ಈ ಬಾರಿಯ ಬಿಗ್ ಬಾಸ್ ಗೆಲ್ಲುವ ಭರವಸೆ ಮೂಡಿಸಿ ಎಂಟ್ರಿ ಕೊಟ್ಟಿರುವ ನೇಹಾ ಹಾಗೂ ವಿನೋದ್ ರವರ ವಿಶೇಷತೆಗಳು ಏನು ಗೊತ್ತೇ??
ನಮಸ್ಕಾರ ಸ್ನೇಹಿತರೆ ಅಂತೂ ಇಂತೂ ಕಿರುತೆರೆ ಅತ್ಯಂತ ದೊಡ್ಡ ಹಾಗು ಶ್ರೀಮಂತ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡದ ಸೀಸನ್ 9 ನಿನ್ನೆಯಿಂದ ಪ್ರಾರಂಭವಾಗಿದ್ದು ಇನ್ನೇನಿದ್ದರೂ ಕಿರುತೆರೆಯ ಪ್ರೇಕ್ಷಕರಿಗೆ ಮನರಂಜನೆಯ ಮೇಲೆ ಮನೋರಂಜನೆ ಸಿಗುವುದಕ್ಕೆ ಏನು ಅಡ್ಡಿ ಇಲ್ಲ. ಈ ಬಾರಿ ವಿವಿಧ ಕ್ಷೇತ್ರಗಳಿಂದ ವಿವಿಧ ಖ್ಯಾತನಾಮ ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರಲ್ಲಿ ಮಜಾ ಭಾರತ ಖ್ಯಾತಿಯ ವಿನೋದ್ ಗೊಬ್ಬರಗಾಲ ಹಾಗೂ ಕಿರುತೆರೆಯ ಜನಪ್ರಿಯ ನಟಿ ಆಗಿರುವ ನೇಹಾ ಗೌಡ ಕೂಡ ಇದ್ದಾರೆ.
ಮೊದಲಿಗೆ ಮಜಾ ಭಾರತ ಕಾರ್ಯಕ್ರಮದ ಮೂಲಕ ಕಿರುತೆರೆಯ ಪ್ರೇಕ್ಷಕರ ನಗುವಿಗೆ ಕಾರಣವಾಗಿರುವ ವಿನೋದ್ ಗೊಬ್ಬರಗಾಲ ಅವರ ಬಗ್ಗೆ ಮಾತನಾಡುವುದಾದರೆ ಅವರೇ ಹೇಳುವಂತೆ ಚಿಕ್ಕವಯಸ್ಸಿನಲ್ಲಿ ಅವರು ಹಳ್ಳಿ ಮೇಷ್ಟ್ರು ಸಿನಿಮಾದ ಕಪ್ಪೆರಾಯನಂತೆ ಇದ್ದರಂತೆ. ಇದಕ್ಕಾಗಿ ಅವರನ್ನು ಎಲ್ಲರೂ ಕೂಡ ರೇಗಿಸುತ್ತಿದ್ದರು ಆದರೆ ಅದೇ ಅವರಿಗೆ ಅಭ್ಯಾಸವಾಗಿ ಹೋಗಿ ಈಗ ಅದರ ಬಗ್ಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲವಂತೆ. ಸದ್ಯಕ್ಕೆ ಕಿಚ್ಚ ಸುದೀಪ್ ಅವರು ಕೂಡ ಬಿಗ್ ಬಾಸ್ ಮನೆಗೆ ಹೋಗುವ ಮೊದಲ ಒಂದು ಟಾಸ್ಕ್ ನೀಡಿದ್ದು ವಿಟಿಯ ಬಗ್ಗೆ ಕಿಚನ್ ಗೆ ಕರೆದುಕೊಂಡು ಹೋಗಿ ಬೇರೆ ಸ್ಪರ್ಧಿಗಳ ಬಳಿ ಕೇಳಿ ತಿಳಿದುಕೊಳ್ಳಬೇಕು ಎನ್ನುವುದಾಗಿ ಹೇಳಿದ್ದಾರೆ.

ಕನ್ನಡ ಕಿರುತೆರೆಯ ಧಾರವಾಹಿಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಪ್ರತಿಯೊಬ್ಬ ಕಿರುತೆರೆ ಪ್ರೇಕ್ಷಕನ ಮನೆ ಮಂದಿಯ ಮನೆ ಮಾತಾಗಿರುವ ನಟಿ ಆಗಿರುವ ನೇಹಾ ಗೌಡ ಎಲ್ಲರ ನೆಚ್ಚಿನ ಗೊಂಬೆ ಆಗಿ ಈಗಾಗಲೇ ಎಲ್ಲರಿಗೂ ಕಾಣಿಸಿಕೊಂಡಿದ್ದಾರೆ. ನಿಜ ಜೀವನದಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದು ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ತಿಳಿದು ಬರಲಿದೆ ಎಂಬುದಾಗಿ ಹೇಳಬಹುದಾಗಿದೆ. ಈ ಇಬ್ಬರು ಸ್ಪರ್ಧಿಗಳ ಮೇಲೆ ಈಗ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆದರೂ ಕೂಡ ತಪ್ಪಾಗಲಾರದು.