ಗಂಡ ಪ್ರೀತಿ ಮಾಡಿದ ಎಂದು ತಾನೇ ನಿಂತು ಮದುವೆ ಮಾಡಿಸಿದ ಮಹಿಳೆ, ಈಗ ಎಂತಹ ನಿರ್ಧಾರ ಮಾಡಿದ್ದಾಳೆ ಗೊತ್ತೆ??

527

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿರುವ ಸುದ್ದಿಯೊಂದರ ಬಗ್ಗೆ ನಿಮಗೆಲ್ಲರಿಗೂ ವಿವರವಾಗಿ ತಿಳಿಸಲು ಹೊರಟಿದ್ದೇವೆ. ನಾವು ಮಾತನಾಡುತ್ತಿರುವುದು ತಿರುಪತಿಯ ಅಂಬೇಡ್ಕರ್ ನಗರದ ನಿವಾಸಿ ಆಗಿರುವ ಕಲ್ಯಾಣ್ ಅವರ ಬಗ್ಗೆ. ಕಲ್ಯಾಣ್ ಅವರು ಈಗಾಗಲೇ ಯೂಟ್ಯೂಬ್ ಹಾಗೂ ಶೇರ್ ಚಾಟ್ಸ್ ನಲ್ಲಿ ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಸಾಕಷ್ಟು ಜನಪ್ರಿಯ ರಾಗಿದ್ದರು.

ಇದರ ಮೂಲಕವೇ ವಿಮಲಾ ಎಂಬಾಕೆಯ ಪರಿಚಯವಾಗಿ ಕಳೆದ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಕೂಡ ಆಗಿದ್ದರು. ಇಬ್ಬರೂ ಕೂಡ ವಿಡಿಯೋಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ನೆಚ್ಚಿನ ಜೋಡಿಯಾಗಿದ್ದರು. ಕೆಲವು ಸಮಯಗಳ ನಂತರ ಕಲ್ಯಾಣ್ ವಿಶಾಖಪಟ್ಟಣಂ ಮೂಲದ ನಿತ್ಯ ಎನ್ನುವ ಹುಡುಗಿಯನ್ನು ಪ್ರೀತಿಸಲು ಪ್ರಾರಂಭಿಸುತ್ತಾನೆ ಇದರ ಬದಲಾವಣೆಯ ಅರಿವು ವಿಮಲಾಳಿಗೂ ಕೂಡ ತಿಳಿದು ಬರುತ್ತದೆ. ಕೆಲವೇ ಸಮಯಗಳಲ್ಲಿ ಕಲ್ಯಾಣ ಬೇರೆಯಾಗಿ ಬದುಕಲು ಪ್ರಾರಂಭಿಸುತ್ತಾನೆ. ಇದೇ ಸಂದರ್ಭದಲ್ಲಿ ವಿಮಲಾಳ ಬಳಿ ನಿತ್ಯ ಕಲ್ಯಾಣನನ್ನು ಮದುವೆಯಾಗಲು ಪರ್ಮಿಷನ್ ಕೇಳುತ್ತಾಳೆ ಹಾಗೂ ಮದುವೆಯಾದ ನಂತರ ಒಟ್ಟಿಗೆ ಜೀವಿಸೋಣ ಎಂಬುದಾಗಿ ಕೂಡ ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ.

ಸ್ವಲ್ಪ ಸಮಯ ಯೋಚಿಸಿದ ನಂತರ ವಿಮಲಾ ತಾನೇ ಮುಂದೆ ನಿಂತು ತನ್ನ ಗಂಡ ಕಲ್ಯಾಣ ಹಾಗೂ ನಿತ್ಯಾಳ ಮದುವೆಯನ್ನು ಮಾಡಿಸಿಕೊಡುತ್ತಾಳೆ. ಈಗ ಇವರ ಮದುವೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು ಮೂವರು ಕೂಡ ಒಂದೇ ಮನೆಯಲ್ಲಿ ಸಂಸಾರ ಮಾಡುತ್ತಿದ್ದಾರೆ ಎನ್ನುವುದು ಎಲ್ಲಾ ಕಡೆ ಸುದ್ದಿ ಆಗುತ್ತಿದೆ.