ಮೊದಲ ಬಾರಿಗೆ ಆರ್ಸಿಬಿ ಅಭಿಮಾನಿಗಳ ವರ್ತನೆಗೆ ಬೇಸರಗೊಂಡ ಕೊಹ್ಲಿ: ಆರ್ಸಿಬಿ ಫ್ಯಾನ್ಸ್ ಮಾಡಿದ್ದೇನು ಗೊತ್ತೇ?? ಕೊಹ್ಲಿ ಮತ್ತೊಮ್ಮೆ ಗೆದ್ದರು ಮನ

51

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ನಾಗಪುರದಲ್ಲಿ ನಡೆದಿರುವ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿರುದ್ಧ ಅಧಿಕಾರಯುತವಾಗಿ ಗೆಲುವನ್ನು ಸಾಧಿಸಿದೆ. ನಿನ್ನೆ ನಡೆದಿರುವ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಪರವಾಗಿ ಬೌಲಿಂಗ್ ನಲ್ಲಿ ಅಕ್ಷರ್ ಪಾಟೀಲ್ ಹಾಗೂ ಬ್ಯಾಟಿಂಗ್ ನಲ್ಲಿ ರೋಹಿತ್ ಶರ್ಮಾ ಅತ್ಯದ್ಭುತ ಪ್ರದರ್ಶನವನ್ನು ನೀಡಿದ್ದಾರೆ.

ಇದರ ನಡುವಲ್ಲಿಯೇ ವಿರಾಟ್ ಕೊಹ್ಲಿ ಅವರು ಕೂಡ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ಪಂದ್ಯ ಮಳೆಯ ಕಾರಣದಿಂದಾಗಿ ಸ್ವಲ್ಪ ಸಮಯಗಳ ಕಾಲ ತಡವಾಗಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಹರ್ಷಲ್ ಪಟೇಲ್ ಹಾಗೂ ವಿರಾಟ್ ಕೊಹ್ಲಿ ಸೇರಿದಂತೆ ಚಹಾಲ್ ಅವರನ್ನು ಕೂಡ ಒಟ್ಟಿಗೆ ನೋಡಿದ ಆರ್‌ಸಿಬಿ ತಂಡದ ಅಭಿಮಾನಿಗಳು ” ಆರ್ ಸಿ ಬಿ ಆರ್ ಸಿ ಬಿ ” ಎನ್ನುದಾಗಿ ಕಿರುಚಲು ಪ್ರಾರಂಭಿಸುತ್ತಾರೆ.

ಇದನ್ನು ನೋಡಿದ ವಿರಾಟ್ ಕೊಹ್ಲಿ ಅವರು ತಮ್ಮ ಜರ್ಸಿ ಮೇಲಿರುವ ಭಾರತೀಯ ಕ್ರಿಕೆಟ್ ತಂಡದ ಚಿಹ್ನೆಯನ್ನು ಆ ಅಭಿಮಾನಿಗಳಿಗೆ ತೋರಿಸಿ ಭಾರತೀಯ ಕ್ರಿಕೆಟ್ ತಂಡಕ್ಕೆ ಜಯ ಘೋಷವನ್ನು ಹಾಕಿ ಎಂಬುದಾಗಿ ಹೇಳುತ್ತಾರೆ. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು ಎಲ್ಲರೂ ಕೂಡ ವಿರಾಟ್ ಕೊಹ್ಲಿ ರವರು ತೋರಿರುವ ಸಮಯಪ್ರಜ್ಞೆ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮೇಲಿರುವ ಪ್ರೀತಿ ಗೌರವಗಳನ್ನು ಹೊಗಳಿ ಕೊಂಡಾಡಿದ್ದಾರೆ. ಕೊಹ್ಲಿ ಅವರು ಹೀಗೆ ತೋರಿಸಿದ ನಂತರ ಆರ್‌ಸಿಬಿ ಎಂದು ಕಿರುಚುತ್ತಿದ್ದ ಅಭಿಮಾನಿಗಳು ಕೂಡ ಟೀಮ್ ಇಂಡಿಯಾದ ಜಯಗೋಷವನ್ನು ಹಾಕುವಲ್ಲಿ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.