51 ವರ್ಷ ಆದರೂ ಚಿರ ಯುವತಿಯಂತೆ ಕಾಣುವ ತಬು ರವರು ಬಳಸುವ ಫೇಸ್ ಕ್ರೀಮ್ ಬೆಲೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

11

ನಮಸ್ಕಾರ ಸ್ನೇಹಿತರೆ ಅಂದಿನ ಕಾಲದಿಂದಲೂ ಕೂಡ ಚಿತ್ರರಂಗದಲ್ಲಿ ನಾಯಕನಟಿಗಾಗಿ ಕಾಣಿಸಿಕೊಂಡ ಬಂದ ನಟಿಯರಲ್ಲಿ ಇಂದಿಗೂ ಅತ್ಯಂತ ಹೆಚ್ಚು ಜನಪ್ರಿಯರಾಗಿ ಉಳಿದುಕೊಂಡ ನಟಿಯರು ವಿರಳಾತಿ ವಿರಳ ಎಂದು ಹೇಳಬಹುದು. ಆದರೆ ಅವರಲ್ಲಿ ನಟಿ ತಬು ಮಾತ್ರ ವಿಶೇಷ ಎಂದು ಹೇಳಬಹುದಾಗಿದೆ. ಸಾಮಾನ್ಯವಾಗಿ ನೀವು ಗಮನಿಸಿದಂತೆ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ತಬು ಪೋಷಕ ಪಾತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ಕೆಲವೊಂದು ಸಿನಿಮಾಗಳಲ್ಲಿ ನಾಯಕಿಯ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿರುವುದು ವಿಶೇಷವಾಗಿದ್ದು ಅವರಿಗೆ ವಯಸ್ಸು 50 ದಾಟಿದೆ ಎಂಬುದನ್ನು ಊಹಿಸಲು ಕೂಡ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ಸೌಂದರ್ಯ ವತಿಯಾಗಿದ್ದಾರೆ. ಇಂದಿಗೂ ಕೂಡ ಚಿತ್ರರಂಗದಲ್ಲಿ ತಬು ಅವರಿಗೆ ಬೇಡಿಕೆ ಎನ್ನುವುದು ಟಾಪ್ ಲೆವೆಲ್ ನಲ್ಲಿದೆ. ಹದಿಹರೆಯದ ಯುವತಿಯಂತೆ ಕಾಣುವ ರಹಸ್ಯವನ್ನು ಕೂಡ ನಟಿ ತಬು ಬಿಚ್ಚಿಟ್ಟಿದ್ದಾರೆ. ಯೂಟ್ಯೂಬ್ ಚಾನಲ್ ಒಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ನಾನು ಸೌಂದರ್ಯಕ್ಕಾಗಿ ಹೆಚ್ಚಿನ ಕ್ರೀಮ್ ಅಥವಾ ಫೇಸ್ ವಾಶ್ ಮಾಡಿಕೊಳ್ಳಲು ಹೋಗುವುದಿಲ್ಲ. ಆದರೆ ಒಮ್ಮೆ ಅವರು ಬಳಸಿರುವ ಫೇಸ್ ಕ್ರೀಂ ಬಗ್ಗೆ ಈ ಸಂದರ್ಭದಲ್ಲಿ ಅವರು ಹೇಳುತ್ತಾರೆ.

ಒಮ್ಮೆ ಮಾತ್ರ ಆ ಫೇಸ್ ಕ್ರೀಮ್ ಅನ್ನು ಅವರು ಖರೀದಿಸಿ ಬಳಸಿದ್ದರಂತೆ. ಹೌದು ಗೆಳೆಯರೆ ನಟಿ ತಬು ಅವರು ಬಳಸಿರುವ ಆ ದುಬಾರಿ ಫೇಸ್ ಕ್ರೀಮ್ ನ ಬೆಲೆ ಬರೋಬ್ಬರಿ ಐವತ್ತು ಸಾವಿರ ರೂಪಾಯಿ. ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಲ್ಚಲ್ ಸೃಷ್ಟಿಸಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.