ಯುವ ದಸರಾ ಗೆ ರಂಗು ನೀಡಲು ಉದ್ಘಾಟನೆ ಕಾರ್ಯಕ್ರಮಕ್ಕೆ ಬರಲು ಸುದೀಪ್ ಒಪ್ಪಿಗೆ. ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಅತೀ ಶೀಘ್ರದಲ್ಲೇ ಜಗದ್ವಿಖ್ಯಾತ ದಸರ ಸಂಭ್ರಮ ಪ್ರಾರಂಭವಾಗಲಿದೆ. ಮೈಸೂರು ದಸರಾ ವನ್ನು ನೋಡಲು ದೇಶ ವಿದೇಶಗಳ ಮೂಲೆ ಮೂಲೆಯಿಂದಲೂ ಓಡೋಡಿ ಸಾಗರದಂತೆ ಆಗಮಿಸುತ್ತಾರೆ.
ಇನ್ನು ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ಯುವ ದಸರಾ ಎನ್ನುವ ಸಾಂಸ್ಕೃತಿಕ ಹಾಗೂ ಮನೋರಂಜನಾತ್ಮಕ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ಈ ಬಾರಿ ಕೂಡ ಯುವ ದಸರ ಕಾರ್ಯಕ್ರಮದ ಆರಂಭ ಇದೇ ಸೆಪ್ಟೆಂಬರ್ 27 ರಂದೀ ಪ್ರಾರಂಭವಾಗಲಿದ್ದು ಅಕ್ಟೋಬರ್ 3 ರವರೆಗೆ ನಡೆಯಲಿದೆ ಎಂಬುದಾಗಿ ಅಧಿಕೃತವಾಗಿ ತಿಳಿದುಬಂದಿದೆ. ಇನ್ನು ಈ ಬಾರಿಯ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಗಾಯಕರಾಗಿರುವ ವಿಜಯ್ ಪ್ರಕಾಶ್, ಮಂಗ್ಲಿ, ಅಮಿತ್ ತ್ರಿವೇದಿ, ಸುನಿಧಿ ಚೌಹಾಣ್, ಗುರುಕಿರಣ್ ಹಾಗೂ ಕುನಾಲ್ ರವರು ಕೂಡ ಭಾಗವಹಿಸಲಿದ್ದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗಾನ ನಮನವನ್ನು ಸಲ್ಲಿಸಲಿದ್ದಾರೆ. ಇನ್ನೂ ಹಲವಾರು ಕನ್ನಡ ಚಿತ್ರರಂಗದ ಕಲಾವಿದರು ಕೂಡ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಅದರಲ್ಲಿಯೂ ವಿಶೇಷವಾಗಿ ಈ ಕಾರ್ಯಕ್ರಮವನ್ನು ನಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಉದ್ಘಾಟಿಸಲಿದ್ದಾರೆ. ಇನ್ನು ಈ ಕಾರ್ಯಕ್ರಮ ಆಗಮಿಸಲು ಭರ್ಜರಿ 4 ಕೋಟಿ ರೂಪಾಯಿ ಹಣವನ್ನು ಪಡೆದು ಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನೀವು ಕೂಡ ಈ ಬಾರಿಯ ದಸರಾ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಇಚ್ಛೆಯನ್ನು ಹೊಂದಿದ್ದರೆ ತಪ್ಪದೇ.ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.