್ ತಂಡ ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಸೌತ್ ಆಫ್ರಿಕಾ ವಿರುದ್ಧ ಟಿ-20 ಸರಣಿಯನ್ನು ತವರಿನಲ್ಲಿ ಆಡಲಿದೆ.